ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಲೇ ಈ ರೀತಿ ಘಟನೆ ಆಗುತ್ತಿವೆ: ಜಗದೀಶ ಶೆಟ್ಟರ್‌

ಬೆಳಗಾವಿ,13 : ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಭೆ ಪ್ರಕರಣ ಸಣ್ಣಪುಟ್ಟ ವಿಚಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಲೇ ಈ ರೀತಿ ಘಟನೆ ಆಗುತ್ತಿವೆ. ರಾಜ್ಯದಲ್ಲಿ ಈ ರೀತಿ ಯಾರು ಗಲಭೆಗೆ ಪ್ರಚೋದನೆ ಕೊಟ್ಟರೋ..? ಯಾರು ಕಲ್ಲು ಒಗೆದು ಹಾನಿ ಮಾಡಿದ್ದಾರೋ..? ಅವರ ರಕ್ಷಣೆ ಮಾಡೋ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. 

ಬೆಳಗಾವಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಗಲಭೆ ಮಾಡಿದವರು ಅಲ್ಪಸಂಖ್ಯಾತರು. ಇವತ್ತು ಗಣಪತಿ ಮೆರವಣಿಗೆ ಹೋಗುತ್ದೆ. ಅದಕ್ಕೆ ಮಸೀದಿ ಮುಂದೆ ಬರಬೇಡಿ ಅನೋದಕ್ಕೆ ಇವರಿಗೆ ಏನು ಹಕ್ಕು ಇದೆ ಎಂದು ಜಗದೀಶ ಶೆಟ್ಟರ್ ಪ್ರಶ್ನಿಸಿದರು. 

ನೀವು ಅವರಿಗೆ ರಕ್ಷಣೆ ಕೊಡಿ, ಮಸೀದಿಗೆ ತೊಂದರೆಯಾದರೆ ರಕ್ಷಣೆ ಕೊಡಿ. ಅದನ್ನು ಬಿಟ್ಟು ಅಲ್ಲಿ ಹೋಗಬೇಡಿ ಇಲ್ಲಿ ಹೋಗಬೇಡಿ ಎಂದರೆ ಹೇಗೆ..? ಇದು ಸ್ವತಂತ್ರ ಭಾರತ ದೇಶವಿದ್ದು, ಇಂಥವರಿಗೆ ಸಹಕಾರ ಕೊಡುವುದರಿಂದ ಇದೆಲ್ಲಾ ಪ್ರಾರಂಭ ಆಗುತ್ತಿದೆ. ರಾಜ್ಯದಲ್ಲಿ ಯಾವಾಗ ಯಾವಾಗ ಕಾಂಗ್ರೆಸ್ ಸರ್ಕಾರ ಬಂದಿದೆ, ಆಗ ರಾಜ್ಯದಲ್ಲಿ ಕೋಮುಗಲಭೆಗಳು ಸಂಭವಿಸಿವೆ. ಅದಕ್ಕೆ ಇದೊಂದು ಉದಾಹರಣೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು. 

ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ ಪ್ರಶ್ನೆಗೆ ಅದಕ್ಕೆ ನಾನು ಹೇಳೋದು, ಯಾರು ತಪ್ಪ ಮಾಡಿದ್ದಾರೆ, ಅವರ ರಕ್ಷಣೆ ಮಾಡುತ್ತಾರೆ. ಯಾರು ತಪ್ಪು ಮಾಡಿಲ್ಲವೋ ಅವರಿಗೆ ಶಿಕ್ಷೆ ನೀಡೋದು ಕಾಂಗ್ರೆಸ್ ಸರ್ಕಾರದ ನೀತಿ ಎಂದು ಜಗದೀಶ ಶೆಟ್ಟರ್, ಮಂಡ್ಯದ ನಾಗಮಂಗಲ ಗಲಭೆ ಸಣ್ಣಪುಟ್ಟ ಗಲಾಟೆ ಎಂಬ ಗೃಹ ಸಚಿವರ ಹೇಳಿಕೆಗೆ ಅವರ ಮನಸ್ಥಿತಿಯನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದು ಕಿಡಿಕಾರಿದರು. 

ನಾನೇ ಸಿಎಂ ಆಗಿ ಮುಂದುವರೆಯುವೆ ಎಂಬ  ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, ಆಪಾದನೆ ಬಂದಾಗ ಎಲ್ಲ ಮುಖ್ಯಮಂತ್ರಿಗಳು ನಾನೇ ಮುಂದುವರೆಯುತ್ತೇನೆ ಅಂತಾ ಹೇಳುತ್ತಾರೆ. ನನ್ನ ವಿರುದ್ಧ ತೀಪು ಬರುತ್ತದೆ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಅಂತಾ ಯಾವ ಮುಖ್ಯಮಂತ್ರಿ ಹೇಳೊದಿಲ್ಲ. ಅಲ್ಲಿ ರಾಜೀನಾಮೆ ಕೊಡುವವರು ಹೇಳಬೇಕು, ಹೇಳುತ್ತಾರಷ್ಟೇ. ಕೊನೆಗೆ ಅವರ ಹಣೆಬರಹ ಕೋರ್ಟ್‌ ನಲ್ಲಿ ನಿರ್ಧಾರವಾಗುತ್ತದೆ ಎಂದು ಕುಟುಕಿದರು.