ಬೆಳಗಾವಿ: 18 : ರಾಜ್ಯದ ಸಕರ್ಾರಿ ವೈದ್ಯಕೀಯ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಶುಲ್ಕವನ್ನು ಏರಿಕೆ ಮಾಡಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಆಥರ್ಿಕವಾಗಿ ಸ್ವಾಯತ್ತವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ರಾಜ್ಯ ವಿಧಾನಪರಿಷತ್ನಲ್ಲಿ ಇಂದು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್. ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 2006 ರ ನಂತರ ನೇಮಕಗೊಂಡ ಸಿಬ್ಬಂದಿಗಳಿಗೆ ನೂತನ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಹೆಚ್ಚುವರಿ ಅನುದಾನ ಒದಗಿಸಲು ಆಥರ್ಿಕ ಇಲಾಖೆಯನ್ನು ಕೋರಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಬೇಡಿಕೆ ಇರುವುದರಿಂದ ಈ ಸಂಸ್ಥೆಗಳನ್ನು ಆಥರ್ಿಕ ಸ್ವಾವಲಂಬನೆ ಆಧಾರದಲ್ಲಿ ನಿಮರ್ಿಸುವ ಗುರಿ ಇದೆ. ಸಕರ್ಾರಿ ವೈದ್ಯಕೀಯ ಕಾಲೇಜ್ಗಳಲ್ಲಿ ಪ್ರಸ್ತುತ ಪದವಿ ಪ್ರವೇಶಕ್ಕೆ 17 ಸಾವಿರ ಶುಲ್ಕ ಇದೆ. ಇದನ್ನು 50 ಸಾವಿರ ರೂ.ಗಳಿಗೆ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದ ಶುಲ್ಕವನ್ನು ಮೂರು ಲಕ್ಷ ರೂ.ಗಳಿಗೆ ಹೆಚ್ಚಿಸುವುದು.
ಜೊತೆಗೆ ಅನಿವಾಸಿ ಭಾರತೀಯರಿಗೆ ಸ್ಥಾನಗಳನ್ನು ಒದಗಿಸಲು ಚಿಂತನೆ ಇದೆ. ಇದರಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಆಥರ್ಿಕವಾಗಿ ಸಶಕ್ತವಾಗಲು ಸಾಧ್ಯ. ಸಕರ್ಾರಿ ಆಸ್ಪತ್ರೆಗಳಲ್ಲಿ ಬಹುತೇಕ ಎಲ್ಲ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವರು ವಿವರಿಸಿದರು.
ಸದಸ್ಯರಾದ ಡಾ ವೈ. ಎ. ನಾರಾಯಣಸ್ವಾಮಿ, ಆಯನೂರು ಮಂಜುನಾಥ ಅವರೂ ಚಚರ್ೆಯಲ್ಲಿ ಭಾಗವಹಿಸಿದ್ದರು.