ಲೋಕದರ್ಶನವರದಿ
ಕುರುಗೋಡು. ಏ. 25 :ಪಟ್ಟಣ ಸಮೀಪದ ಹೊಸ ಗೆಣಿಕೆಹಾಳ್ ಗ್ರಾಮದ ಬಳಿರುವ ಎಲ್.ಎಲ್.ಸಿ ಕಾಲುವೆ 61/500ರ ಬ್ರಿಡ್ಜ್ನ ಕೆಳಗಡೆ ಶನಿವಾರ ಬೆಳಿಗ್ಗೆ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಕಾಲುವೆಯಲ್ಲಿ ಬಿದ್ದಿರುವ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಟಿಪ್ಪರ್ ಚಾಲಕನಿಗೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಬಿಆರ್ ಕಂಪನಿಯು ಕಾಲುವೆ ದುರಸ್ಥಿಗೆ ಮಣ್ಣು ಸರಾಬರಾಜು ಮಾಡಲು ಗುತ್ತಿಗೆ ಹಿಡಿದಿದ್ದು, ಮಣ್ಣು ಹೊಡೆಯಲು ಕಾಲುವೆ ಮೇಲೆ ತೆರಳುವ ಸಂದರ್ಭದಲ್ಲಿ ಚಾಲಕನ ಕೈ ತಪ್ಪಿದ ಕಾರಣ ಲಾರಿ ಪಲ್ಟಿಯಾದ ಘಟನೆ ಜರುಗಿದೆ. ಈ ಲಾರಿ ಎಬಿಆರ್ ಕಂಪನಿದೆಂದು ತಿಳಿದು ಬಂದಿದ್ದು. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಪಿಎಸ್ಐ ಕೃಷ್ಣಮೂತರ್ಿ ತಿಳಿಸಿದರು.