ಸಿಡಿಲು ಬಡಿದು ಸಾವು: ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.17:   ಇತ್ತೀಚೆಗೆ ತಾಲೂಕಿನ ಗಂಗಾಪುರ ಗ್ರಾಮದ ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ ಅವರು  ಕೃಷಿ ಚಟುವಟಿಕೆಯಲ್ಲಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ ಕಾರಣಕ್ಕಾಗಿ ಅವರ ಪತ್ನಿ ಮಮತಾ ಅವರಿಗೆ ಮತ್ತು ಮಂಜಪ್ಪ ನಂದ್ಯಾಲರವರ ಕುಟುಂಬಗಳಿಗೆ ಸಚಿವ ಆರ್.ಶಂಕರ ಅವರು 5 ಲಕ್ಷ ರು ಮೊತ್ತದ ಸರಕಾರದ ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ ವಿವಿಧ ಕಾರಣಗಳಿಂದ ಮೃತರಾದ ಕುಟುಂಬಗಳಿಗೂ ಸಹ ಪರಿಹಾರದ ಚೆಕ್ಗಳನ್ನು ವಿತರಿಸಿದ ಸಚಿವರು ಇದೇ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾದ ಎತ್ತಿನ ಮಾಲಿಕ ಮಂಜಪ್ಪ ನಿಂಗಪ್ಪ ನಂದ್ಯಾಲ ಅವರಿಗೆ 25 ಸಾವಿರ ರೂ.ಗಳ ಚೆಕ್ ವಿತರಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ತಹಶೀಲ್ದಾರ ಸಿ.ಎಸ್.ಕುಲಕಣರ್ಿ, ಮೇಡ್ಲೇರಿ ವೃತ್ತಾಧಿಕಾರಿ ವಾಗೀಶ ಮಳೇಮಠ, ಗ್ರಾಮಲೆಕ್ಕಾಧಿಕಾರಿ ಎಚ್.ಎಂ.ಐಶ್ವರ್ಯ, ಗ್ರಾಪಂ ಸಹಾಯಕ ಮುಕ್ತೇಶ ಸೇರಿದಂತೆ ಮತ್ತಿತರರು ಇದ್ದರು.