ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹೆಚ್ಚಿಸಿದವರು : ಎಸ್‌.ಜಿ. ನಾಡಗೀರ

 ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹೆಚ್ಚಿಸಿದವರು : ಎಸ್‌.ಜಿ. ನಾಡಗೀರ Those who increased the sanctity of the teaching profession: S.G. Nadagira

ಧಾರವಾಡ 11 :  ನಾಡಗೀರ ಮಾಸ್ತರ ಎಂದೇ ಜನಮಾನಸದಲ್ಲಿ ಶಾಶ್ವತವಾಗಿ ಸ್ಮರಣೀಯರಾದ ದಿ. ಎಸ್‌.ಜಿ. ನಾಡಗೀರ ಗುರುಗಳು ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹೆಚ್ಚಿಸಿದವರು ಎಂದು ವಿಶ್ರಾಂತ ಉಪನ್ಯಾಸಕರಾದ ಪ್ರೊ. ಹರ್ಷ ಡಂಬಳ ಅಭಿಪ್ರಾಯಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಎಸ್‌.ಜಿ. ನಾಡಗೀರ ಸ್ಮರಣಾರ್ಥದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಾಡಗೀರ ಮಾಸ್ತರ ಸ್ಮರಣೆ’ ವಿಷಯ ಕುರಿತು ಮಾತನಾಡುತ್ತಿದ್ದರು. 

ದಿ. ಎಸ್‌.ಜಿ. ನಾಡಗೀರಅವರು 1938 ರಿಂದ 1976ರ ವರೆಗೆ ಕೆ.ಇ.ಬೋರ್ಡ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿತ್ರಿಕರಣ ಶುದ್ಧಿಯಿಂದ ಸೇವೆ ಸಲ್ಲಿಸಿ ಕೆ.ಇ.ಬೋರ್ಡ್‌ ಶಾಲೆಯನ್ನುರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು.ಅವರದು ಸದಾ ಪ್ರಯೋಗಶೀಲ ಹೊಸತನದಗುಣವಾಗಿತ್ತು.ಶಿಸ್ತು, ಸಮಯ ಪ್ರಜ್ಞೆಗೆಇನ್ನೊಂದು ಹೆಸರೇ ದಿ.ಎಸ್‌. ಜಿ. ನಾಡಗೀರ ಮಾಸ್ತರ. 

ತಮ್ಮ ವೃತ್ತಿಬಾಂಧವರ ಜೊತೆ ಆತ್ಮೀಯ ಸಂಬಂಧ ಹೊಂದಿದವರಾಗಿದ್ದರು. ಎಂತಹ ಸಮಸ್ಯೆ ಬಂದರೂದೃತಿಗೆಡದೇ ಆತ್ಮವಿಶ್ವಾಸದೊಂದಿಗೆ ಎದುರಿಸುವ ಸಾಮರ್ಥ್ಯಅವರಲ್ಲಿತ್ತು. ಆಗಿನ ಕಾಲ ಘಟ್ಟದಲ್ಲಿಯೇ ಸಾಮಾಜಿಕ ನ್ಯಾಯ ಪರಿಪಾಲಕರಾಗಿಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಅವರು ಬದುಕ ಕಟ್ಟಿಕೊಳ್ಳಲು ಅನುಕೂಲಿಸಿದರು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜೀವನ ಪರ್ಯಂತ ಶ್ರಮವಹಿಸಿ ಕಾರ್ಯಗೈದರು. ಅವರದು ದೂರದೃಷ್ಟಿಯ ಗುಣ.ಅಪಾರ ಸ್ಮರಣ ಶಕ್ತಿಯುಳ್ಳ ಅವರು ಮಾತೃ ಹೃದಯಿಗಳಾಗಿದ್ದರು. ನಾಡಗೀರ ಮಾಸ್ತರಖ್ಯಾತ ಶಿಕ್ಷಣ ತಜ್ಞಡಾ. ಗುರುರಾಜ ಕರ್ಜಗಿಅವರಂತಹ ಸಹಸ್ರಾರು ಶಿಷ್ಯ ಬಳಗ ದೇಶದಾದ್ಯಂತ ಹೊಂದಿದ್ದಾರೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ದತ್ತಿದಾನಿಗಳಾದ ಅರುಣ ನಾಡಗೀರ ಮಾತನಾಡಿ, ದಿ.ಎಸ್‌.ಜಿ. ನಾಡಗೀರಅವರ ನಡೆ-ನುಡಿಗಳೇ ಒಂದೊಂದು ಪಾಠಗಳಂತಿದ್ದವು. ಅವರು ಶಿಕ್ಷಕರಾಗಿ ಸಾರ್ಥಕ ಜೀವನ ಸಾಗಿಸಿದರು. ಸಹಸ್ರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ವೃತ್ತಿಧರ್ಮ ಕಾಪಾಡಿದರು. ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಆತ್ಮವಿಶ್ವಾಸ ತುಂಬುವಕಾರ್ಯ ಮಾಡಿದರು ಎಂದರು. 

ದಿ. ಎಸ್‌. ಜಿ. ನಾಡಗೀರ ಮಾಸ್ತರ ಶಿಷ್ಯರಾದ ಶ್ರೀಕಾಂತ ಪಾಟೀಲ ಹಾಗೂ ಡಾ.ಡಿ.ಎಸ್‌. ರಾಜಪುರೋಹಿತರುತಮ್ಮ ಗುರುಗಳೊಂದಿಗಿನ ಒಡನಾಟದ ಸುಮಧುರ ಕ್ಷಣಗಳನ್ನು ಹಂಚಿಕೊಂಡರು.  

ವೀರಣ್ಣಒಡ್ಡೀನ ಸ್ವಾಗತಿಸಿ, ವಂದಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಸತೀಶತುರಮರಿ, ಡಿ.ಎಂ.ನಿಡವಣಿ, ಎಂ.ಎಂ.ಚಿಕ್ಕಮಠ, ಆನಂದಕುಲಕರ್ಣಿ, ಸಂಗಮೇಶ ಹಡಪದ, ಚಂದ್ರು ಮುತ್ತಗಿ, ಎಂ.ಜಿ.ಸುಭೇದಾರ, ಎಸ್‌.ಕೆ.ಕುಂದರಗಿ, ಎಸ್‌.ಜಿ. ಖಾಸನೀಸ, ಭಾರತಿಉಣಕಲ್, ಆರ್‌.ಎಸ್‌.ದಳವಾಯಿ, ಸಿ.ಆರ್‌.ಜೋಶಿ ಸೇರಿದಂತೆ ಕೆ.ಇ.ಬೋರ್ಡಆಂಗ್ಲ ಸಂಸ್ಥೆಗಳ ಸಿಬ್ಬಂದಿ, ನಾಡಗೀರ ಪರಿವಾರದವರುಇದ್ದರು.