ಸಾಮಾಜಿಕ ಸಾಮರಸ್ಯದ ತಿರಂಗಾ ರ್ಯಾಲಿ

ಲೋಕದರ್ಶನ ವರದಿ

ಬೈಲಹೊಂಗಲ:  ಭಾರತ ಸಾಮಾಜಿಕ, ಏಕತೆಯನ್ನು ಏತ್ತಿ ಹಿಡಿದ ದೇಶವನ್ನು ಛಿದ್ರಗೊಳಿಸುವ ಶಕ್ತಿಗಳಿಗೆ ಪ್ರಬಲ ಉತ್ತರ ನೀಡಲು ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾದರ್ಶದ ಸಾಮಾಜಿಕ ಸಾಮರಸ್ಯದ ತಿರಂಗಾ ರ್ಯಾಲಿಯನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯಾವಾಗಿದೆ ಎಂದು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಹೇಳಿದರು.

     ಅವರು ಶನಿವಾರ ಪಟ್ಟಣದ ವಿಜಯ ಸೊಶಿಯಲ್ ಕ್ಲಬನಲ್ಲಿ ಹಮ್ಮಿಕೊಂಡ ಎಬಿವಿಪಿ ತಾಲೂಕ ಘಟಕದಿಂದ ಸಾಮಾಜಿಕ ಸಾಮರಸ್ಯ ತಿರಂಗಾ ರ್ಯಾಲಿ ನಮ್ಮ ನಡಿಗೆ ರಾಷ್ರ್ಟೀಯತೆಯ ಕಡೆಗೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ,ದುಷ್ಟ ಅಸುರ ಶಕ್ತಿಗಳಿಗೆ  ಅಂತಿಮ ನೆಲೆಯನ್ನು ಕಾಣಿಸೋಣ,ದೇಶಕ್ಕಾಗಿ ಬದುಕಿ ದೇಶಭಕ್ತಿಯ ಕಂಕಣ ಕಟ್ಟಿ ವಿಕಾಸದಡೆಗೆ ಸಾಗೋಣ ಬನ್ನಿ ಎಂದರು.

   ಈ ರ್ಯಾಲಿಯನ್ನು ಯಶಸ್ವಿ ಕಡೆಗೆ ಸಾಗಿಸುತ್ತ ದುಷ್ಟಶಕ್ತಿಗಳನ್ನು ಸಂಹಾರ ಮಾಡಿ ಸಾಮಾಜಿಕ ಸಾಮರಸ್ಯದ ನೆಲೆಗಟ್ಟಿನ ಮೇಲೆ  ಭಾರತೀಯರಲ್ಲಿ ರಾಷ್ರ್ಟೀಯತೆಯನ್ನು ಬೆಳೆಸೋಣ. ಭಾರತೀಯ ವೃಕ್ಷ ಹೆಮ್ಮರವಾಗಿ ಬೆಳೆದು ಇಂದು ಜಗತ್ತು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಕಾರಣ ಭಾರತದಲ್ಲಿಯೇ ಯುವ ಶಕ್ತಿಯ ಪಡೆ  ಜಗತ್ತಿನ ಸಂತೆಯಲ್ಲಿ ಭಾರತ ಮನ್ನಣೆ ಪಡೆದು ಮಾರ್ಗದರ್ಶನ ಮಾಡುವ ಜಗದ್ಗುರುವಿನ ಅಂಚಿನಲ್ಲಿದೆ.ಏಕತೆ ಸಹೋದರತ್ವದತ್ತ ಸಂದೇಶವನ್ನು ವಿಶ್ವಕ್ಕೆ ಸಾರಿದ ಡಾ.ಬಿ.ಆರ್.ಅಂಬೇಡ್ಕರ, ಸ್ವಾಮಿ ವಿವೇಕಾನಂದ ಪುಣ್ಯಭೂಮಿ ಭಾರತ ಆದರೆ ಇಂದು ನಮ್ಮ ರಾಷ್ರ್ಟದಲ್ಲಿ ದೇಶದ್ರೋಹಿ, ಮಾನಸಿಕತೆಯ ವಿಚಾರಧಾರೆಯ ಕೆಲವು ಮನಸ್ಸುಗಳು ತಲೆ ಎತ್ತುತ್ತಿವೆ. ತಮ್ಮ ಸ್ವಾರ್ಥ ಸ್ವಹಿತಕ್ಕಾಗಿ ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.

      ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದಶರ್ಿ ಪೃಥ್ವಿಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಬಿವಿಪಿ ನಡೆದು ಬಂದ ದಾರಿ ಕುರಿತು ಮಾಮರ್ಿಕವಾಗಿ ವಿವರಿಸಿದರು.

    ಚಿತ್ರನಟ ಶಿವರಂಜನ ಬೊಳನ್ನವರ, ಹಿಂದುಳಿದ ವರ್ಗಗಳ ವಿಸ್ತಿಣರ್ಾಧಿಕಾರಿ ಶಾಂತಾ ಮರಿಗೌಡರ ಮಾತನಾಡಿ, ಯುವಕ, ಯುವತಿಯರು ಸಹೋದರತ್ವ ಭಾವನೆ ಮೂಡಿಸಿಕೊಂಡು ವಿದ್ಯಾಥರ್ಿ ದೆಸೆಯಲ್ಲೆ ರಾಷ್ರ್ಟೀಯತೆಯ ಮನೋಭಾವನೆ ರೂಡಿಸಿಕೊಳ್ಳಬೇಕು. ಎಬಿವಿಪಿ ಈ ನಾಡಿನಲ್ಲಿ ಕ್ರೀಯಾಶೀಲರಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

       ಡಾ.ಸಿ.ಬಿ.ಗಣಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಂ.ಸಿ.ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ವಕೀಲರ ಸಂಘದ ಕಾರ್ಯದಶರ್ಿ ದುಂಡೇಶ ಗರಗದ, ಉದ್ಯಮಿ ವಿಜಯ ಮೆಟಗುಡ್ಡ, ವೈದ್ಯ ಡಾ.ಚಿದಂಬರ ಕುಲಕಣರ್ಿ, ಎಫ.ಎಸ್.ಸಿದ್ದನಗೌಡರ ಇದ್ದರು.

       ಎಬಿವಿಪಿ ನಗರ ಘಟಕದ ಉಪಾಧ್ಯೆಕ್ಷೆ ರಶ್ಮಿ ಪಾಟೀಲ, ಬಿ.ಜಿಹಣಬರಟ್ಟಿ, ವಿಜಯ ಪಾಟೀಲ, ಶಿವಯೋಗಿ ವಾಲಿ,  ರಮೇಶ ಸವಣೂರ ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.

     ಇದಕ್ಕೂ ಮುಂಚೆ ರಾಣಿ ಚನ್ನಮ್ಮ ವೃತ್ತದಿಂದ ತಿರಂಗಾ ರ್ಯಾಲಿಗೆ ಡಾ. ವೇ.ಮೂ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ವೈದ್ಯ ಮಂಜುನಾಥ ಮುದುಕನಗೌಡರ, ರಫೀಕ ಬಡೇಘರ, ಸುಭಾಸ ತುರಮರಿ ಮತ್ತಿತರರು ಚಾಲನೆ  ನೀಡಿದರು.  250 ಮೀಟರ್ ಉದ್ದದ ತಿರಂಗಾ ರ್ಯಾಲಿಯು ಇಂಚಲ ಕ್ರಾಸ, ಬಸ್ ನಿಲ್ದಾಣ, ರಾಯಣ್ಣ ವೃತ್ತದ ಮೂಲಕ ವಿಜಯ ಸೊಶಿಯಲ್ ಕ್ಲಬಗೆ ಆಗಮಿಸಿತು. ಸಿದ್ದಾರೂಡ ಹೊಂಡಪ್ಪನವರ ಸ್ವಾಗತಿಸಿದರು, ನಂದೀಶ ಕಂಬಾರ ನಿರೂಪಿಸಿದರು, ಅಪ್ಪಣ್ಣ ಹಡಪದ ವಂದಿಸಿದರು.