ಕಲೆಯನ್ನು ಬೆಳೆಸುವುದರೊಂದಿಗೆ ತಾವು ಬೆಳೆಯಬೇಕು : ಸಿದ್ನಾಳ

ಲೋಕದರ್ಶನ ವರದಿ

ಬೆಳಗಾವಿ,10: ದೇವರು ಎಲ್ಲರಿಗೂ ಕಲೆಯನ್ನು ನೀಡಿರುವುದಿಲ್ಲ ಕೆಲವರಿಗೇ ಮಾತ್ರ ನೀಡಿರುತ್ತಾನೆ ಅದನ್ನು ಇನ್ನು ಹೆಚ್ಚೆಚ್ಚು ಬೆಳಸಿಕೊಂಡು ಕಲೆಯನ್ನು ಬೆಳೆಸುವುದರೊಂದಿಗೆ ತಾವು ಬೆಳೆಯಬೇಕು ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಪ್ರಕಾಶ ಸಿದ್ನಾಳ ಹೇಳಿದರು. 

ಇವರು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀ ಮಾತಾ ಆರ್ಟ ಗ್ಯಾಲರಿಯವರು ಆಯೋಜನೆ ಮಾಡಿದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು 

ಚಿತ್ರಕಲೆ ಬಣ್ಣ ರೇಖೆ ವಿನ್ಯಾಸದ ಮೂಲಕ ಜನರಿಗೆ ವಿಷಯದ ಆಳವನ್ನು ತಿಳಿಸಿಕೊಂಡುತ್ತದೆ. ಚಿತ್ರಕಲೆ ವಿಶ್ವ ಭಾಷೆಯಾಗಿದೆ. ಬೆಳಗಾವಿ ಜಲ್ಲೆಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಅವರು ರಚಿಸಿದ ಕಲಾ ಕೃತಿಗಳನ್ನು ಪ್ರದರ್ಶ ಮಾಡಲು ಅವರು ಆಥರ್ಿಕವಾಗಿ ಅಥವಾ ಬೇರೆಯಾವೂದೋ ಕಾರಣದಿಂದ ಪ್ರದರ್ಶನ ಮಾಡಲಾಗದೆ ತಾವು ರಚಿಸಿದ ಕಲಾ ಕೃತಿಗಳನ್ನು ಮನೆಯಲ್ಲಿ ಇಟ್ಟುಕೊಂಡು ತಮ್ಮ ಕಲಾ ಕೃತಿಗಳನ್ನು ತಾವೇ ನೋಡಿ ಸಂತೋಷ ಪಡುವ ಪರಿಸ್ಥಿಯನ್ನು ಅರಿತು ಶ್ರೀಮಾತಾ ಆರ್ಟ ಗ್ಯಾಲರಿ ಮಾಲಿಕ ನಾಗೇಶ ಚಿಮರೋಲ ಅವರು ಎಲ್ಲ ಕಲಾವಿದರನ್ನು ಕುಡಿಸಿ ಅವರ ಕಲಾ ಕೃತಿಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿ ಕೋಡುತ್ತಿದ್ದಾರೆ ಇದು ಸಂತೋಷಕರ ವಿಷಯ ಎಂದು ಮುಂಬರುವ ದಿನಗಳಲ್ಲಿ ಈ ಪ್ರದರ್ಶನಗಳು ಹೆಚ್ಚೆಚ್ಚು ನಡೆಯುವಂತೆಯಾಗಲಿ ಎಂದರು. 

ಬೆಳಗಾವಿ ಕನ್ನಡ ಸಾಹಿತ್ಯ ಭವನದ ಗೌರವ ಕಾರ್ಯದಶರ್ಿ ಆರ್.ಬಿ.ಕಟ್ಟಿ ಪ್ರದರ್ಶನದ ಅತಿಥಿ ಸ್ಥಾನ ವಹಿಸಿ  ಮಾತನಾಡಿ ಚಿತ್ರ ಕಲೆಗೆ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ ಆದರೂ ಇಂತಹ ಸಂದರ್ಭದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದ್ದು ಜಿಲ್ಲೆಯ ಅನೇಕ ಕಲಾವಿದರಿಂದ ಕಲಾ ಕೃತಿಗಳನ್ನು ಕೂಡಿಸಿ ಪ್ರದರ್ಶನ ಮಾಡುವ ಕಾರ್ಯಕ್ಕೆ ಕೈ ಹಾಕಿರುವ ಮಾತಾ ಆರ್ಟ ಗ್ಯಾಲರಿಯವರಿಗೆ ಯಶಸ್ಸು ದೊರೆಯಲ್ಲಿ ಹಾಗು ಬೆಳಗಾವಿಯಲ್ಲಿ ಇರುವ ಚಿತ್ರ ಕಲಾವಿದರಿಗೆ ಪ್ರೋತ್ಸಾಹಿಸಲು ನಾವು ಸಹಕರಿಸುತ್ತೇವೆ ಎಂದರು. 

ಕಲಾವಿದ ದೀಲಿಪ ಕಾಳೆ ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಾತಾ ಗ್ಲಾಸ್ ಆರ್ಟನ ಮಾಲಿಕ ನಾಗೇಶ ಚಿಮರೋಲ ವಹಿಸಿದ್ದರು. 

ಕಲಾವಿದರಾದ ಪರುಶುರಾಮ ಕಾಮತಿ, ಆರತಿ ಕಾಮತಿ  ಸ್ನೇಹಾ ಪತ್ತಾರ, ಶ್ವೇತಾ ಪತ್ತಾರ, ಸಂತೋಷ ಮುನ್ನೋಳ್ಳಿ, ದೇಮಪ್ಪ ಕಟಾಬಲಿ, ಎಸ್.ಎ.ಕಲಭಾವಿ, ಮಾದುರಿ ಡಿ. ಇನ್ನು ಅನೇಕ ಕಲಾವಿದರ ಕಲಾಕೃತಿಗಳು ಪ್ರದರ್ಶನ ನಡೆಯಿತು. ಎಸ್.ವ್ಹಿ. ತಿಲಗರ ನಿರೂಪಿಸಿ ವಂದಿಸಿದರು.