6 ತಿಂಗಳ ಬಂಧನ ಅವಧಿ ಪೂರ್ಣಗೊಳಿಸಿದ ಮೂವರು ಮಾಜಿ ಸಿಎಂಗಳು

ಶ್ರೀನಗರ, ಜನವರಿ 5 ,ಕಣಿವೆ ರಾಜ್ಯಕ್ಕೆ  ನೀಡಲಾಗಿದ್ದ ವಿಶೇಷ  ಸ್ಥಾನಮಾನ ರದ್ದುಪಡಿಸಿದ ಕೇಂದ್ರದ  ಕ್ರಮದ ನಂತರ ಮೂರು ಮಾಜಿ ಮುಖ್ಯಮಂತ್ರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ 20 ಕ್ಕೂ ಹೆಚ್ಚು ನಾಯಕರು 6 ತಿಂಗಳ  ಬಂಧನದ ಅವಧಿ  ಪೂರ್ಣಗೊಳಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವ ತೀರ್ಮಾನದ  ನಂತರ   ರಾಜಕೀಯ ನಾಯಕರನ್ನು ಗೃಹ ಬಂಧನ ಮಾಡಲಾಗಿದೆ.  ಆಗಸ್ಟ್ 5 ರಿಂದ ಮೂವರು ಮಾಜಿ ಸಿಎಂಗಳಾದ ಡಾ.ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ.

ಆದರೆ, ಶ್ರೀನಗರ ಕ್ಷೇತ್ರದ ಸಂಸತ್ (ಸಂಸದ) ಸದಸ್ಯರಾಗಿರುವ ಡಾ.ಅಬ್ದುಲ್ಲಾ ಅವರ ವಿರುದ್ಧ  ಸಾರ್ವಜನಿಕ  ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ದಾಖಲಿಸಲಾಗಿದೆ . ಇದನ್ನೂ ಎಂಡಿಎಂಕೆ ಮುಖ್ಯಸ್ಥ ವೈಕೋ  ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ನಂತರ  ಡಾ. ಅಬ್ದುಲ್ಲಾ ಅವರ  ಬಂಧನವನ್ನು ನಂತರ ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ. ಮಾಜಿ ಐಎಎಸ್ ನಾಯಕ -ರಾಜಕಾರಣಿ ಡಾ. ಷಾ ಫಾಸಲ್ ಮತ್ತು ಮಾಜಿ ಸಚಿವ ನಯೀಮ್ ಅಖ್ತರ್ ಕೂಡ ಬಂಧನದಲ್ಲಿದ್ದಾರೆ  . ಆಶ್ಚರ್ಯಕರ ಸಂಗತಿಯೆಂದರೆ, ಬಂಧನಕ್ಕೊಳಗಾದ ಯಾವುದೇ ನಾಯಕರು ಕೋರ್ಟ್ ನಲ್ಲಿ ತಮ್ಮ ಬಂಧನವನ್ನು ಪ್ರಶ್ನೆ ಮಾಡಿಲ್ಲ 

ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಮತ್ತು ಇತರ ನಾಯಕರು ಸೆಕ್ಷನ್ 170 ರ ಅಡಿಯಲ್ಲಿ ತಮ್ಮ ಆರು ತಿಂಗಳ ಬಂಧನವನ್ನು ಪೂರ್ಣಗೊಳಿಸಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ  ಈ ಕಾಯಿಯಡಿ  ಒಬ್ಬ ವ್ಯಕ್ತಿಯನ್ನು ಆರು ತಿಂಗಳು ಮಾತ್ರ ಬಂಧಿಸಬಹುದಾಗಿದೆ. ಅವರ ಬಂಧನವನ್ನು ಯಾವುದೇ ಹೊಸ ಕಾನೂನಿನ  ಅಡಿಯಲ್ಲಿ ವಿಸ್ತರಿಸಲಾಗುತ್ತದೆಯೇ ಅಥವಾ ಅವರನ್ನೂಸಾರ್ವಜನಿಕ ಸುರಕ್ಷತೆ ಕಾಯಿದೆಯಡಿ ಅಡಿಯಲ್ಲಿಯೇ ದಾಖಲಿಸಲಾಗುತ್ತದೆಯೇ ಎಂಬುದನ್ನೂ ಕಾದು ನೋಡಬೇಕಾಗಿದೆ. ಕಳೆದ ಎರಡು ತಿಂಗಳುಗಳಿಂದ ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಸುಮಾರು 25 ನಾಯಕರನ್ನು ಅವರು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕ್ರಮವನ್ನೂ ಪ್ರಶ್ನಿಸುವುದಿಲ್ಲ ಎಂಬ ಮುಚ್ಚಳಿಕೆ ನಂತರ  ಬಿಡುಗಡೆ ಮಾಡಲಾಗಿದೆ.