ಹೂವಿನಹಡಗಲಿಯಲ್ಲಿ ಟಿಪ್ಪುಸುಲ್ತಾನ್ ಜಯಂತಿ

ಲೋಕದರ್ಶನ ವರದಿ

ಹೂವಿನಹಡಗಲಿ 11: ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಜತೆಯಲ್ಲಿ ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ ಎಂದು ನಿವೃತ್ತ ಪ್ರಾಚಾರ್ಯ ಟಿ.ಪರಮೇಶ್ವರಪ್ಪ ಹೇಳಿದರು.

 ಪಟ್ಟಣದದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕೆಲವರು ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಆದರೆ ಟಿಪ್ಪುಸುಲ್ತಾನ್ ಅವರ ವ್ಯಕ್ತಿತ್ವ,ಹೋರಾಟದಿಂದ ಬಂದವರು ಎಂದ ಅವರು ಟಿಪ್ಪು ಕಾಲದಲ್ಲಿ ಪ್ರಜಾತಂತ್ರಿಕವಾಗಿ ಆಯ್ಕೆಯಾದವನಲ್ಲ.ಆತ ಒಬ್ಬ ರಾಜ,ದೇಶಪ್ರೇಮ,ಜಾತ್ಯತೀತ ಧೋರಣೆಯನ್ನು ಹೊಂದಿದ್ದರು ಇದೀಗ ರಾಜ್ಯದಲ್ಲಿ ಪರ-ವಿರೋಧಗಳಿದ್ದು, ಕೆಲವರ ಶಿಥೀಲ ಮನಸ್ಸುಗಳನ್ನು ಕಟ್ಟುವ ಕೆಲಸಗಳಾಗಬೇಕು ಎಂದರು.

ವಕೀಲರಾದ ಅಟವಾಳಗಿ ಕೊಟ್ರೇಶ ಮಾತನಾಡಿ ಟಿಪ್ಪು ಯುದ್ಧ ಸಮಯದಲ್ಲಿ ಮಗನನ್ನೇ ಒತ್ತೆಯಾಗಿ ಇಟ್ಟಿದ್ದು ದೇಶ ಪ್ರೇಮವನ್ನು ಮರೆದಿದ್ದಾನೆ.ಕೆಲ ಕೋಮವಾದಿಗಳು ಟಿಪ್ಪುಸುಲ್ತಾನ ಹಿಂದೂಗಳ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. 

 ಮುಂದಿನ ದಿನಗಳಲ್ಲಿ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಬಹಿರಂಗವಾಗಿ ಆಚರಿಸಲು ಸಕರ್ಾರ ಆದೇಶವನ್ನು ನೀಡಬೇಕೆಂದು ವೇದಿಕೆ ಮೂಲಕ ಒತ್ತಾಯಿಸಿದರು.

ತಹಶೀಲ್ದಾರ ಕೆ.ರಾಘವೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ,ತಾ.ಪಂ.ಇಒ ಸೋಮಶೇಖರ, ಮುಖಂಡರಾದ ಐಗೋಳ ಚಿದಾನಂದ,ಎಂ.ಪರಮೇಶ್ವರಪ್ಪ, ವಾರದಗೌಸ್ ಮೊಹಿದ್ದೀನ್, ಬಸವನಗೌಡ ಪಾಟೀಲ, ವಾರದಗೌಸ್ ಮೊಹಿದ್ದೀನ್, ವಸಂತ,ಪುರಸಭೆ ಸದಸ್ಯ ಇಫರ್ಾನ್ ಇತರರಿದ್ದರು.ಶಿಕ್ಷಕ ಖಾದಾರಬಾಷ ಸ್ವಾಗತಿಸಿದರು. ಬಿಸಿಎಂ ಎಂ.ಪಿ.ಎಂ.ಅಶೋಕ ನಿರೂಪಿಸಿದರು.