ಧನುರ್ಮಾಸ ಆರಂಭ, ತಿರುಪತಿ ತಿಮ್ಮಪ್ಪನಿಗೆ ಸುಪ್ರಭಾತ ಬದಲಿಗೆ ತಿರುಪ್ಪಾವೈ ಪಠಣ...!

ತಿರುಮಲ, ಡಿ ೧೬ ತಿರುಪತಿ -  ತಿರುಮಲ  ತಿಮ್ಮಪ್ಪನ  ಮಾಸೋತ್ಸವಗಳಲ್ಲಿ   ಅತ್ಯಂತ   ಪ್ರಮುಖ  ಎಂದು  ಪರಿಗಣಿಸಲಾಗಿರುವ ಧನುರ್ಮಾಸ   ಇಂದಿನಿಂದ  ಆರಂಭಗೊಂಡಿದೆ.   ಇಂದು  ಮಧ್ಯರಾತ್ರಿ ೧೧.೪೭ ಗಂಟೆಗೆ  ಧನುರ್ಮಾಸ ಪ್ರಾರಂಭಗೊಳ್ಳುವ  ಹಿನ್ನಲೆಯಲ್ಲಿ  ೧೭ ರಿಂದ  ತಿಮ್ಮಪ್ಪನಿಗೆ  ನಿತ್ಯ ನಡೆಸಲಾಗುವ  ನಡೆಸಲಾಗುವ  ಸುಪ್ರಭಾತ  ಸೇವೆಗೆ  ಬದಲಾಗಿ  ತಿರುಪ್ಪವಾವೈ  ಪಠಿಸಲಿದ್ದಾರೆ. ೧೨   ಮಂದಿ  ಆಳ್ವಾರ್  ಗಳಲ್ಲಿ   ಶ್ರೀ  ಆಂಡಾಳ್  (ಗೋದಾ ದೇವಿ) ಕೂಡಾ  ಒಬ್ಬರು.   ತಿಮ್ಮಪ್ಪನನ್ನ   ಸ್ತುತಿಸಿ    ಆಂಡಾಳ್   ರಚಿಸಿದ    ೩೦ ಪ್ರವಚನಗಳ  ಸಂಕಲನವನ್ನು  ತಿರುಪ್ಪಾವೈ ಎಂದು ಕರೆಯುತ್ತಾರೆ.ಆಳ್ವಾರ್  ದಿವ್ಯ ಪ್ರಬಂಧಗಳಲ್ಲಿ  ತಿರುಪ್ಪಾವೈ ಒಂದು ಭಾಗವಾಗಿದೆ.      ತಿಂಗಳ ಕಾಲ ನಡೆಯಲಿರುವ   ತಿರುಪ್ಪಾವೈ  ಪಾರಾಯಣದಲ್ಲಿ  ದಿನವೂ ಒಬ್ಬ ಆರ್ಚಕರು    ತಿರುಪ್ಪಾವೈ ಪಠಿಸಲಿದ್ದಾರೆ. ಸಾಮಾನ್ಯವಾಗಿ ಭೋಗ ಶ್ರೀನಿವಾಸ ಮೂರ್ತಿ ಬದಲಿಗೆ  ಶ್ರೀ ಕೃಷ್ಣ ಸ್ವಾಮಿಗೆ  ಏಕಾಂತ ಸೇವೆ  ನಿರ್ವಹಿಸುತ್ತಾರೆ.  ತಿರುಪ್ಪವಾಯಿ   ಪಠಣ  ಏಕಾಂತವಾಗಿ  ನಡೆಯುತ್ತದೆ.  ಜೊತೆಗೆ  ಈ ಮಾಸದಲ್ಲಿ  ಬರುವ  ವೈಕುಂಠ ಏಕಾದಶಿ,  ದ್ವಾದಶಿ ಪರ್ವ ದಿನಗಳಂದು ತಿಮ್ಮಪ್ಪನ  ದೇವಾಲಯದಲ್ಲಿರುವ   ವೈಕುಂಠ ದ್ವಾರಗಳನ್ನು ತೆರೆಯಲಿದ್ದಾರೆ.