ಲೋಕದರ್ಶನ ವರದಿ
ಶಿರಹಟ್ಟಿ 06: ಭಾರತೀಯ ಸಂಸ್ಕೃತಿಯಲ್ಲಿ ವಿವಿಧತೆಯಿದ್ದರೂ ಕೂಡಾ ಜೀವನದ ಸಾರ್ಥಕತೆಗೆ ಧರ್ಮವನ್ನು ಅನುಸರಿವುದು ಅವಶ್ಯ. ಪ್ರತಿಯೊಬ್ಬರೂ ಅಧರ್ಮವನ್ನು ಅಳಸಿ, ಧರ್ಮವನ್ನು ಬೆಳಗಿಸಬೇಕು.ಜೀವನ ಸಾರ್ಥಕವಾಗಬೇಕಾದರೆ ಧರ್ಮವಂತರಾಗಿ ಬಾಳಬೇಕುನಡೆನುಡಿಯಲ್ಲಿ ಏಕತೆ ಇರಬೇಕು ಸಚ್ಛಾರಿತ್ರ್ಯವನ್ನು ರೂಡಿಸಿಕೊಳ್ಳುವುದು ಧರ್ಮವಂತರ ಲಕ್ಷಣ ಎಂದು ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚರ್ಯ ಶ್ರೀಗಳು ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಬಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನೂತನ ಪಾಂಡುರಂಗ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣದ ಧರ್ಮಸಭೆಯಲ್ಲಿ ಸಾನಿದ್ಯವಹಿಸಿ ಮಾತನಾಡಿದರು.
ಮನುಷ್ಯ ವಿಚಾರವಂತನಾಗಿ ಸದ್ಗುರುಗಳ ವಿಚಾರ ಧಾರೆಗಳನ್ನು ಅರಿತುಕೊಳ್ಳುವುದರ ಮೂಲಕ ಸುಸಂಸ್ಕೃತ ಜೀವನ ನಡೆಸಬೇಕು. ಅಲ್ಲದೇ ಹೆಣ್ಣು,ಹೊನ್ನು ಮಣ್ಣುಗಾಗಿ ಆಸೆ ಪಡೆದೇ ಬಡವರು ನಿರ್ಗತಿಕರು, ಅಶಕ್ತರ ಸೇವೆ ಮಾಡುವುದರ ಮೂಲಕ ಸಮಾಜ ಸೇವೆ ಮಾಡಬೇಕು. ಅಂದಾಗ ಮಾತ್ರ ಮನುಷ್ಯನಿಗೆ ದೇವರ ಕೃಪೆ ದೊರೆಯುತ್ತದೆ. ಗುರುವಿನ ಅನುಗ್ರಹವಿಲ್ಲದೇ ಯಾವುದೇ ಧನಾತ್ಮಕ ಬೆಳೆವಣಿಗೆಗಳು ಹೊಂದಲು ಸಾದ್ಯವಿಲ್ಲ. ಏಕಾಗ್ರತೆಯಿಂದ ದೇವರ ದ್ಯಾನದಿಂದ ದೇವರನ್ನು ಸಾಕ್ಷಾತ್ಕಾರಗೊಳಿಸಲು ಸಾದ್ಯವಾಗುತ್ತದೆ ಎಂದು ಹೇಳಿದರು.
ನಂತರ ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಶ್ರೀಗಳು ಮಾತನಾಡಿ,, ದೇವರು ಸರ್ವಜೀವಿಯನ್ನು ಸುಖವಾಗಿಡಲು ಪ್ರಯತ್ನಿಸುತ್ತಾನೆ. ಆದರೆ ಮನುಷ್ಯ ಮಾತ್ರ ತನ್ನ ಅತೀಯಾದ ದುರಾಸೆಯಿಂದ ದಿಢೀರ ಶ್ರೀಮಂತನಾಗಲು ಬಯಸಿ ಅಧರ್ಮದ ದಾರಿ ತುಳುಯಿತ್ತಿದ್ದಾನೆ. ಆದ್ದರಿಂದ ಸರ್ವರೂ ಸಜ್ಜನರ ಸಂಗ ಮಾಡುವುದರ ಮೂಲಕ ಜೇನಿನ ಗೂಡಿನಂತೆ ಬದುಕಬೇಕು. ಮತ್ತು ಪ್ರತಿದಿನ ದೇವರ ನಾಮಸ್ಮರಣೆ ಮಾಡಿ, ಸತ್ಯದ ಮಾರ್ಗದಲ್ಲಿ ಸರ್ವರೂ ಒಗ್ಗಟ್ಟಿನಿಂದ ನಡೆಯುವುದರ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ನಂತರ ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ. ಇಂದಿನ ಯುವಕರು ಆಡಂಬರದ ಜೀವನಕ್ಕೆ ಮನಸೋಲುತ್ತಿದ್ದಾರೆ. ಮತ್ತು ಪ್ರತಿನಿತ್ಯ ಮೊಬೈಲ್, ಟಿ.ವಿ, ಕಂಪ್ಯೂಟರ್ ಹಾಗೂ ಗೇಮ್ಗಳನ್ನು ಆಡುವುದರ ಮೂಲಕ ಕಾಲಹರಣ ಮಾಡುತ್ತಾ ಸಮಯ ವ್ಯರ್ಥ ಮಾಡುವುದಲ್ಲದೇ ಸರಾಯಿ ಕುಡಿದು ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಕರು ಜಾಗೃತರಾಗಿ, ಸದ್ಗುರುಗಳ ಅಂತರಾತ್ಮದ ವಿಚಾರಗಳನ್ನು ತಿಳಿದುಕೊಳ್ಳುವುದರ ಮೂಲಕ ಸನ್ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಚೈತನ್ಯ ಸದ್ಗುರು ವಾಸ್ಕರ ಮಹಾರಾಜ, ಪ್ರಾಭಾಕರ ಮಹಾರಾಜ, ಭಜರಂಗ ಭೋದಲೆ ಮಹಾರಾಜ, ಯಶವಂತ ಮಹಾರಾಜ, ಮಾರುತೆಪ್ಪ ಮಾಂಡ್ರೆ, ತುಕಾರಾಮ ಮಹೇಂದ್ರಕರ, ಸುರೇಶ ಕಪಟಕಾರ, ಶ್ರೀಧರರಾವ ಹವಳೆ, ಜಿಪಂ ಸದಸ್ಯ ರೇಖಾ ಅಳವಂಡಿ, ಗ್ರಾಪಂ ಅಧ್ಯಕ್ಷ ಫಕ್ಕಿರವ್ವ ಬಾವಳ್ಳಿ, ಸದಸ್ಯ ತಿಮ್ಮರಡ್ಡಿ ಮರಡ್ಡಿ, ಕೋಟ್ರೇಶ ಸಜ್ಜನರ, ಮೋಹನ ಗುತ್ತೇಮ್ಮನವರ, ಸುವರ್ಣ ಗಡ್ಡಿ, ಮಂಜುಳಾ ಹುಬ್ಬಳಿ, ನಾಗರಾಜ ಅಕ್ಕೂರ, ವಿಜಯಲಕ್ಷ್ಮೀ ಬ್ಯಾಲಹುಣಸಿ, ಶಿವಣ್ಣ ಎಸ್ ಬೇಗು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.