ಬಾಗಲಕೋಟೆ, ನ. 9: ಟಿಪ್ಪರ್ ವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದಿದೆ. ಬಸವರಾಜ ಪಲ್ಲೇರ, ಮನೋಹರ ಶೀಲವಂತರ ಮೃತ ದುದರ್ೆವಿಗಳು. ಇವರು ಸ್ನೇಹಿತರು ಬೈಕ್ ನಲ್ಲಿ ಜೆಕೆ ಸಿಮೆಂಟ್ ಫ್ಯಾಕ್ಟರಿ ಕಡೆಗೆ ತೆರಳುತ್ತಿದ್ದಾಗ ಲೋಕಾಪುರ-ಯಾದವಾಡ ರಸ್ತೆಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.