ಲೋಕದರ್ಶನ ವರದಿ
ಘಟಪ್ರಭಾ 08: ಬುದ್ಧಿ ಮಾಂದ್ಯ ಮಕ್ಕಳಿಗೂ ಪ್ರೀತಿ ವಾತ್ಸಲ್ಯದ ಅವಶ್ಯಕತೆಯಿದೆ ನಾವು ಅವರನ್ನು ಕೂಡಾ ಪ್ರೀತಿಯಿಂದ ಕಾಣಬೇಕೆಂದು ಜಹಾಂಗೀರ ಬಾಗವಾನ ಹೇಳಿದರು.
ಅವರು ಗುರುವಾರದಂದು ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ಶ್ರೀ ದೂದನಾನ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬದ ನಿಮಿತ್ಯ ಮಕ್ಕಳಿಗೆ ಸಿಹಿ ಊಟ ಮತ್ತು ಹಣ್ಣು ವಿತರಿಸುವ ಮೂಲಕ ಈದೇ ಮೀಲಾದ ಹಬ್ಬವನ್ನು ಆಚರಿಸಿ ಮಾತನಾಡಿದರು, ಬುದ್ಧಿ ಮಾಂದ್ಯ ಮಕ್ಕಳು ವಿಶೇಷ ಗುಣಗಳನ್ನು ಹೊಂದಿದ್ದು, ಇವರೊಂದಿಗೆ ಕಾಲ ಕಳೆದ್ದಿದು ಸಂತಸ ತಂದಿದೆ. ಪ್ರತಿ ವರ್ಷದಂತೆ ಹಬ್ಬವನ್ನು ಈ ಶಾಲೆಯಲ್ಲಿ ಆಚರಿಸಲಾತ್ತಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಪಿ.ಜಿ ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ ಯಂಗ್ ಕಮೀಟಿ ಸದಸ್ಯರಾದ ಮೆಹಬೂಬ ಸಯ್ಯದ, ರಹೀಮಖಾನ ಪಠಾಣ, ಗಜಬಾರ ಬೋರಗಾಂವಿ, ರಿಯಾಜ ಬಾಡಕರ, ಅಲ್ತಾಫ ಉಸ್ತಾದ, ದಿಲಾವರ ಬಾಳೇಕುಂದ್ರಿ, ಪೈಜಲ್ ಬಾಗವಾನ, ಬುಡನಸಾಬ ಬಾಗವಾಲೆ, ಶಾಲೆಯ ಮುಖ್ಯೋಪಾದ್ಯಾಯರಾದ ಬಾಹುಬಲಿ ಸಂಕಣ್ಣವರ, ಶಿಕ್ಷಕರಾದ ಭೀಮಪ್ಪಾ ಭಜಂತ್ರಿ, ಶಿವಯೋಗಿ ಸಾರಾಪೂರ, ಎಸ್.ಬಿ.ಬೇಡೆಗಾರ, ಪದ್ಮಶ್ರೀ ಆಸಂಗಿ, ಆರತಿ ಗಿಡಗಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.