ಗುರುಪೌರ್ಣಮಿಯ ಪ್ರಯುಕ್ತ ಬಾಬಾ ದರ್ಶನ ಪಡೆದ ಸಾವಿರಾರು ಜನ ಭಕ್ತಾದಿಗಳು


ಲೋಕದರ್ಶನ ವರದಿ

ಬಳ್ಳಾರಿ27: ನಗರದ ಡಾ|| ರಾಜ್ ಕುಮಾರ್ ರಸ್ತೆಯಲ್ಲಿರುವ ವಿಶಾಲನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ಬೆಳಗಿನ ಆರಥಿ ಕಾರ್ಯಕ್ರಮದಿಂದ ಸಾವಿರಾರು ಭಕ್ತರು ಶಿರಡಿ ಸಾಯಿಬಾಬಾನ ದರ್ಶನ ಪಡೆದು ಪವನಿತರಾದರು. ಜನರು ಶ್ರದ್ಧಾಭಕ್ತಿಯಿಂದ ಸಾಲಿನಲ್ಲಿ ಬಂದು ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವಿಕರಿಸಿದರು. ಪ್ರಸಾದ ನೀಡುವ ವ್ಯೆವೆಸ್ಥೆಯು ಬಹಳ ಅಚ್ಚುಕಟ್ಟಾಗಿ ನೆರವೆರಿಸಿದ್ದರು. 

ಗುರುಪೌರ್ಣಮಿಯ ದಿನವಾದ ಇಂದು ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಿದ್ದರು. ನೂರಾರು ಜನ ರಕ್ತಧಾನ ಮಾಡಿ ತಮ್ಮ ಸೇವೆಯನ್ನು ನೀಗಿಸಿಕೊಂಡರು. ಇದೇ ರೀತಿ ಕೌಲ್ಬಜಾರ್, ಭ್ರಹ್ಮಣ ಬೀದಿ, ಸತ್ಯನಾರಾಯಣ ಪೇಟೆಯಲ್ಲಿರುವ ಬಾಬಾ ಮಂದಿರಕ್ಕೂ ಸಹ ಬೇಟಿ ನೀಡಿ ದರ್ಶನ ಪಡೆದದ್ದು ಕಂಡುಬಂತು. ಜಾತಿ, ಮತ ಬೇದವಿಲ್ಲದೇ ಎಲ್ಲರೂ ದೇವಸ್ಥಾನದವರು ನಿಮರ್ಿಸಿದ ಸರತಿ-ಸಾಲಿನಲ್ಲಿ ಬಂದು ದರ್ಶನ ಪಡೆದರು. ಬೆಳಗಿನ ಕಾಕಡಾರತಿಯಿಂದ ಗಣಪತಿ ಪೂಜೆ ಬಾಬಾ ಅವರಿಗೆ ಮಂಗಳಸ್ಥಾನ, ಕ್ಷೀರಾಭಿಷೇಕ, ಸಾಯಿ     ಚರತ್ರೆ ಪಾರಯಣ, ಸಂಕಿರ್ಥನೆ, ಅರ್ಚನೆ, ಪೂಜೆ, ಸತ್ಯವೃತವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು. ಶ್ರೀ ಸಾಯಿಬಾಬಾ ಸಮಾಧಿಯಾಗಿ ನೂರು ವರ್ಷ ಕಳೆದಿರುದಿವುದರಿಂದ ಈ ವರ್ಷ ವಿಶೇಷವಾಗಿ ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರಕ್ಕೆ ಬೇಟಿ ನೀಡುತ್ತಿದ್ದಾರೆ ಎಂದು ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.