ಲೋಕದರ್ಶನ ವರದಿ
ಬೆಳಗಾವಿ 02: ಜೀವನದಲ್ಲಿ ಸ್ಪಷ್ಟವಾದ ಗುರಿ ಹಾಗೂ ನಿರಂತರ ಪ್ರಯತ್ನ ವಿದ್ದರೆ ಅದ್ಭುತವಾದುದನ್ನು ಸಾಧಿಸಲು ಸಾಧ್ಯವೆಂದು ಡಾ.ಎಂ.ಎಸ್.ಶೇಷಗಿರಿ ಇಂಜನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ನಿದರ್ೇಶಕ ಪ್ರೊ. ಡಿ.ಜಿ.ಕುಲಕಣರ್ಿ ನುಡಿದರು. ಲಿಂಗರಾಜ ಪದವಿಪೂರ್ವ ಕಾಲೇಜಿನ ಆಯೋಜಿಸಿದ್ದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾಥರ್ಿಗಳಲ್ಲಿ ಸತತವಾದ ಅಭ್ಯಾಸ ವಿರಬೇಕು. ನಿದರ್ಿಷ್ಟವಾದ ಗುರಿ ಇರಬೇಕು. ಸಮಯದ ಸದುಪಯೋಗ ಮಾಡಿಕೊಳ್ಳುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾಗಿದೆ. ನಮ್ಮ ತಂದೆ ತಾಯಿಗಳು ಎಲ್ಲ ರೀತಿ ಅನುಕೂಲತೆಗಳನ್ನು ಮಾಡಿಕೊಟ್ಟಿರುತ್ತಾರೆ, ಶಿಕ್ಷಕರು ನಿಮ್ಮ ಭವಿಷ್ಯಕ್ಕಾಗಿ ಮಾರ್ಗದಶರ್ಿಸಿರುತ್ತಾರೆ ಅವರಿಗೆ ಉತ್ತಮವಾದ ಫಲಿತಾಂಶವನ್ನು ತಂದುಕೊಡುವುದು ನಮ್ಮ ಧ್ಯೇಯವಾಗಬೇಕು. ಬದುಕಿನಲ್ಲಿ ಸಕಾರಾತ್ಮಕವಾಗಿ ವಿವೇಚಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ. ನಿರಾಶಾವಾದವನ್ನು ಹೊಂದದೆ ಬದುಕಿನಲ್ಲಿ ಬರುವ ಪ್ರತಿಯೊಂದು ಸ್ಪಧರ್ೆಯನ್ನು ನಿಷ್ಠೆ ಹಾಗೂ ಶ್ರದ್ಧೆಯಿಂದ ಎದುರಿಸಿ ಸಫಲತೆಯನ್ನು ಪಡೆಯಬೇಕೆಂದು ವಿದ್ಯಾಥರ್ಿಗಳಿಗೆ ಕರೆನೀಡಿದರು.
ಪದವಿ ಮಹಾವಿದ್ಯಾಲಯದ ಉಪಪಾಚಾರ್ಯ ಪ್ರೊ. ಎಮ್.ಆರ್.ಬನಹಟ್ಟಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಪಿಯುಸಿ ದ್ವಿತೀಯ ವರ್ಷ ಬದುಕಿನ ಮಹತ್ವದ ಮೈಲುಗಲ್ಲುಗಳಲ್ಲಿ ಒಂದು. ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದ ಏಕಾಗ್ರತೆಯಿಂದ ಅಧ್ಯಯನದಲ್ಲಿ ನಿರತರಾಗಿ, ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಪ್ರಾಚಾಯರ್ೆ ಪ್ರೊ.ಗಿರಿಜಾ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಾಷರ್ಿಕ ವರದಿಯನ್ನು ವಾಚಿಸಿದರು. ಪ್ರೊ.ಶ್ರದ್ಧಾ ಪಾಟೀಲ ಸ್ವಾಗತಿಸಿದರು. ದೈಹಿಕ ನಿದರ್ೇಶಕರಾದ ಡಾ.ಸಿ.ರಾಮರಾವ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 2019-20ನೇ ಸಾಲಿ ಆದರ್ಶ ವಿದ್ಯಾಥರ್ಿ ದ್ವಿತೀಯ ಪಿಯುಸಿ ಕಲಾವಿಭಾಗದ ವಿದ್ಯಾಥರ್ಿ ಕುಮಾರ ಸಮರ್ಥ ಸಾಲಿಮಠ, ವಿದ್ಯಾಥರ್ಿನಿ ಕುಮಾರಿ ಸಮೀಕ್ಷಾ ಮಹಾದಿಕ ಅವರಿಗೆ ಮುಖ್ಯ ಅತಿಥಿಗಳು ಗೌರವಿಸಿದರು ಹಾಗೂ ವಿವಿಧ ಸ್ಪಧರ್ೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಿದರು.