ಹೆಚ್ಚು ಕಲಿತವರಿಗೆ ಹೆಚ್ಚು ಕೌಶಲ್ಯಗಳು : ಶಂಕರಯ್ಯ

Those who learn more have more skills: Shankaraiah

ಹೆಚ್ಚು ಕಲಿತವರಿಗೆ ಹೆಚ್ಚು ಕೌಶಲ್ಯಗಳು : ಶಂಕರಯ್ಯ

ಕೊಪ್ಪಳ 26:  ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ಸಮಸ್ಯೆಗಳು ಹೆಚ್ಚು ಇರುತ್ತವೆ. ಕಲಿಯುವುದಕ್ಕೆ ಕೊನೆ ಎಂಬುದು ಇಲ್ಲ. ಹೆಚ್ಚು ಕಲಿತವರಿಗೆ  ಹೆಚ್ಚು ಕೌಶಲ್ಯ ಇರುತ್ತವೆ ಎಂದು ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಹೇಳಿದರು. 

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಕಾಲೇಜಿನ ಐಕ್ಯೂಎಸಿ ಮತ್ತು ಪ್ರೇರಣಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೇರಣಾ ಮೆಂಟರ್‌ಶಿಪ್ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇರುತ್ತದೆ. ಕೀಳರಿಮೆ ಇರಬಾರದು.ಚನ್ನಾಗಿ ಓದಿ ನಮ್ಮ ಬದಕನ್ನು ಕಟ್ಟಿಕೊಳ್ಳಬೇಕು. ನಮ್ಮಲ್ಲಿ ಆತ್ಮ ವಿಶ್ವಾಸ ಇರಬೇಕು.ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ತಾಳ್ಮೆ ಮತ್ತು ಇಚ್ಚಾ ಶಕ್ತಿಇರಬೇಕು. ಆಗ ಮಾತ್ರ ಉದ್ಯೋಗ ಪಡೆದುಕೊಳ್ಳಬಹುದು. ನಿಮ್ಮಲ್ಲಿ ನಿರಂತರ ಪ್ರಯತ್ನ ಮತ್ತು ಛಲ ಇರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರೆರಣಾ ಘಟಕದ ಸಂಚಾಲಕ  ವಿಠೋಬ ಎಸ್ ಅವರು  ಮಾತನಾಡುತ್ತ  ಪ್ರೇರಣಾ ಮೆಂಟರ್ ಶಿಪ್ ನ ಮೂಲಕ ಸಂವಹನ ಕಲೆ, ಸಂಶೋಧನೆ, ಉದ್ಯೋಗದ ಕೌಶಲ್ಯಗಳನ್ನು ಕಲಿಯಬಹುದು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕುಂದುಕೊರತೆ ಗುರುತಿಸಿ ಅವುಗಳನ್ನು ಬಗೆಹರಿಸುವುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಎದುರಿಸುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಸ್ವತಂತ್ರವಾಗಿ ಬದಕನ್ನು ಕಟ್ಟಿಕೊಳ್ಳಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತ ವಾಗುತ್ತದೆ. ನಿಮಗೆ ತಾಳ್ಮೆಇರಬೇಕು. ತಾಳ್ಮೆ ಯಿಂದ ಸುಖ ಜೀವನ ಇರುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಚಾರ್ಯ ಡಾ. ಗಣಪತಿ ಕೆ ಲಮಾಣಿಯವರು  ಸಮಾಜದಲ್ಲಿ ಉತ್ತಮ ಗುಣಗಳನ್ನು ಕಲಿಯಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತ. ಇಂತಹ ಕಾರ್ಯಕ್ರಮಗಳ ಸೌಲಭ್ಯ ಗಳು ಮತ್ತು ಪ್ರಯೋಜನವನ್ನು ಪಡೆದುಕೊಳ್ಳಬೇಕು. ಪದವಿ ಮುಗಿದ ನಂತರ ಏನು ಓದಬೇಕು, ಯಾವ ಪರೀಕ್ಷೆ ಬರೆಯಬೇಕು ಎಂಬುದನ್ನು ಈಗನಿಂದಲೇ ಪ್ರಯತ್ನ ಮಾಡಬೇಕು. ಇದು ಸ್ಪರ್ಧಾತ್ಮಕ ಯುಗ. ನೀವು ಈಗನಿಂದಲೇ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ   ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್ ನ ಗೌರವ ಮಾರ್ಗದರ್ಶಕ ಶರಣಯ್ಯ ಅಬಿಗೇರ ಮಠ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಅಶೋಕ ಕುಮಾರ್, ಡಾ. ಪ್ರದೀಪ್ ಕುಮಾರ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಸುಮಿತ್ರಾ, ಉಮಾದೇವಿ ಮತ್ತು ಉಮೇಶ್ ಕಾತರಕಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ನೇತ್ರಾವತಿ ನಿರೂಪಿಸಿದರು. ಸಹನಾ ವಂದಿಸಿದರು, ಮಹಾದೇವಿ ಪ್ರಾಥನೆ ಗೀತೆ ಹಾಡಿದರು. ತಸ್ಲೀಫ್ ಸ್ವಾಗತಿಸಿದರು.