ಬೆಂಗಳೂರು , ಜೂನ್ 26, ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನ ಭಾರಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ಮುಂಗಾರು ಚುರುಕುಗೊಂಡ ಹಿನ್ನೆಲೆ ಭಾರಿ ಮಳೆಯಾಗಲಿದೆನಿನ್ನೆ ನಗರದ ದಕ್ಷಿಣ ಭಾಗದಲ್ಲಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ ವೃಷಭಾವತಿ ನದಿಯ ಕಾಲುವೆ ನೀರು ಹೆಚ್ಚಳವಾಗಿ ತಡೆಗೋಡೆ ಒಡೆದು ರಸ್ತೆಯಲ್ಲಿ ಭಾರಿ ಪ್ರವಾಹ ಕ್ಕೆ ಕಾರಣವಾಗಿ ಸಂಚಾರ ಬಹಳ ಅಸ್ತವ್ಯಸ್ತವಾಗಿತ್ತು ನಗರದ ಹಲವಡೆ ಭಾರಿ ಮಳೆಯಾಗಿದೆ , ಕೆಂಗೇರಿ 91 ಮಿ ಮೀಟರ್, ನಾಯಂಡಳ್ಳಿ 76 ಮಿ.ಮೀ, ಆರ್ ಆರ್ ನಗರ 70ಮಿ., ಮಾರುತಿ ಮಂದಿರ 61 ಮಿಮಿ ನಾಗರಭಾವಿಯಲ್ಲಿ 57 ಮಿ.ಮೀಟರ್ ಮಳೆ ಸುರಿದಿದೆಇಂದು ಸಂಜೆ ಸಹ ಧಾರಾಕಾರ ಮಳೆಯಾಗಲಿದ್ದು ಪಾಲಿಕೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದೂ ಹೇಳಲಾಗಿದೆ.