ಮೂರು ವರ್ಷಕೊಮ್ಮೆ ಅಧಿಕಾರ ಬದಲಾವಣೆ ಶ್ಲಾಘನೀಯ: ಫಕೀರ ಸಿದ್ಧರಾಮ ಸ್ವಾಮಿಗಳು

ಲೋಕದರ್ಶನ ವರದಿ

ಧಾರವಾಡ 30: ಅಧಿಕಾರ ಎನ್ನುವುದು ಯಾರ ಸ್ವತ್ತಲ್ಲ. ಅದನ್ನು ಪ್ರತಿ ಮೂರು ವರ್ಷಕೊಮ್ಮೆ ಬದಲಾವಣೆ ಮಾಡುವಂತೆ ಅಭೂತ ಕಾರ್ಯಕ್ರಮ ಬಹಳ ಶ್ಲಾಘನೀಯವಾಗಿದ್ದು ಹೊಸದಾಗಿ ಅಧಿಕಾರವನ್ನು ಪಡೆದುಕೊಂಡ ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಉತ್ತಮ ರೀತಿಯಲ್ಲಿ ನಡೆಸಬೇಕೆಂದು ಜಗದ್ಗುರು ಫಕ್ಕಿರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.

                ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಬ್ಬಳ್ಳಿ ತಾಲೂಕು, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಅದರಗುಂಚಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜಗದ್ಗುರು ರೇಣುಕಾಚಾರ್ಯ ಪ್ರೌಢಶಾಲೆ ನೂಲ್ವಿಯಲ್ಲಿ ಜರುಗಿದ ನೂಲ್ವಿ, ಅದರಗುಂಚಿ, ಹಳಿಯಾಳ, ಕೋಟಗೊಂಡ ಹುಣಸಿ ಮತ್ತು ಬೆಳಗಲಿ  ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

                ವೀರೇಂದ್ರ ಹೆಗ್ಗೆಡೆಯವರು ಭೂಮಿಯ ಮೇಲೆ ಹುಟ್ಟಿ ಬಂದಿರುವ ನಡೆದಾಡುವ ದೇವರು. ಇವರ ಮೂಲಕ ಸಮಾಜದಲ್ಲಿ ಮಹಿಳೆಯರ ಆಥರ್ಿಕ, ಸಮಾಜಿಕ, ಶೈಕ್ಷಣಿಕ ಜೀವನ ಸುಧಾರಿಸಲು ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ. ಅದರೊಂದಿಗೆ ಸಮಾಜದ ಕಟ್ಟ ಕಡೆ ವ್ಯಕ್ತಿಯಾದ ಮದ್ಯಪಾನ ಮಾಡುವವರನ್ನು ಮದ್ಯವ್ಯಸನ ಮುಕ್ತ ಮಾಡುವ ಕಾರ್ಯ ಬಹಳ ಶ್ಲಾಘನೀಯವಾಗಿದೆ ಎಂದರು.

                ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಗೋಳ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಇವರು ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು ಕಾಯಕವೇ-ಕೈಲಾಸ ಎಂದು ದುಡಿಯುತ್ತಿರುವ ಮಹಿಳೆಯರಿಗೆ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಶಕ್ತಿಯನ್ನು ತುಂಬಿದ್ದು ಸಮಾಜದಲ್ಲಿ ಮಹಿಳೆಯರು ಆಥರ್ಿಕವಾಗಿ ಸಬಲರಾಗಲು ಹೆಗ್ಗೆಡೆಯವರ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದರು.

                ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಯಾಗಿ ಜವಾಬ್ದಾರಿಯನ್ನು ಶ್ರೀ.ಕ್ಷೇ..ಗ್ರಾ.ಯೊ.ಧಾರವಾಡ ಜಿಲ್ಲಾ ನಿದರ್ೆಶಕ ದಿನೇಶ ಎಮ್. ಇವರು ಹಸ್ತಾಂತರಿಸಿ ರಾಜ ಮಹಾರಾಜರ ಕಾಲದಲ್ಲಿ ಯುದ್ಧಕ್ಕೆ ಹೋಗುವಾಗ ಫಲ ತಾಂಬೂಲವನ್ನು ನೀಡಿ ಯುದ್ದಕ್ಕೆ ಆವ್ಹಾನಿಸುತ್ತಿದ್ದು ಪ್ರಸಕ್ತ ಒಕ್ಕೂಟದ ಹಿಂದಿನ ಪದಾಧಿಕಾರಿಗಳು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ವೀಳ್ಯ-ತಾಂಬೂಲ ನೀಡಿ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದು ಒಕ್ಕೂಟವನ್ನು ಬಲಪಡಿಸಿಕೊಂಡು ನಡೆಸುವ ಸೂಚನೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿಯೆ ಧಾರವಾಡ ಜಿಲ್ಲೆ ಸರ್ವ ಶ್ರೇಷ್ಠ ಎಂದು ಗುರುತಿಸಿಕೊಳ್ಳಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

                ರೇಣುಕಾ ಶೇ.ಮುಗ್ಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುರೇಶಗೌಡ ಪಾಟೀಲ, ಜಗನಾಥಗೌಡ ಸಿದ್ದನಗೌಡ್ರ, ಗಂಗಾಧರಗೌಡ್ರ, ಚಂದ್ರಗೌಡ ಪಾಟೀಲ, ಎಮ್.ಬಿ.ಕಪ್ಪಿ, ಪ್ರವೀಣ ಸಾಮೋಜಿ, ಮತ್ತು ಮಲ್ಲಿಕಾಜರ್ುನ ಕಾನಗೌಡ್ರ, ಇವರು ಉಪಸ್ಥಿತರಿದ್ದರು.

                ಹುಬ್ಬಳ್ಳಿ ತಾಲೂಕು ಯೋಜನಾಧಿಕಾರಿ ಮಂಜುನಾಥ ನಾಯ್ಕ ಸ್ವಾಗತಿಸಿ ಪ್ರಸ್ತಾವಿಸಿದರು. ನಿರೂಪಣೆಯನ್ನು ಸುಭಾಷ ಮತ್ತು ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಶಂಕ್ರಪ್ಪ ಇವರು ನಿರ್ವಹಿಸಿದರು.