ವ್ಹೀಲಿಂಗ್ ವಾಹನಗಳ ಮುಖಾಮುಖಿ ಡಿಕ್ಕಿ: ಮೂವರು ಸಾವು

ಬೆಂಗಳೂರು, ಜೂ.21, ವ್ಹೀಲಿಂಗ್ ಮಾಡುವಾಗ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾದ  ಪರಿಣಾಮ ಮೂವರು  ಮೃತಪಟ್ಟಿರುವ ಘಟನೆ ನಗರದ ಜಕ್ಕೂರು ಫ್ಲೈಓವರ್ ಕೆಳಗಿನ ಏರ್ ಪೋರ್ಟ್ ರಸ್ತೆಯಲ್ಲಿ ಭಾನುವಾರ  ಸಂಭವಿಸಿದೆ.ಮಹಮ್ಮದ್ ಆದಿಲ್ ಆಯಾನ್, ಸೈಯ್ಯದ್ ರಿಯಾಜ್ ಹಾಗೂ ಮಾಜ್ ಮಹಮ್ಮದ್ ಖಾನ್ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸೈಯ್ಯದ್ ರಿಯಾಜ್ ಹಾಗೂ ಆದಿಲ್ ಆಯಾನ್ ಸ್ಥಳದಲ್ಲೇ ಮೃತಪಟ್ಟರೇ, ಮಾಜ್ ಮೊಹಮ್ಮದ್ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ  ಎಂದು ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.