ಧಾರವಾಡ 13: ಆತ್ಮಾನಂದವೆಂದರೆ, ಆತ್ಮದ ಆನಂದ. ಯಾರು ಆತ್ಮದಿಂದ ಆನಂದ ಪಡೆಯುತ್ತಾರೋ ಅವರು ಆತ್ಮಾನಂದರಾಗುತ್ತಾರೆ. ಯಾರು ಸಮಾಜದಲ್ಲಿ ಲೌಕಿಕ ವಸ್ತುಗಳಿಂದ ಆನಂದವನ್ನು ಹೊಂದುತ್ತಾರೋ ಅವರು, ಬರೀ ಆನಂದವನ್ನಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಅವರು ಮನುಷ್ಯರಾಗಿ ಮಾತ್ರ ಬದುಕಿ ಹೋಗುತ್ತಾರೆ ವಿನಃ ಅವರು ಎಂದೂ ಶರಣರಾಗುವುದಿಲ್ಲ, ಸಂತರಾಗುವುದಿಲ್ಲ, ಇನ್ನೊಬ್ಬರಿಗೆ ಆದರ್ಶಪ್ರಾಯರಾಗುವುದಿಲ್ಲ. ಅದೇ ಆತ್ಮದಿಂದ ಆನಂದ ಪಡೆಯುವವರು ಶರಣರು, ಸಂತರು, ಮಹಾತ್ಮರಾಗುತ್ತಾರೆ ಎಂದು ನಿವೃತ್ತ ಪ್ರೊಫೆಸರ ಪ್ರೊ. ಎಸ್. ಎಸ್. ಕುರುಬರ ಅಭಿಪ್ರಾಯಪಟ್ಟರು
ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ `ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಹಾಗೂ ಚಾರಿಟೇಬಲ್ ಟ್ರಸ್ಟ್ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ `ಪರಮಾನಂದದೆಡೆಗೆ' (ಗುರುದೇವ ಅತ್ಮಾನಂದರ ಪ್ರವಚನ ಸಂಗ್ರಹ) ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.
ಇಂದಿನ ಕಾಲದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮಾಧಾನ ಎನ್ನುವುದು ಒಡೆದು ಮೂರು ಭಾಗವಾಗಿದೆ. ಸ್ವಲ್ಪ ವಿಚಾರ ಮಾಡಿ ನೋಡಿದಾಗ ಸುಖ, ಶಾಂತಿ, ನೆಮ್ಮದಿ ದೇಹಕ್ಕೇ ಬೇಕೋ, ಮನಸ್ಸಿಗೆ ಬೇಕೋ, ಆತ್ಮಕ್ಕೆ ಬೇಕೋ ? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದು ಸಣ್ಣ ಇರುವೆ ಕಡೆದರೂ ಅದಕ್ಕೆ ನೋವನ್ನು ಅನುಭವಿಸುತ್ತಾನೆ. ಅದೇ ಮನುಷ್ಯ ಜೀವವನ್ನು ಕಳೆದುಕೊಂಡ ಮೇಲೆ ಅವನ ಪಾಥರ್ಿವ ಶರೀರಕ್ಕೆ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆಯುತ್ತಾರೆ, ಆಗ ದೇಹಕ್ಕೆ ನೋವಾಗುವುದಿಲ್ಲ. ಏಕೆಂದರೆ ಮನುಷ್ಯನ ಶರೀರದಿಂದ ಆತ್ಮ ಬೇರ್ಪಟ್ಟಿರುತ್ತದೆ. ಆತ್ಮ ಎಂದೂ ಸಾಯುವುದಿಲ್ಲ, ದೇಹ ಮಾತ್ರ ನಾಶವಾಗುತ್ತದೆ. ನಾಶವಾಗುವ ದೇಹಕ್ಕೆ ಎಷ್ಟೊಂದು ಅಸೆ, ಮೋಹ, ವ್ಯಾಮೋಹ. ಇವೆಲ್ಲವೂ ಅವಶ್ಯವೆ, ವಿಚಾರ ಮಾಡಬೇಕು ಮನುಷ್ಯ. ನಾಶವಾಗುವ ದೇಹ ಭೂಮಿ ಮೇಲೆ ಗಟ್ಟಿಯಾಗಿರುವ ತನಕ, ದೀನದಲಿತರ, ಬಡಬಗ್ಗರ ಸೇವೆ ಮಾಡಿ, ಸತ್ಯ ಶುದ್ಧ ಕಾಯಕ, ದಾಸೋಹ ಮಾಡಿ ಭಗವಂತನ ಪ್ರೀತಿಗೆ ಪಾತ್ರರಾಗಿ ಮುಕ್ತಿ ಹೊಂದಬೇಕು, ಮನುಷ್ಯ ಅತಿಯಾದ ಆಸೆಯನ್ನು ತ್ಯಜಿಸಿ ಸರಳ ಜೀವನ ಹೊಂದಿ ಆತ್ಮಾನಂದದೆಡೆಗೆ ಸಾಗಬೇಕು ಎಂದರು.
ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು `ಪರಮಾನಂದದೆಡೆಗೆ' ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಮಾರ್ಕಂಡೇಯ ದೊಡಮನಿ ಒಬ್ಬ ಶರಣ, ಇವರು ಆತ್ಮಾನಂದರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಗ್ರಂಥ ದಾನಿ ಮಂಗಳೂರು ಸುರತ್ಕಲ್ ಇಂಜನೀಯರಿಂಗ್ ಕಾಲೇಜಿನ ಡಾ. ಬಸವಾನಂದ ದೊಡಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾರ್ಕಂಡೇಯ ದೊಡಮನಿ ಮಾತನಾಡಿ, ದತ್ತಿ ಆಶಯ ವಿವರಿಸಿದರು. ವೇದಿಕೆಯಲ್ಲಿ ಸುಶೀಲಾ ಮಾ. ದೊಡಮನಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಬ. ಗಾಮನಗಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.
ರಂಗಾಯಣ ನೂತನ ನಿದರ್ೇಶಕ ರಮೇಶ ಪರವಿನಾಯಕ, ವಿಠ್ಠಲ ಕೊಪ್ಪದ, ಜಿಗಜಿನ್ನಿ, ಸಿತಾರಾಮ ಶೆಟ್ಟಿ, ಅಶೋಕ ನಿಡವಣಿ, ಮಹಾಂತಪ್ಪ ಅಂಗಡಿ, ಚನಬಸಪ್ಪ ಅವರಾದಿ ಹಾಗೂ ದೊಡಮನಿ ಕುಟುಂಬದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.