ಹುಲಿಗೆ: ವಸ್ತು ಪ್ರದರ್ಶನ ಮೂಲಕ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಜಾಗೃತಿ

Tiger: Awareness of Health Department programs through exhibition

ಲೋಕದರ್ಶನ ವರದಿ 

ಹುಲಿಗೆ: ವಸ್ತು ಪ್ರದರ್ಶನ ಮೂಲಕ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಜಾಗೃತಿ 

ಕೊಪ್ಪಳ 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಿಗಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ವಸ್ತು ಪ್ರದರ್ಶನ ಮೂಲಕ ಆರೋಗ್ಯ ಇಲಾಖೆ ಯೋಜನೆಗಳು ಮತ್ತು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಯೋಜನೆಗಳು ಮತ್ತು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಲಾಯಿತು. 

ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಶಫಿಉಲ್ಲಾ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಸ್ತು ಪ್ರದರ್ಶನವನ್ನು ಜಾತ್ರೆ, ಸಂತೆಗಳಲ್ಲಿ ಏರಿ​‍್ಡಸುವಂತೆ ನಿರ್ದೇಶನವಿರುತ್ತದೆ. ಪ್ರತಿಯೊಬ್ಬ ಸಾರ್ವಜನಿಕರು ಇಲಾಖೆಯಲ್ಲಿ ಲಭ್ಯವಿರುವ ಜನನಿ ಸುರಕ್ಷಾ ಯೋಜನೆ, ಜನನಿ-ಶಿಶು ಸುರಕ್ಷಾ ಯೋಜನೆ, ಡಾ.ಪುನಿತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ, ತಾಯಿ-ಮಕ್ಕಳ ಆರೋಗ್ಯ ಸುರಕ್ಷಿತ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆಗಳಾದ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳು, ಎನ್‌.ಪಿ.ಪಿ.ಸಿ.ಡಿ, ಪಿಸ್ಘಿಪಿ.ಎನ್‌.ಡಿ.ಟಿ, ಜೀವನ ಶೈಲಿಯಿಂದ ಬರುವ ರೋಗಗಳಾದ ಅಧೀಕ ರಕ್ತದೋತ್ತಡ(ಬಿ.ಪಿ), ಮಧುಮೇಹ, ಕ್ಯಾನ್ಸರ್, ಬೇಡವಾದ ಬೊಜ್ಜು, ಹೃದಯ ಸಂಬಂಧಿ ಖಾಯಿಲೆ ಹಾಗೂ ಪಾರ್ಶ್ವವಾಯು, ಮಾನಸಿಕ ಆರೋಗ್ಯ ಖಾಯಿಲೆ ಚಿಕಿತ್ಸೆ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ, ಸೋಂಕಿತ ಸೊಳ್ಳೆಗಳಿಂದ ಹರಡುವ ಡೆಂಗ್ಯೂ-ಚಿಕನ್‌ಗುನ್ಯಾ, ಮಲೇರಿಯಾ, ಮೆದುಳು ಜ್ವರ ನಿಯಂತ್ರಣ, ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ಆರೋಗ್ಯ ರಕ್ಷಣೆಗಾಗಿ ಅನುಸರಿಸುವ ಮುಂಜಾಗೃತ ಕ್ರಮಗಳ ಬಗ್ಗೆ ಮತ್ತು ವಿವಿಧ ಯೋಜನೆಗಳ ಕುರಿತು ಮಂಗಳವಾರ ಇರುವ ಪ್ರಯುಕ್ತ, ಜನಸಂಧಣಿ ಹೆಚ್ಚಾಗುವ ಹಿನ್ನಲೇಯಲ್ಲಿ ಈ ವಸ್ತು ಪ್ರದರ್ಶನ ಏರಿ​‍್ಡಸಿ, ಅರಿವು ಮೂಡಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ, ಸಾರ್ವಜನಿಕರಿಗೆ ತಿಳಿಸಿದರು.  

ಹುಲಿಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ಗವಿಸಿದ್ದಪ್ಪ ಗುಂಡಾಡಿ ಅವರು ಕರಪತ್ರ ಸಾರ್ವಜನಿಕರಿಗೆ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಕೆ., ಶರಣಪ್ಪ ಆರ್‌., ದೇವಮ್ಮ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಭೀಮೇಶ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೊತಿ, ಆಪ್ತಸಮಾಲೋಚಕಿ ಪೈರೋಜಾಬೇಗಂ, ಆರೋಗ್ಯ ನೀರೀಕ್ಷಣಾಧಿಕಾರಿ ಉದಯಕುಮಾರ, ಎಸ್‌.ಟಿ.ಎಸ್ ಶ್ರೀನಿವಾಸ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.