ಅತ್ಯಾಚಾರ, ದೌರ್ಜನ್ಯ, ಹಿಂಸೆ, ಅಗೌರವ, ಅಪಮಾನಗಳಿಗೆ ಸಾವಿರಾರು ಮಹಿಳೆಯರು ಬಲಿಯಾಗುತ್ತಾರೆ:ಮಂಜುಳ
Thousands of women fall victim to rape, abuse, violence, disrespect and insults: Manjula
ಬಳ್ಳಾರಿ 23: ನಗರದಲ್ಲಿ ಎಐಎಂಎಸ್ ಎಸ್ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನದ ಅಂಗವಾಗಿ ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಕಚೇರಿ ಹಿಂಭಾಗದ ಪತ್ರಿಕೆ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆಕ್ರೋಶವಾಗಲಿ ಆಕ್ರಂದನ ನಡೆ, ಸಮಾನತೆಯ ಭವಿಷ್ಯದೆಡೆ ಪುಸ್ತಕ ಬಿಡುಗಡೆ ಮಾಡಲಾಯಿತು.ಇದೇ ವೇಳೆಯಲ್ಲಿ ಎಐಎಂಎಸ್ ಎಸ್ ರಾಜ್ಯಾಧ್ಯಕ್ಷರಾದ ಎಂ ಎನ್ ಮಂಜುಳ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡುತ್ತಾ, 2024ರಲ್ಲಿ ಇಸ್ರೋದ ಪಿಎಸ್ ಎಲ್ ವಿ ಹಿ ಸಿ 58 ಮಿಷನ್ನ ಭಾಗವಾದ ಡಬ್ಲುಇಎಸ್ ಎಟಿ ನ್ಯಾನೋ ಉಪಗ್ರಹವನ್ನು ಮೊಟ್ಟಮೊದಲ ಬಾರಿಗೆ ಸಂಪೂರ್ಣವಾಗಿ ತಾವೇ ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿದ ನಾರಿಯರು, 2025ರ ವಿಶ್ವಕಪ್ ಕ್ರಿಕೆಟ್ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ತನುಜೆಯರು ಪುರುಷ ಪ್ರಾಬಲ್ಯತೆಗೆ ಸೆಡ್ಡು ಹೊಡೆದು ಭಾರತದ ಇತಿಹಾಸಕ್ಕೆ ಹೊಸ ಅಧ್ಯಾಯಗಳನ್ನು ಬರೆದಿದ್ದಾರೆ.
ಹೀಗೆ ಒಂದೆಡೆ ನೂರಾರು ಮಹಿಳೆಯರು ತಮ್ಮ ಸಾಧನೆಯ ಹಾದಿಯಲ್ಲಿ ಬರುವ ಹಲವಾರು ಅಡೆತಡೆ, ಸವಾಲುಗಳನ್ನು ಎದುರಿಸಿ ಮೆಟ್ಟಿನಿಂತು ವಿಜ್ಞಾನ, ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಛಾಪನ್ನು ಮೂಡಿಸುತ್ತಾ ತಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಸಮಾನ ಅವಕಾಶ ದೊರೆತರೆ ತಾವೂ ಸಹ ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸಾಬೀತು ಪಡಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಈ 21ನೇ ಶತಮಾನದಲ್ಲೂ ಜ್ಞಾನದ ಬಾಗಿಲು ತೆರೆದಿಲ್ಲ. ಆರೋಗ್ಯ ಮತ್ತು ಉದ್ಯೋಗ ಭದ್ರತೆಯಂತೂ ಕನಸಿನ ಮಾತಾಗಿದೆ. ಜೊತೆಗೆ ಪ್ರತಿನಿತ್ಯ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಅಗೌರವ, ಅಪಮಾನಗಳಿಗೆ ಸಾವಿರಾರು ಮಹಿಳೆಯರು ಬಲಿಯಾಗುತ್ತಿದ್ದಾರೆ.
ಈ ಮಹಿಳೆಯರ ಆಕ್ರಂದನಗಳು ನಾಗರಿಕವೆನಿಸಿಕೊಂಡಿರುವ ನಮ್ಮ ಸಮಾಜದ ಅಂತ:ಸಾಕ್ಷಿಯ ಕದವನ್ನು ಮತ್ತೆ ಮತ್ತೆ ತಟ್ಟಿ ಇಂತಹ ವಿಕೃತ ಪಾತಕಗಳಿಗೆ ಕೊನೆ ಯಾವಾಗ ಎಂದು ಕೇಳುತ್ತಿವೆ ಎಂದರು.ಇಂತಹ ಅಮಾನವೀಯ ವ್ಯವಸ್ಥೆಯ ವಿರುದ್ಧ ನಾವೆಲ್ಲ ಸುದೀರ್ಘವಾದ ಸಂಗ್ರಾಮಕ್ಕೆ ಸಜ್ಜಾಗಬೇಕಾಗಿದೆ. ಸಕಲ ಮಹಿಳೆಯರನ್ನು ಜಾಗೃತರನ್ನಾಗಿಸಿ ಸಂಘಟಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಎಐಎಂಎಸ್ ಎಸ್ ಯ ಕರ್ನಾಟಕ ರಾಜ್ಯ ಸಮಿತಿಯು 25 ನವೆಂಬರ್ 2025ರಿಂದ 25 ಮಾರ್ಚ್ 2026ರವರೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಸಹಿ ಸಂಗ್ರಹಣಾ ಅಭಿಯಾನ, ಪ್ರತಿಭಟನೆಗಳು, ಸಭೆ-ಸಮಾವೇಶಗಳು, ಮೆರವಣಿಗೆ, ಗುಂಪು ಚರ್ಚೆಗಳು, ಸಿನಿಮಾ ಪ್ರದರ್ಶನ, ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲಾ ಸ್ತರದ ಮಹಿಳೆಯರನ್ನು ಜಾಗೃತಗೊಳಿಸುವ ಕಾರ್ಯಕೈಗೊಂಡಿದೆ.
ಇದರ ಭಾಗವಾಗಿ ಜನವರಿ 7, 2026 ರಂದು ಗಾಂಧಿಭವನ, ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.2026ರ ಜನವರಿ 7ರ ಸಮಾವೇಶಕ್ಕೆ ಅತಿಥಿಗಳಾಗಿ ಶ್ರೀಮತಿ ಹೇಮಲತಾ ಮಹಿಷಿ (ಹಿರಿಯ ವಕೀಲರು, ಬರಹಗಾರರು, ಬೆಂಗಳೂರು) ಡಾ: ಶ್ರೀದೇವಿ ಕುಮಾರ್ (ಮನಶಾಸ್ತ್ರ ವಿಭಾಗ, ನಿಮ್ಹಾನ್ಸ್, ಬೆಂಗಳೂರು)ಡಾ: ಸುಧಾಕಾಮತ್ (ಪ್ಲಾಸ್ಟಿಕ್ ಸರ್ಜನ್, ಬೆಂಗಳೂರು) ಪ್ರೊ. ಸಬಿಹಾ ಭೂಮಿಗೌಡ (ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ವಿಜಯಪುರ) ಪ್ರೊ. ರಾಮೇಶ್ವರಿ ವರ್ಮಾ (ಪ್ರಸಿದ್ಧ ರಂಗಕರ್ಮಿ, ಮೈಸೂರು) ರಾಜ್ಯಾದಾದ್ಯಂತ ಎಲ್ಲಾ ಜಿಲ್ಲೆಗಳಿಂದ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸಮಾವೇಶದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಿ, ಅತ್ಯಾಚಾರಗಳ ಪ್ರಕರಣಗಳನ್ನು ತ್ವರಿತವಾಗಿ ನಡೆಸಲು ಫಾಸ್ಟ್ ಟ್ಯ್ರಕ್ ಕೋರ್ಟ್ಗಳನ್ನು ಸ್ಥಾಪಿಸಿ.
ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಿ, . ಅಶ್ಲೀಲ ಸಿನಿಮಾ-ಸಾಹಿತ್ಯ, ಜಾಹೀರಾತು, ವೆಬ್ಸೈಟ್, ಮದ್ಯ-ಮಾದಕ ವಸ್ತುಗಳನ್ನು ನಿಷೇಧಿಸಿ, ಶಾಲಾಮಟ್ಟದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಆದರ್ಶಪ್ರಾಯ ಚೇತನಗಳ ಚರಿತ್ರೆಯನ್ನು ಲಿಂಗಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಬೋಧಿಸಿ, ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಗಟ್ಟಿ., ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಿ. ಎಲ್ಲಾ ಮಹಿಳೆಯರಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಖಾತ್ರಿಪಡಿಸಿ. , ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ಸ್ಥಾಪಿಸಿ, ಹಕ್ಕು ಒತ್ತಾಯಗಳಾಗಿವೆ.ಈ ಸಂದರ್ಭದಲ್ಲಿ ಎಐಎಂಎಸ್‌ಎಸ್ನ ಜಿಲ್ಲಾಧ್ಯಕ್ಷರಾದ ಕೆ. ಎಂ. ಈಶ್ವರಿ, ಪದಾಧಿಕಾರಿಗಳಾದ ಪದ್ಮ, ಗಿರಿಜಾ, ಸೌಮ್ಯ, ಅಭಿಲಾಷ, ಪಾರ್ವತಮ್ಮ, ಸುಜಾತ, ವಿದ್ಯಾ,ಇತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 