ಸಮಸ್ಯೆಗಳನ್ನು ಎದುರಿಸಲು ಶಕ್ತಿ ಕೊಟ್ಟವರು ಬಸವಾದಿ ಶರಣರು

ಬೆಳಗಾವಿ 1- ಮನುಷ್ಯರಿಗೆ ಒದಗುವ  ಸಮಸ್ಯೆಗಳಿಗೆ  ಪರಿಹಾರವಾಗಿ ವಚನಗಳು ಮೂಡಿ ಬಂದಿವೆ.ಅಂತರಂಗದ  ಶೋಧನೆ  ಮಾಡಿಕೊಮಡು ಬದುಕು ಕಟ್ಟಿಕೊಳ್ಳಬೇಕು. ವಚನಗಳ ಮುಖಾಂತರ ಸಮಸ್ಯೆಗಳನ್ನು ಎದುರಿಸಲು ಶಕ್ತಿ ಕೊಟ್ಟವರು  ಬಸವಾದಿ ಶರಣರು ಎಂದು  ಅಡಿವೆಪ್ಪ ಇಟಗಿ ಇಂದಿಲ್ಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ(ರಿ) ಜಿಲ್ಲಾ ಘಟಕ  ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಸಂಯುಕ್ತ ಆಶ್ರಯದಲಿ ಇದೇ ದಿ.  28  ಶನಿವಾರದಂದು ಸಾಯಂಕಾಲ 6-30 ಕ್ಕೆ ಮಹಾಂತೇಶನಗರದಲ್ಲಿರುವ ಮಹಾಂತ ಭವನದಲ್ಲಿ ಮಾಸಿಕ ಅನುಭಾವ ಸಂತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬಸವಣ್ಣನವರ ವಚನಗಳಲ್ಲಿ ಆಧ್ಯಾತ್ಮಿಕ ಚಿಂತನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತ ಇಟಗಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ  ಅರವಿಂದ ಪರುಶೆಟ್ಟಿ ಅವರು ವಹಿಸಿದ್ದರು. ಅವರು ವಚನಗಳನ್ನು ಆಧಾರವಾಗಿಟ್ಟುಕೊಂಡು ವೈಜ್ಞಾನಿಕವಾಗಿ ತಯಾರಿಸಿದ ಲಿಂಗಪೂಜೆಯ ಪರಿಣಾಮ ಕುರಿತು ಮಾತನಾಡಿದರು.

ತುರುಮರಿಯ ಶರಣ ಹಂಜಿ ಹಾಗೂ ಶೃತಿ ಗುಡುಸ ವಚನ ಸಹಿತ್ಯ ಕುರಿತು ಮಾತನಾಡಿದರು. ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಸರಳಾ ಹೇರೆಕರ, ನಗರ ಘಟಕದ ಅಧ್ಯಕ್ಷ ಕಾಶಪ್ಪಣ್ಣಾ ಉಪ್ಪಿನ, ಶಂಕರ ಗುಡುಸ ಮುಂತಾದವರು ಭಾಗವಹಿಸಿದ್ದರು.ಕು. ಬಸ್ಸಮ್ಮ  ಇವರಿಂದ ವಚನಗಾಯನ ಜರುಗಿತು.ಪ್ರಾರಂಭದಲ್ಲಿ ಮಂಜುಳಾ ರಾಮನಗೌಡ ಪಾಟೀಲ ದಂಪತಿಗಳಿಂದ ಷಟಸ್ಥಲ ಧ್ವಜಾರೋಹಣ ಜರುಗಿತು.  ಶ್ರೀಮತಿ ಅನಸೂಯಾ ಬಸೆಟ್ಟಿ ಸ್ವಾಗತಿಸಿದರು. ಚಂದ್ರಪ್ಪ  ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು.  ಶ್ರೀಮತಿ ಮಹಾನಂದಾ ಪರುಶೆಟ್ಟಿ  ವಂದಿಸಿದರು.