ಶಿಕ್ಷಣದಲ್ಲಿ ಹೊಸತನ ತರಬೇಕು: ಪ್ರೊ.ಗಾಯಿ

ಲೋಕದರ್ಶನ ವರದಿ

ಬೆಳಗಾವಿ 03:  ಇತ್ತೀಚಿನ ಪದವಿ ಶಿಕ್ಷಣ ಅದರಲ್ಲಿಯೂ ಬಿ.ಎ. ಪದವಿಯನ್ನು ಓದುತ್ತಿರುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ರೀತಿಯ ಇಳಿಕೆ ಕ್ರಮಕ್ಕೆ ಅಭಿರುಚಿ, ಸ್ಪಧರ್ೆ, ಕೌಶಲ್ಯ, ಉದ್ಯೋಗದ ಭರವಸೆ- ಇದೇ ಮೊದಲಾದ ಕೊರತೆಗಳಿಂದಾಗಿ ವಿದ್ಯಾಥರ್ಿಗಳು ಕಲಾ ವಿಭಾಗದಲ್ಲಿ ಕಲಿಯಲು ಹಿಂಜರಿಯುತ್ತಿದ್ದಾರೆ. ಪಠ್ಯದಲ್ಲಿ ಸ್ಪಧರ್ಾತ್ಮಕ, ಜೀವನಕೌಶಲ್ಯ, ತಂತ್ರಜ್ಞಾನದ ಹೊಸ-ಹೊಸ ಆವಿಷ್ಕಾರಗಳನ್ನು ಅಳವಡಿಸುವ ಮೂಲಕ ಪದವಿ ಶಿಕ್ಷಣದಲ್ಲಿ ಹೊಸತನ ತರಬೇಕು ಎಂದು ಕ.ವಿ.ವಿ. ಕುಲಪತಿ ಪ್ರೊ. ಪ್ರಮೋದ ಗಾಯಿ ಅಭಿಪ್ರಾಯ ಪಟ್ಟರು. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಕನರ್ಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಕನರ್ಾಟಕ ವಿಶ್ವವಿದ್ಯಾಲಯ ಘಟಕ ಹಮ್ಮಿಕೊಂಡ 'ಪದವಿ ಶಿಕ್ಷಣ ಪುನರುತ್ಥಾನ' ವಿಷಯದ ಮೇಲೆ ಹಮ್ಮಿಕೊಂಡ ದುಂಡುಮೇಜಿನ ಸಭೆಯಲ್ಲಿ ಮಾತನಾಡಿ ಈ ರೀತಿ ಅಭಿಪ್ರಾಯಿಸಿದರು. ಮುಂದುವರೆದು ಮಾತನಾಡಿದ ಕುಲಸಚಿವರು ಅವಶ್ಯಕತೆ, ವಾಸ್ತವ್ಯ, ಸಮುದಾಯಕ್ಕೆ ಅನುಗುಣವಾಗಿ ಪಠ್ಯಗಳ ರಚನೆಯಾಗಬೇಕು. ಶಿಕ್ಷಕರು ಹೆಚ್ಚು ಪರಿಶ್ರಮ ವಹಿಸಬೇಕು; ವಿದ್ಯಾಥರ್ಿಯ ಭವಿಷ್ಯತ್ತಿನ ಹೆಜ್ಜೆಯಲ್ಲಿ ಬದುಕಿನ ಆಶಾಭಾವನೆಗಳನ್ನು ಬಿತ್ತಬೇಕು. ಅವನನ್ನು ಕೇವಲ ಸಂಬಳದನೌಕರಿಗೆ ಸೀಮಿತಗೊಳಸಬಾರದು. ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ ಸ್ಪಧರ್ಾತ್ಮಕತೆ, ಕೌಶಲ್ಯಗಳಿಲ್ಲದ ಕಾರಣ ವಿದ್ಯಾಥರ್ಿಗಳು ಹಿಂದೇಟು ಹಾಕುತ್ತಿದ್ದಾರೆ. 

ಚಚರ್ೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಹರೀಶ ರಾಮಸ್ವಾಮಿ, ಪಠ್ಯಕ್ಕೂ-ಅನುಭವಕ್ಕೂ ತುಂಬಾ ಕೊರತೆಯಿದೆ. ಪಠ್ಯಗಳು ಬದುಕಿಗೆ ಹತ್ತಿರವಾಗುವ ರೀತಿಯಲ್ಲಿ ತಯಾರಿಸಬೇಕು. ವಿದ್ಯಾಥರ್ಿಗಳನ್ನು ಕೇಳುವ ಪ್ರಶ್ನೆಗಳ ಮಾದರಿ ಬದಲಾಗಬೇಕು. ಈಗ ಕೇವಲ ಗಿಳಿಪಾಠದಂತೆ ನಡೆಯುತ್ತಿದೆ. ಅದು ಬದಲಾಗಬೇಕೆಂದರು. 

ಪ್ರೊ. ಎಂ.ಜಿ. ಖಾನ, ಡಾ. ಬಿ.ಎಚ್. ನಾಗೂರ, ಡಾ. ಮಲ್ಲಿಕಾಜರ್ುನ ಪಾಟೀಲ, ವಾಮನ ನಾಡಗೀರ, ಕಮಲಾಕ್ಷಿ, ಕೌಶತ್ಅಲಿ, ಸಿ.ಎಸ್. ಪಾಟೀಲ, ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ದುಮ್ಮವಾಡ, ಡಾ. ಸಿ.ವಿ. ಮರಿದೇವರಮಠ, ಡಾ. ಅನ್ನಪೂರ್ಣ ಹತ್ತಿಮತ್ತೂರ, ಎಚ್.ವಿ. ಬೆಳಗಲಿ, ಡಾ. ಜಿ.ಬಿ. ನಂದಿನ, ಡಾ. ಜಗತಾಪ ಮೊದಲಾದ ಚಿಂತಕರು, ಹಿರಿಯರು ಚಚರ್ೆಯಲ್ಲಿ ಪಾಲ್ಗೊಂಡು ಕಲಿಯುವ ಶಿಕ್ಷಣ ಮತ್ತು ಹುಡುಕುವ ಉದ್ಯೋಗಕ್ಕೆ ಸಂಬಂಧಿಸಿದ ಪಠ್ಯಗಳು ರಚನೆಯಾಗಬೇಕೆಂದು ಸಲಹೆ-ಸೂಚನೆಗಳನ್ನು ನೀಡಿದರು. 

ಸ್ನಾತಕೋತ್ತರ ವಿದ್ಯಾಥರ್ಿಗಳು, ಸಂಶೋಧನೆ ವಿದ್ಯಾಥರ್ಿಗಳು ಚಚರ್ೆಯಲ್ಲಿ ಪಾಲ್ಗೊಂಡು ಪರೀಕ್ಷಾ ಪದ್ಧತಿ ಮತ್ತು ಮೌಲ್ಯಮಾಪನ ಕ್ರಮದಲ್ಲಿ ಕೆಲವು ಬದಲಾವಣೆಗಳಾಗಬೇಕೆಂದು ಹೇಳಿದರು. ಕೆ.ಆರ್.ಎಂ.ಎಸ್. ಅಧ್ಯಕ್ಷ ಡಾ. ರಘು ಅಕಮಂಚಿ ಸಂಘಟನೆ ನಡೆದು ಬಂದ ದಾರಿಯನ್ನು ಹೇಳುತ್ತಾ ಶೈಕ್ಷಣಿಕ ಗುಣಮಟ್ಟದ ಸುಧಾನರಣೆಗಳಲ್ಲಿ ಅನೇಕ ಮೌಲ್ಯಾಧಾರಿತ ಹಾಗೂ ಅಕಾಡೆಮಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದುದನ್ನು ಹೇಳಿದರು. ಡಾ. ಜಿ.ಕೆ. ಬಡಿಗೇರ ಸ್ವಾಗತಿಸಿದರು. ಪ್ರಸನ್ನ ಪಂಡರಿ ವಿಷಯದ ಪ್ರಸ್ತಾವನೆಯನ್ನು ಮಂಡಿಸಿದರು. ಕೆ.ಜಿ.ಸಿ.ಟಿ. ಕಾರ್ಯದಶರ್ಿ ಡಾ. ವಸಂತ ಮುಂಡರಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಗದೀಶ ಬಡಗಿ ವಂದನೆ ಸಲ್ಲಿಸಿದರು.