ಬೈಲಹೊಂಗಲ 30: ಪಟ್ಟಣದ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮರಡಿ ಬಸವೇಶ್ವರ ತರುಣ ಸಂಘದ ವತಿಯಿಂದ ಶುಕ್ರವಾರ ನಡೆದ ಜೋಡಿ ಎತ್ತುಗಳ ಆಕರ್ಷಕ ಖಾಲಿ ಗಾಡಾ ಶರ್ಯತ್ತಿನಲ್ಲಿ ಎತ್ತುಗಳ ರೋಮಾಂಚನಕಾರಿ ಓಟ ನೋಡುಗರ ಗಮನ ಸೆಳೆದವು.
ಪಟ್ಟಣದ ದೇವಲಾಪುರ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಖಾಲಿ ಗಾಡಾ ಶರ್ಯತ್ತಿಗೆ ಉದ್ಯಮಿ ವಿಜಯ ಮೆಟಗುಡ್ಡ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕಲೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಕ್ಕಡಿ ಶರ್ಯತ್ತು ನಡೆಸಲಾಗುತ್ತಿದೆ. ಕ್ರೀಡಾಸಕ್ತರು ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ಬಸವರಾಜ ಜನ್ಮಟ್ಟಿ, ಕುಮಾರ ದೇಶನೂರ, ಸಂಘಟಕರಾದ ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಮಹಾಂತೇಶ ಹೊಸೂರ, ಶಿವಾನಂದ ಹೊಸೂರ, ಸುಭಾಸ ತುರಮರಿ, ಗಂಗಪ್ಪ ಹೊಸೂರ, ಶಿವಾನಂದ ಕೊಪ್ಪದ, ಉಮೇಶ ಅಂಕಲಗಿ, ಸಿದ್ಲಿಂಗ ಶಿರವಂತಿ, ರಫೀಕ ದೇಶನೂರ ಹಾಗೂ ಮತ್ತಿತರರು ಇದ್ದರು.