ಸರ್ಕಾರಿ ಕಾರ್ಯಕ್ಕೆ ಅಡತಡೆ ಉಂಟುಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲು: ಡಿಸಿ

ವಿಜಯಪುರ ಮೇ.13: ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ ಆಗುವ ಜನರನ್ನು ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಯಾರಾದರೂ ಅಡೆತಡೆ ಉಂಟುಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.

ಅದರಂತೆ ಈಚೆಗೆ ವಿಜಯಪುರ ತಾಲೂಕಿನ ಮಹಾಲ್ ಐನಾಪೂರ ತಾಂಡಾದಲ್ಲಿ ಬೇರೆ ರಾಜ್ಯಗಳಿಂದ ಹಲವಾರು ಜನರು ಆಗಮಿಸಿದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲು ಉದ್ದೇಶ ಹೊಂದಲಾಗಿ ಶಾಲೆಯಲ್ಲಿ ಕಡಿಮೆ ಸ್ಥಳಾವಕಾಶ ಇದ್ದುದರಿಂದ ಸಮುದಾಯ ಭವನವನ್ನು ಕ್ವಾರಂಟೈನ್ಗಾಗಿ ಪಡೆಯುವ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರೊಬ್ಬರು ಅಧಿಕಾರಿಗಳಿಗೆ ಅಡ್ಡಿಪಡಿಸುವ ಜೊತೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವುದರಿಂದ ಫೀಯರ್ಾದಿ ದಾಖಲಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಅದರಂತೆ ಐಪಿಸಿ 333 ರನ್ವಯ ಪ್ರಕರಣ ಸಹ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಗೆ ಮಹಾರಾಷ್ಟ್ರ, ರಾಜಸ್ಥಾನ, ವಿವಿಧ ರಾಜ್ಯಗಳಿಂದ ಬಂದಿರುವವರನ್ನು ಗ್ರಾಮ ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ ಕ್ವಾರಂಟೈನ್ಗೆ ಕ್ರಮ ಕೈಗೊಳ್ಳಲಾಗಿದೆ. ಸಕರ್ಾರದ ನಿಯಮಾವಳಿಯಂತೆ ಕೊರೋನಾ ರೋಗ ಹರಡದಂತೆ ಮುಂಜಾಗ್ರತೆ ವಹಿಸುವ ಉದ್ದೇಶದಿಂದ ಕ್ವಾರಂಟೈನ್ ಮಾಡಲಾಗುತ್ತಿದೆ. 

     ಈಗ ಬೇರೆ ರಾಜ್ಯಗಳಿಂದ ಬರುತ್ತಿರುವ ಜನರು ನಮ್ಮವರೇ ಆಗಿರುವುದರಿಂದ ಕಡ್ಡಾಯವಾಗಿ ಕ್ವಾರಂಟೈನ್ ಮಾಡಿ ಕೋವಿಡ್-19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪುವೆಸಗದ ಜನರಿಗೆ ಈ ರೀತಿ ಕ್ವಾರಂಟೈನ್ಗೆ ಅಡ್ಡಿಪಡಿಸುವುದು ಸರಿಯಲ್ಲ. ಸಾರ್ವಜನಿಕರೆಲ್ಲರು ಬಂದ ಇಮತಹ ಜನರಿಗೆ ಅನುಕೂಲವಾಗಬೇಕು. ಹೊರತು ಅನಾನುಕೂಲವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದ್ದು, ಕ್ವಾರಂಟೈನ್ ಸಂದರ್ಭದಲ್ಲಿ ಯಾವುದೇ ರೀತಿಯ ಅಡತಡೆ ಉಂಟುಮಾಡಿದ್ದಲ್ಲಿ ಅಂತಹವರ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

          ಬುಧವಾರ ಸಂಜೆ ಕೋವಿಡ್-19 ರೋಗದಿಂದ ಗುಣಮುಖರಾದ ಒರ್ವ ಗಭರ್ಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, 21 ವರ್ಷ ವಯೋಮಾನದ ಮಹಿಳೆ ರೋಗಿ ಸಂಖ್ಯೆ;401 ಬಿಡುಗಡೆ ಹೊಂದಿದ್ದಾರೆ. ಒಂಭತ್ತು ತಿಂಗಳ ತುಂಬು ಗಭರ್ಿಣಿಯಾಗಿದ್ದ ಈ ಮಹಿಳೆಗೆ ಪರಿಣಾಮಕಾರಿ ಚಿಕಿತ್ಸೆ ಮೂಲಕ ಗುಣಪಡಿಸಿರುವುದು ತಜ್ಞ ವೈದ್ಯರ ಸಾಧನೆಯಾಗಿದೆ. ಇನ್ನುಳಿದ 14 ಕೋವಿಡ್-19 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಪರಿಣಾಮಕಾರಿ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

        ಜಿಲ್ಲೆಯಲ್ಲಿ ಈವರೆಗೆ 52 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 35 ಜನ ಕೋವಿಡ್-19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಂದು ಮೇ.13 ರಂದು ಇಬ್ಬರಿಗೆ ಕೋವಿಡ್ ಸೋಂಕು ತಗಲಿದ್ದು ರೋಗಿ ಸಂಖ್ಯೆ - 944 (30 ವರ್ಷ ಪುರುಷ) ಹಾಗೂ ರೋಗಿ ಸಂಖ್ಯೆ 945 (18 ವರ್ಷದ ಯುವಕ) ಇವರು ಮಹಾರಾಷ್ಟ್ರದ ಮುಂಬೈ ಜಿಲ್ಲೆಯಿಂದ ಆಗಮಿಸಿದ್ದು, ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ. ನಗರದ ನಿಗದಿತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

       ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 2212 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 799 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 1376 ಜನರು ರಿಪರ್ೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ಮೂರು ಜನ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. 

     35 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆ ಹೊಂದಿದ್ದು, 14 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 2638 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 2504 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 82 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಿಂದ ಗುಣಮುಖ ರೋಗಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಎಸ್.ಎ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಬಿರಾದಾರ, ಡಾ. ಇಂಗಳೆ, ಅಜೀತ ಕೊಟ್ನಿಸ, ಶಾಂತಾ ಆರ್, ಶೋಭಾ ನ್ಯಾಮಗೌಡರ್, ಸುಜಾತಾ ಕೊಟ್ಟಲಗಿ, ರೇವಣಸಿದ್ದ ಸಮಗಾರ, ಲಕ್ಷೀ ಬಿರಾದಾರ, ಪ್ರಕಾಶ ಕುರುನಲ್, ಲಕ್ಕಪ್ಪ ಕರಜಗಿ, ಎಸ್,ಎಲ್ ಖಜಾಪುರ, ಶಶಿಧರ ಅಮೊಗಿ ಕಾಲೇಬಾಗ, ಸಂದೀಪ ವಿಭೂತಿ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಇದ್ದರು.'