ಕನ್ನಡ ಭಾಷೆಗೆ ಗೌರವ ನಿಡದವರು ನಾಡದ್ರೋಹಿಗಳು : ಮಹಾದೇವಪ್ಪ ಯಾದವಾಡ

ಲೋಕದರ್ಶನ ವರದಿ

ಬೆಳಗಾವಿ 16: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುವುದು ಸರಿಯಲ್ಲ, ಅದೇ ರೀತಿ ಕನ್ನಡ ಭಾಷೆಯ ಪರವಾಗಿರದ ಜನಪ್ರತಿನಿಧಿಗಳು ಭಾಷೆಗೆ ಮಾಡುತ್ತಿರುವ ದ್ರೋಹ ಎಂದು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಶಾಸಕರು ಪ್ರತಿ ವರ್ಷದಂತೆ ರಾಜ್ಯೋತ್ಸವ ಹಬ್ಬ ನಡೆಯಲಿದ್ದು ಎಂಇಎಸ್ ಕರಾಳ ದಿನಾಚರಣೆ ಮಾಡುವುದು ಸರಿಯಲ್ಲ ಎಂದರು.

ಸಂದರ್ಭದಲ್ಲಿ ರಾಮದುರ್ಗ ನ್ಯಾಯಾಲಯಕ್ಕೆ ನೂತನ ಕಟ್ಟಡದ ಸಲುವಾಗಿ ನಿವೇಶನ ಮಂಜೂರು ಮಾಡುವ  ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ

ರಾಮದುರ್ಗ ತಾಲೂಕಿನಲ್ಲಿರುವ ನ್ಯಾಯಾಲಯದ ಕಟ್ಟಡ 150 ವರ್ಷಗಳಷ್ಟು ಹಳೆದಾದಿದ್ದು ಕಿರಿಯ ಹಾಗೂ ಹಿರಿಯ ದಿವಾನಿ ನ್ಯಾಯಾಧೀಶರ ನ್ಯಾಯಾಲಯ ಒಂದರಲ್ಲಿ ಇರುವುದರಿಂದಾಗಿ ಹಹಳಷ್ಟು ತೊಂದರೆಯಾಗುತ್ತಿದೆ ಹಾಗಾಗಿ  ಶೀಘ್ರದಲ್ಲಿ ಹೊಸ ಕಟ್ಟಡ ನಿಮರ್ಿಸಬೇಕು ಎಂದು ರಾಮದುರ್ಗ ತಾಲೂಕಿನ ನ್ಯಾಯವಾದಿಗಳ ಸಂಘದ ವತಿಯಿಂದ ಶಾಸಕ ಯಾದವಾಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು.