ಬೆಂಗಳೂರು,ನ 09: ಸುಪ್ರೀಂ ಕೋರ್ಟ್ ಅಯೋಧ್ಯೆ ತೀಪು ಸುಪ್ರೀಂ ಪ್ರಕಟಿಸಿದ್ದು, ನ್ಯಾಯಪೀಠ ಎಲ್ಲರಿಗೂ ಒಪ್ಪಿತ ಸರ್ವ ಸಮ್ಮತ ತೀಪುನ್ನು ಪ್ರಕಟಿಸಿದೆ. ಇದೊಂದು ಐತಿಹಾಸಿಕ ತೀಪು ಎಲ್ಲ ಧರ್ಮದವರು ಸಹ ತೀಪು ಒಪ್ಪಿಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ಆರ್ ಟಿ ನಗರದ ಸರ್ಕಾರಿ ನಿವಾಸದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿ ಗೂ ಒಪ್ಪಿಗೆ ತೀರ್ಪನ್ನು ಸುಪ್ರೀಂ ಕೋರ್ಟ ನೀಡಿದೆ ಎನ್ನಲಾಗಿದೆ. ಅಂತೆಯೇ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಾಮಾನ್ಯವಾಗಿದೆ. ಇದೇ ರೀತಿ ರಾಜ್ಯದ ಜನರು ಶಾಂತಿ ಸೌಹಾರ್ದತೆಯನ್ನ ಕಾಪಾಡಿ ಕೊಂಡು ಬರಬೇಕು ಎಂದು ಮನವಿ ಮಾಡಿದ್ದೇನೆ ಎಂದರು. ರಾಜ್ಯದ,ನಗರದ ಹಾಗು ಸೂಕ್ಷ್ಮ ಜಿಲ್ಲೆಗಳಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಸ್ಥಳೀ ಯ ಪೊಲೀಸರಿಗೆ ಮಾಹಿತಿ ಕೊಡಿ.ಯಾರೂ ಪ್ರಚೋದನೆಗೆ ಒಳಗಾಗಿ ಪ್ರತಿಕ್ರಿಯಿಸುವುದು,ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರಿಂದಲೂ ಆಗಬಾರದು.ಅದಕ್ಕೆ ಪೊಲೀಸರು ಹಾಗೂ ಸಾರ್ವಜನಿಕರು ಅವಕಾಶ ನೀಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಸೂಚನೆಯಂತೆ ವಿಜಯೋತ್ಸವ ಆಚರಣೆ, ಮೆರವಣಿಗೆ,ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಕೇಂದ್ರದ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಜಾರಿಗೊಳಿಸುವ 144 ಸೆಕ್ಷನ್ (ನಿರ್ಬಂಧವನ್ನು) ವಾಪಸ್ ತೆಗೆಯುವ ಬಗ್ಗೆ ಇಂದು ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಅಂತೆಯೇ ಸಾಮಾಜಿಕ ಜಾಲ ತಾಣಗಳ ಮೇಲೆ ಇಲಾಖೆ ನಿಗಾ ಇಟ್ಟಿದ್ದೇವೆ.ತೀರ್ಪುನ ಹಿನ್ನೆಲೆ ಕೆಲ ಸಂಘಟನೆಗಳು ಪ್ರಚೋದನೆ ಮಾಡುವ ಸಾಧ್ಯತೆ ಇದೆ.ಹೀಗಾಗಿ ಕಟ್ಟೇಚ್ಚರ ವಹಿಸಿದ್ದೇವೆ ಎಂದರು. ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಕೆಲವರು ಆಚರಣೆ ಮಾಡುವ ಸಾಧ್ಯತೆ ಇದೆ ಹಾಗು ಈದ್ ಮಿಲಾದ್ ಇರುವುದರಿಂದ ಎರಡು ಮೂರು ದಿನ ಕಟ್ಟೆಚ್ಚರದಿಂದ ಇರುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಮುಖ್ಯಮಂತ್ರಿ ಅವರಿಗೂ ಈ ಬಗ್ಗೆ ವರದಿ ನೀಡಿದ್ದೇನೆ.ಈ ಮೂರು ದಿನಗಳ ನಮಗೆ ತುಂಬಾ ಚಾಲೆಂಜ್ ಆಗಿರಲಿವೆ.ಅದಕ್ಕಾಗಿ ಎಲ್ಲಾ ಭದ್ರತೆ,ನಿವಾಹಿಸುವ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು. ರಾಜ್ಯದ ಎಲ್ಲೆ ಜಿಲ್ಲೆಗಳಲ್ಲಿ ಪರಿಸ್ಥಿತಿ ಹತೋಡಿಯಲ್ಲಿದೆ ಎಂದು ಪ್ರಾಥಮಿಕ ವರದಿ ನೀಡಿದ್ದೇನೆ. ಮುಖ್ಯಮಂತ್ರಿ ಅವರು ಸಹ ಬೆಂಗಳೂರಿನಲ್ಲಿಯೆ ಇದ್ದು ಎಲ್ಲವನ್ನ ಎಚ್ಚರಿಕೆಯಿಂದ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ತಿಳಿಸಿದರು.