ಲೋಕದರ್ಶನ ವರದಿ
ಬೈಲಹೊಂಗಲ 28: ಮನುಷ್ಯನಲ್ಲಿರುವ ದುಘರ್ುನ, ಅಜ್ಞಾನ ದೂರವಾಗಬೇಕಾದರೆ ಮಹಾತ್ಮರ ಸತ್ಸಂಗದ ಒಲುವು ತೋರುವುದು ಅತೀ ಅವಶ್ಯವಾಗಿದೆ ಎಂದು ಹಂಪಿ ಹೇಮಕೂಟದ ಶಿವರಾಮ ಅವಧೂತ ಆಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು.
ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ 80ನೇ ಜಯಂತ್ಯೋತ್ಸವ, 50ನೇ ವರ್ಷದ ಪೀಠಾರೋಹಣ, 50ನೇ ಅಖಿಲ ಭಾರತ ವೇದಾಂತ್ ಪರಿಷತ್ತಿನ ಸುವರ್ಣ ಮಹೋತ್ಸವ ಅಂಗವಾಗಿ ದಿ.27ರಂದು ನಡೆದ ಕ್ಷಣ ಸಜ್ಜನ ಸಂಗತಿರೇಖಾ ವಿಷಯ ಕುರಿತು ಮಾತನಾಡಿದರು.
ಸಂಸ್ಥಾರ ಎನ್ನುವುದು ಸಮುದ್ರಂತೆ. ಈ ಭವ ಸಾಗರವನ್ನು ನಾವು ದಾಟಬೇಕಾದರೆ ಸತ್ಸಂಗ ಎನ್ನುವ ದೋನಿಯನ್ನು ಬಳಸಬೇಕು. ಸತ್ಸಂಗದಲ್ಲಿ ಬಂದರೆ ಜನ್ಮಾಂತರದಲ್ಲಿ ಮಾಡಿದಂತ ಪಾಪ, ಕರ್ಮಗಳನ್ನು ಸಕಲ ಪಾಪಗಳನ್ನು ಕಳೆದು ಹೋಗುತ್ತವೆ. ಸಾಧು, ಸಜ್ಜನರ ಸಂಘ ಮಾಡಿದರೆ ಮನುಷ್ಯನ ಮನಸ್ಸು ಹಗುರವಾಗಿ ಪ್ರಸನ್ನವಾಗುತ್ತಾರೆ. ಸಾಧು, ಸಂತರ ಅಮೃತವಾಣಿ ಆಲಿಸುವುದರಿಂದ ಜೀವನ ಪಾವನಗೊಳ್ಳುತ್ತದೆ. ಅನೇಕ ಕೊಲೆ, ಸೂಲಿಗೆ, ದುಷ್ಯಕೃತ್ಯೆಗಳನ್ನು ಮಾಡುತ್ತಿದ್ದ ಅಂಗೂಲಿ ಮಾಲಾ ಬುದ್ಧನ ದರ್ಶನದಿಂದ ಜೀವನ ಪರಿವರ್ತನೆ ಆಯಿತು. ಅವನೊಬ್ಬ ಮಹಾನ ಸಂತನಾಧ, ಬುದ್ಧನ ಅನುಯಾಯಿ ಆದ. ಹೀಗೆ
ಈ ಭವ ಸಾಗರ ದಾಟಬೇಕಾದರೆ ಸತ್ಸಂಗದ ಅವಶ್ಯಕತೆ ಇದೆ. ಅದನ್ನು ನಾಡಿನ ಜನತೆಗೆ ಕಳೆದ 50 ವಷಗಳಿಂದ ವೇದಾಂತ್ ಪರಿಷತ್ತಿನ ಮೂಲಕ ಜನರಲ್ಲಿ ಆಧ್ಯಾತ್ಮಿಕ ಮನೋಭಾವದ ಬೀಜ ಬಿತ್ತುತ್ತಿರುವ ಡಾ.ಶಿವಾನಂದ ಭಾರತಿ ಸ್ವಾಮೀಜಿಗಳವರ ಕಾರ್ಯ ಅತ್ಯಂತ ಅವಿಸ್ಮರಣೀಯವಾಗಿದೆ ಎಂದರು.
ಆಂದ್ರ ಪ್ರದೇಶ ಪಾಲಕೊಲ್ಲು ಷಣ್ಮುಖಾನಂದ ಆಶ್ರಮದ ಜ್ಯೋತಿರ್ಮಯಾನಂದ ಮಾತಾಜಿ ನೇತೃತ್ವವಹಿಸಿ ಮಾತನಾಡಿ, ಮಾನವ ಜನ್ಮ ಸಾರ್ಥಕವಾಗಬೇಕಾದರೆ ಸಂತರ, ಮಹಾತ್ಮರ, ಶಿವಯೋಗಿಗಳ, ಸೂಪಿ ಸಂತರ ಅಮೃತವಾಣಿಗಳನ್ನು ಆಲಿಸಬೇಕು. ಜ್ಞಾನದಲ್ಲಿ ಅಮೃತದ ಶಿಲೆಗಳಿರುತ್ತವೆ. ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕಾದರೆ ಆಧ್ಯಾತ್ಮದ ಒಲುವು ಬೆಳೆಸಬೇಕು. ಡಾ.ಶಿವಾನಂದ ಭಾರತಿ ಶ್ರೀಗಳು ಸಾಕ್ಷಾತ್ ಭಗವಂತನ ಅವತಾರಿಯಾಗಿದ್ದಾರೆ. ಅವರು ನೂರಾರು ವರ್ಷ ಬಾಳಿ ಭಕ್ತರನ್ನು ಆಶೀರ್ವದಿಸಲೆಂದು ಹಾರೈಸಿದರು.
ಹುಬ್ಬಳ್ಳಿ ರಾಮಾನಂದ ಸ್ವಾಮೀಜಿ, ಕಾಶಿಯ ರಾಜರಾಜೇಶ್ವರಿಮಠದ ಆಚಾರ್ಯ ದಿವೈಚೈತನ್ಯಾಜೀ ಮಹಾರಾಜ ಮಾತನಾಡಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ ನೇತೃತ್ವವಹಿಸಿದ್ದರು. ದೇಶದ ವಿವಿಧ ಮಠಾಧೀಶರು, ಸಾಧುಗಳು, ಸಂತರು, ಮಹಾತ್ಮರು, ಮಾತೆಯರು ಸಾನ್ನಿಧ್ಯವಹಿಸಿದ್ದರು. ಇದೇ ವೇಳೆ ಪಕ್ಷಪಾತ ರಹಿತ ಅನುಭವ ಪ್ರಕಾಶ ಗ್ರಂಥ ಬಿಡುಗಡೆ, ಶ್ರೀಗಳ ಕಿರೀಟಧಾರಣೆ, ಗಣ್ಯರ ಸತ್ಕಾರ ನಡೆಯಿತು. ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ, ಶಿವಗೊಂಡ ಧರ್ಮಟ್ಟಿ, ಬಸವರಾಜ ಜನ್ಮಟ್ಟಿ ಹಾಗೂ ಸಹಸ್ರಾರು ಸದ್ಭಕ್ತರು ಇದ್ದರು.