ಕೊಲ್ಲಿಯಿಂದ ೫೪೫ ಪ್ರಯಾಣಿಕರನ್ನು ಹೊತ್ತ ಮೂರು ವಿಮಾನಗಳು ಕೊಚ್ಚಿಗೆ ಆಗಮನ

ಕೊಚ್ಚಿ, ಮೇ ೧೦,ಕೊವಿಡ್‌-೧೯ ಲಾಕ್‌ಡೌನ್‌ ಅವಧಿಯಲ್ಲಿ ವಿಶ್ವದಾದ್ಯಂತ ಸಿಲುಕಿಬಿದ್ದಿರುವ  ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಆರಂಭಿಸಲಾಗಿರುವ ವಂದೇ ಭಾರತ್ ಮಿಷನ್‌ ನ ಭಾಗವಾಗಿ  ಶನಿವಾರ ರಾತ್ರಿ ಕೊಲ್ಲಿ ರಾಷ್ಟ್ರಗಳಲ್ಲಿದ್ದ ೫೪೫ ಪ್ರಯಾಣಿಕರನ್ನು ಹೊತ್ತ ಮೂರು ವಿಮಾನಗಳು ಕೇರಳದ ಕೊಚ್ಚಿಗೆ ಆಗಮಿಸಿವೆ.   ಕೇರಳಕ್ಕೆ ಮೂರು ವಿಮಾನ ಸೇರಿದಂತೆ ಒಂಭತ್ತು  ವಿಮಾನಗಳು  ಶನಿವಾರ ಪ್ರಯಾಣಿಕರನ್ನು ಭಾರತಕ್ಕೆ ಕರೆ ತಂದಿವೆ. ಶನಿವಾರ  ಸಂಜೆ ೫ ಗಂಟೆಗೆ ಕುವೈತ್ ನಗರದಿಂದ ಹೊರಟ ೧೮೧ ಪ್ರಯಾಣಿಕರಿದ್ದ ವಿಮಾನ ರಾತ್ರಿ ೯.೩೦ಕ್ಕೆ  ಕೊಚ್ಚಿಗೆ ಆಗಮಿಸಿದೆ.
೧೮೧ ಪ್ರಯಾಣಿಕರನ್ನು  ಹೊತ್ತ ಮತ್ತೊಂದು ಏರ್ ಇಂಡಿಯಾ ವಿಮಾನ  ಓಮನ್‌ ರಾಜಧಾನಿ ಮಸ್ಕತ್‌ ನಿಂದ ಹೊರಟು ರಾತ್ರಿ  ಹತ್ತು ಗಂಟೆಗೆ ಕೊಚ್ಚಿ ವಿಮಾನವನ್ನು ತಲುಪಿದೆ. ಈ ಪ್ರಯಾಣಿಕರ ಪೈಕಿ  ೪೮ ಗರ್ಭಿಣಿ ಮಹಿಳೆಯರು ಮತ್ತು ನಾಲ್ವರು ಶಿಶುಗಳಿದ್ದಾರೆ.ಕತಾರ್ ರಾಜಧಾನಿ ದೋಹಾದಿಂದ ಹೊರಟ ಮತ್ತೊಂದು ಏರ್‌  ಇಂಡಿಯಾ ಎಕ್ಸ್ ಪ್ರೆಸ್ ವಿಮಾ ಕಳೆದ ಮಧ್ಯರಾತ್ರಿ ೨.೧೦ಕ್ಕೆ ಕೊಚ್ಚಿ   ವಿಮಾನನಿಲ್ದಾಣವನ್ನು ತಲುಪಿದೆ ಎಂದು ವಿಮಾನ ನಿಲ್ದಾಣ
ಮೂಲಗಳು ತಿಳಿಸಿವೆ.  ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೊವಿಡ್‌೧೯ ರಾಪಿಡ್‌ ಪರೀಕ್ಷೆ  ನಡೆಸಲಾಗಿದ್ದು, ನಂತರ ಅವರನ್ನು ಅವರ  ಸ್ಥಳಗಳಿಗೆ ವಿಶೇಷ ಟ್ಯಾಕ್ಸಿ ಮತ್ತು  ಸರ್ಕಾರಿ  ಬಸ್‌ಗಳ ಮೂಲಕ ಕಳುಹಿಸಲಾಗಿದೆ. ನಿಯಮಗಳಂತೆ, ಎಲ್ಲ ಗರ್ಭಿಣಿ ಮಹಿಳೆಯರು   ಮತ್ತು ಮಕ್ಕಳನ್ನು ತಮ್ಮ ಮನೆಗಳಿಗೆ ಸಾಗಿಸಲಾಗಿದ್ದು,  ಇತರ ಕೆಲವರನ್ನು ಅವರ ಜಿಲ್ಲೆಗಳ ಕೊರೊನವೈರಸ್‌ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಭಾನುವಾರ ಕೇರಳಕ್ಕೆ ಎರಡು ವಿಮಾನಗಳು ಕಾರ್ಯಾಚರಣೆನಡೆಸಲಿವೆ. ಒಂದು  ವಿಮಾನ   ಕೇರಳದ ದೋಹಾದಿಂದ ತಿರುವನಂತಪುರಂಗೆ ಮತ್ತೊಂದು ವಿಮಾನ ಕೌಲಲಂಪುರದಿಂದ ಕೊಚ್ಚಿಗೆ  ಆಗಮಿಸಲಿವೆ.