ಬಡವರ, ಅವಶ್ಯಕತೆಯಿರುವವರಿಗೆ ಈ ಮಾನವೀಯತೆ ಗೋಡೆ ವರದಾನ: ಶಾಸಕ ರಾಮಣ್ಣ

ಲೋಕದರ್ಶನ ವರದಿ

ಶಿರಹಟ್ಟಿ 16: ಪ್ರಸ್ತುತ ದಿನಮಾನಗಳಲ್ಲಿ ಎಷ್ಟೋ ಜನರು ತಮಗೆ ಬೇಡವಾದ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹಾಳು ಮಾಡುವ ಇಂಥಹ ಕಾಲದಲ್ಲಿ ಜನರು ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿ ನಿಮರ್ಿಸಲಾದ ಮಾನವೀಯತೆಯ ಗೋಡೆಯಲ್ಲಿ ಇಟ್ಟುಹೋಗುವದರಿಂದ ನಿಮ್ಗೆ ಆ ಬೇಡವಾದ ವಸ್ತು ಅವಶ್ಯಕತೆಯುಳ್ಳವರಿಗೆ ಅದು ವರದಾನವಾಗಬಹುದು ಇಲ್ಲವೇ ಅವರ ಜೀವನಕ್ಕೆ ಸಹಾಯವಾಗಬಹುದು ಎಂದು ಶಾಸಕ ರಾಮಣ್ಣ ಲಮಾಣಿ ಕರೆ ನೀಡಿದರು.

ಅವರು ಅಗಸ್ಟ್ 15 ರಂದು ತಾಲೂಕಾಡಳಿತ ಕಚೇರಿ ಕಾಂಪೌಂಡ್ ಗೋಡೆಗೆ ಹೊಂದಿಕೊಂಡು ನಿಮರ್ಿಸಲಾದ ಮಾನವೀಯತೆ ಗೋಡೆಯನ್ನು ಉದ್ಗಾಟಿಸಿ ಮಾತನಾಡುತ್ತಾ, ಈ ಮಾನವೀಯತೆ ಗೋಡೆಯು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಅವರ ಸ್ವಂತ ಇಚ್ಚಾಶಕ್ತಿಯಿಂದ ನಿಮರ್ಾಣವಾಗಿದ್ದು, ಅವರ ಈ ಒಂದು ಕನಸು ಬಡವರಿಗೆ ಹಾಗೂ ಮಕ್ಕಳಿಗೆ ಅವಶ್ಯಕವಾಗಿರುವ ಬಟ್ಟೆ, ಪೆನ್ನು, ಪೆನ್ಸಿಲ್, ನೋಟ್ಬುಕ್ಸ್, ಶಾಲಾಪಯೋಗಿ ವಸ್ತುಗಳು ಯಾವುದೇ ಆಗಲಿ, ಯಾರೇ ಆಗಲಿ ಇಲ್ಲಿಟ್ಟು ಹೋಗುವದರಿಂದ ಪರೋಕ್ಷವಾಗಿ ದಾನಿಗಳು ಇಲ್ಲಿ ತಮ್ಮ ಸಮಾಜ ಸೇವೆಯ ಅಳಿಲು ಸೇವೆಯನ್ನು ಮಾಡಬಹುದಾಗಿದ್ದು ಇದರಿಂದ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಅವರು ಕನಸು ಸಾಕಾರಗೊಳ್ಳಬೇಕೆಂದು ಆಶಿಸಿದರು.