ಅಯೋಧ್ಯೆಯಲ್ಲಿ ಉದ್ದೇಶಿತ ರಾಮ ಮಂದಿರ ಸಮಿತಿಯಲ್ಲಿ ತಾವು ಇರುವುದಿಲ್ಲ- ಶ್ರೀ ಶ್ರೀ ರವಿಶಂಕರ್

Sri Sri Ravi Shankar

ನಾಗ್ಪುರ, ನ 29 - ಅಯೋಧ್ಯೆಯಲ್ಲಿ ಉದ್ದೇಶಿತ ರಾಮ ಮಂದಿರ ಸಮಿತಿಯಲ್ಲಿ ತಾವು ಇರುವುದಿಲ್ಲ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಶುಕ್ರವಾರ ಹೇಳಿದ್ದಾರೆ.

ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ ‘ಖಾಸ್ದಾರ್ ಸಾಂಸ್ಕೃತಿಕ ಮಹೋತ್ಸವ’ ಉದ್ಘಾಟಿಸಲು ಇಲ್ಲಿಗೆ ಆಗಮಿಸಿದ್ದ ಶ್ರೀ ಶ್ರೀ ರವಿಶಂಕರ್ ಅವರು,  ರಾಮ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ ರಚಿಸಲಾಗುತ್ತಿರುವ ಸಮಿತಿಯಲ್ಲಿ ತಾವು ಇರುವುದಿಲ್ಲ ಎಂದು ಹೇಳಿದರು.

ರಾಮ ಮಂದಿರವನ್ನು ನಿರ್ಮಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಂದಿರ, ಶಾಂತಿ ತರಲಿದ್ದು,  ದೇಶದ ಎರಡು ಸಮುದಾಯಗಳ ನಡುವೆ ಸಹೋದರತ್ವವನ್ನು ಸ್ಥಾಪಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಭವ್ಯ ದೇವಾಲಯ ನಿರ್ಮಿಸುವ ದೇಶದ ಬಹು ಕಾಲದ ಕನಸು ಈಡೇರುತ್ತಿದೆ. ’ ಎಂದು ಅವರು ಹೇಳಿದರು.

ಬಾಬರಿ ಮಸೀದಿ- ರಾಮ ಜನ್ಮಭೂಮಿ ಜಮೀನು ವಿವಾದ ಪ್ರಕರಣದಲ್ಲಿ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಹಿಂದೂ ಪರ ರಾಮ್‍ಲಲ್ಲಾಗೆ ಬಿಟ್ಟುಕೊಡಲು ನಿರ್ದೇಶಿಸಿತ್ತು. ಮಸೀದಿ ನಿರ್ಮಾಣಕ್ಕೆ ಬೇರೆಡೆ ಐದು ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಲು ಕೇಂದ್ರಕ್ಕೆ ಸೂಚಿಸಿತ್ತು.