ಲೋಕದರ್ಶನವರದಿ
ಶಿಗ್ಗಾವಿ ೧೫: ನಾವು ಮಾಡುವ ಧಾನ ಮುಂದೊಂದು ದಿನ ಯಾವುದೋ ರೂಪದಲ್ಲಿ ನಮಗೆ ಮರಳಿ ಸಹಾಯ ಮಾಡುತ್ತದೆ, ದಾನ ಮಾಡಲು ಬೇಕಾಗಿರುವುದು ನಿಶ್ವಾರ್ಥ ಮನಸ್ಸು, ಆ ಮನಸ್ಸು ಎಲ್ಲರದಾಗಿರಲಿ ಎಂದು ಶಿಗ್ಗಾವಿಯ ಗಣ್ಯವ್ಯಕ್ತಿ ಶಂಕರಗೌಡ್ರ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ನಳಂದ ಶಾಲೆಯಲ್ಲಿ ನಳಂದಾ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ನಳಂದಾ ಸಂಸ್ಥೆ ಮತ್ತು ಶಾಲೆಗೆ ದಾನ ಸಲ್ಲಿಸಿದ ದಾನಿಗಳಿಗಳ ಸನ್ಮಾನ ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ದೇವರು ನಮಗೆ ಏನು ಕೊಟ್ಟಿದ್ದಾನೆ ಅದು ಮುಖ್ಯವಲ್ಲ ದೇವರು ಈಗಾಗಲೇ ಕೊಟ್ಟಿದ್ದನ್ನು ಯಾವ ರೀತಿ ಬಳಸಿಕೊಳ್ಳುತ್ತೀದ್ದೀರಿ ಎನ್ನುವುದು ಮುಖ್ಯ, ಆ ನಿಟ್ಟಿನಲ್ಲಿ ಬಸೆಟೆಪ್ಪ ಯಲಿಗಾರ ಅವರು ಸಂಸ್ಥೆಯ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ನೀಡಿದ 1 ಲಕ್ಷ 20 ಸಾವಿರ ರೂ ದಾನ ಸದುಪಯೋಗವಾಗಲಿ, ಅವರು ನೀಡಿದ ದಾನ ಇದೇ ಮೊದಲೇನಲ್ಲ ಇಂತಹ ಸಾರ್ಥಕ ದಾನಗಳನ್ನು ಯಲಿಗಾರ ಕುಟುಂಬ ಬಹಳಷ್ಟುನ್ನು ಮಾಡಿದೆ ಆ ದಾನದಿಂದ ಅವರು ಇನ್ನೂ ಅಭಿವೃದ್ಧಿಯಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಕೃಷಿಕರಾದ ಬಶೆಟೆಪ್ಪ ಯಲಿಗಾರ ಮಾತನಾಡಿ, ನಳಂದಾ ಶಾಲೆಯ ಮಕ್ಕಳನ್ನು ನನ್ನ ಮಕ್ಕಳೆಂದು ಭಾವಿಸಿ ಈಗಾಗಲೇ ವಾಗ್ದಾನ ಮಾಡಿದಂತೆ ನಾನು ದುಡಿದ ಕಾಲು ಭಾಗದ ಹಣವನ್ನು ಸಂಸ್ಥೆಗೆ ನೀಡಿದ್ದೇನೆ ಇಲ್ಲಿ ಕಲಿಯುವ ಮಕ್ಕಳ ಆನಂದವನ್ನು ನನ್ನ ಮಕ್ಕಳ ಆನಂದವೆಂದು ಭಾವಿದ್ದೇನೆ ಜೊತೆಗೆ ವಿವಿಧ ಶಿಕ್ಷಣ ಸಂಸ್ಥೆಗಳ ಏಳಿಗೆ ನನ್ನ ಕುಟುಂಬದ ಏಳಿಗೆ ಎಂದು ಭಾವಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಳಂದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ದಾನಿಗಳಾದ ಡಾ. ಪಿ ಆರ್ ಪಾಟೀಲ ಮಾತನಾಡಿ, ನಳಂದಾ ಶಿಕ್ಷಣ ಸಂಸ್ಥೆ ಈಗಾಗಲೇ ಜ್ಞಾನವಂತ ವಿದ್ಯಾಥರ್ಿಗಳನ್ನು ಹುಟ್ಟು ಹಾಕಿದ್ದು ತಂತ್ರಜ್ಞಾನದ ಅವಶ್ಯವಿರುವ ಇಂದಿನ ದಿನಮಾನಗಳಲ್ಲಿ ಸಂಸ್ಥೆಯ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಜ್ಞಾನವಂತ ಶಿಕ್ಷಕರು, ವಿದ್ಯಾಥರ್ಿಗಳನ್ನು ಪಡೆಯಲು ಸಾದ್ಯವಿದೆ ಎಲ್ಲವೂ ಧಾನಿಗಳ ಪ್ರೇರಣೆಯಿಂದ ಮಾತ್ರ ಸಾಧ್ಯವಿದೆ ಎಂದ ಅವರು ನಾನೂ ಸಹಿತ 1 ಲಕ್ಷ 20 ಸಾವಿರ ರೂಗಳನ್ನು ನಮ್ಮ ತಾಯಿಯವರಾದ ದಿ. ಕಮಲಮ್ಮ ರು ಪಾಟೀಲ ಅವರ ಸ್ಮರಣಾರ್ಥವಾಗಿ ನೀಡಿದ್ದೇನೆ ಎಂದರು.
ಸಂಸ್ಥೆಯ ನಿದರ್ೇಶಕರಾದ ಐ.ಪಿ.ಕೆ ಶೆಟ್ಟರ ಮಾತನಾಡಿ, ಮನುಷ್ಯ ಜೀವನದಲ್ಲಿ ಸಮಾಜಕ್ಕಾಗಿ ಏನಾದರೂ ಕೊಡುಗೆ ಕೊಡಬೇಕು ಅಂದಾಗ ಜೀವನ ಸಾರ್ಥಕ, ಆ ಕಾರ್ಯವನ್ನು ಯಲಿಗಾರ ಹಾಗೂ ಪಾಟೀಲ ಕುಟುಂಬ ಮಾಡಿದೆ ಎಂದರು.
ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ಸಿ ವಿ ಮತ್ತಿಗಟ್ಟಿ, ಶಾಲೆಯ ಪ್ರಧಾನ ಗುರುಗಳಾದ ಪಿ ವಿ ತೆಂಬದಮನಿ ಮಾತನಾಡಿದರು, ನಂತರ ದಾನಿಗಳಾದ ಬಶೆಟೆಪ್ಪ ಯಲಿಗಾರ ಹಾಗೂ ಡಾ. ಪಿ ಆರ್ ಪಾಟೀಲ ಕುಟುಂಬವನ್ನ ಸನ್ಮಾನಿಸಲಾಯಿತು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚಿಸಿದರು, ಸಂಸ್ಥೆಯ ಕಾರ್ಯದರ್ಶ ಎಫ್ ಸಿ ಪಾಟೀಲ, ಪರಶುರಾಮ ಬಾಳಿಕಾಯಿ, ಬಿ ಬಿ ಕುಷರ್ಾಪೂರ, ಚನ್ನವ್ವ ಯಲಿಗಾರ, ಜಯಶ್ರೀ ಪಾಟೀಲ, ಡಾ. ಕುಮಾರಗೌಡ ಪಾಟೀಲ, ಎಂ ಬಿ ಹಳೆಮನಿ, ಪ್ರಕಾಶ ಮತ್ತಿಗಟ್ಟಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು, ಎನ್ ಎಸ್ ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.