ಬೆಳಗಾವಿ: 17 :ಕೋಲಾರ ಜಿಲ್ಲೆಯ ಕೋಲಾರ್ ಗೋಲ್ಡ್ ಫೀಲ್ಡ್ಸ್ (ಕೆ ಜಿ ಎಫ್) ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿ ಜಿ ಎಂ ಎಲ್) ಸ್ಥಗಿತಗೊಂಡಿವುದರಿಂದ ಅಲ್ಲಿನ ನಿರುದ್ಯೋಗಿ ಕಾಮರ್ಿಕರಿಗೆ ಅನುಕೂಲ ಕಲ್ಪಿಸಲು ತುಮಕೂರು ಮಾದರಿಯಲ್ಲಿಯೇ ಕೆ ಜಿ ಎಫ್ ನಲ್ಲೂ ಕೈಗಾರಿಕಾ ಅವಕಾಶಗಳನ್ನು ಸೃಜಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ. ಜೆ. ಜಾಜರ್್ ಅವರು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪ ವೇಳೆ ಶಾಸಕಿ ಎಂ. ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೆಜಿಎಫ್ನ ಸ್ಥಗಿತಗೊಂಡಿರುವ ಬಿಜಿಎಂಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಮರ್ಿಕರ ಶ್ರೇಯೋಭಿವೃದ್ಧಿ ಕೇಂದ್ರ ಸಕರ್ಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ಪ್ರದೇಶದಲ್ಲಿ ಉಪಯೋಗಿಸದೆಯೇ ಉಳಿದಿರುವ ಜಮೀನಿನಲ್ಲಿ ತುಮಕೂರು ನಗರದ ಸಮೀಪದಲ್ಲಿ ಕೇಂದ್ರ ಸಕರ್ಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಚೆನೈ-ಬೆಂಗಳೂರು ಕೈಗಾರಿಕಾ ಪಡೆಸಾಲೆಯ ಮಾದರಿಯಲ್ಲಿ ಕೆಜಿಎಫ್ನಲ್ಲೂ ಕೈಗಾರಿಕಾ ಪಡೆಸಾಲೆ ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ 2018 ರ ನವೆಂಬರ್ 13 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿಯವರಿಗೆ ನಾಲ್ಕು ತಿಂಗಳೊಳಗಾಗಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಜಮೀನು ಗುರುತಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.