ಎಲ್ಲ ಜನಾಂಗದವರಿಗೆ ಒಂದೇ ಕಾನೂನು ಇರಬೇಕು: ಕಾಜಗಾರ

ಲೋಕದರ್ಶನವರದಿ

ಮುಧೋಳ: ಭಾರತ ದೇಶ ಜಾತ್ಯಾತೀಯ ರಾಷ್ಟ್ರ ಎಂದು ಹೇಳುತ್ತೇವೆ, ಆದರೆ ಇಲ್ಲಿ ವಾಸಿಸುವ ಹಿಂದು-ಮುಸ್ಲಿಂರಿಗೆ ಕೆಲವೊಂದು ಪ್ರತ್ಯೇಕ ಕಾನೂನುಗಳಿವೆ. ಒಂದೇ ದೇಶದಲ್ಲಿ ವಾಸಿಸುವ ಮುಸ್ಲಿಂರಿಗೆ ಪ್ರತ್ಯೇಕ ಕಾನೂನು ಏಕೆ ಎಂಬುದು ಕೆಲವು ಹಿಂದುಗಳ ಪ್ರಶ್ನೇಯಾಗಿದೆ.

    ನವಭಾರತ ನಿಮರ್ಾಣಕ್ಕೆ ಎಲ್ಲ ಜನಾಂಗದವರಿಗೆ ಒಂದೇ ಕಾನೂನು ಇರಬೇಕು ಆಗಲೇ ಭಾರತ ದೇಶವು ಅಭಿವೃದ್ಧಿಯಾಗಲು ಸಾಧ್ಯ ಎಂದು ಹಿರಿಯ ವಕೀಲ ಎಂ.ಎಸ್.ಕಾಜಗಾರ ಹೇಳಿದರು. 

  ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಭಾರತ ದೇಶವು ಒಂದೇ ರಾಷ್ಟ್ರವಾಗಿದ್ದರಿಂದ ಒಂದೇ ಸಂವಿಧಾನ ಇರಬೇಕು ಅದರಂತೆ ಒಂದೇ ಧ್ವಜ ಇರಬೇಕು, ದೇಶದಲ್ಲಿ ವಾಸಿಸುವ ಹಿಂದು, ಮುಸ್ಲಿಂ, ಕ್ರಿಶ್ಚಿಯನರಿಗೆ ಒಂದೇ ಕಾನೂನು ಇರಬೇಕು ಆಗಲೇ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

  ಜಮ್ಮು ಮತ್ತು ಕಾಶ್ಮೀರದಲ್ಲಿ ಆಟರ್ಿಕಲ್ 370 ಮತ್ತು 35ಎ ಅನ್ನು ರದ್ದುಗೊಳಿಸಿ ವಿಶೇಷ ಸ್ಥಾನ ನೀಡಿರುವ ಕೇಂದ್ರ ಸಕರ್ಾರದ ನಿಧರ್ಾರವನ್ನು ತಾವು ಸ್ವಾಗತಿಸುವದಾಗಿ ತಿಳಿಸಿದ ಅವರು ಬೇರೆ ರಾಜ್ಯದವರು ಉದ್ಯೋಗವಕಾಶ ಹಾಗೂ ಚಿರಾಸ್ಥಿ ಮಾಡಿಕೊಳ್ಳಲು ಅವಕಾಶ ನೀಡಿದೆ ಎಂದರು.

   ಅತಿಥಿಯಾಗಿದ್ದ ಪ್ರೊ.ಪಿ.ಬಿ.ಬಡಿಗೇರ ಮಾತನಾಡಿ ಭಾರತ ದೇಶಕ್ಕೆ ಒಂದೇಶ ಸಂವಿಧಾನ ಏಕೆ ಬೇಕೆಂಬುದರ ಕುರಿತು ಹಲವು ಊದಾಹರಣೆ ಸಮೇತ ತಿಳಿಸಿಕೊಟ್ಟರು. 

 ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿದರು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಪ್ಪು ರಾಠೋಡ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಸತೀಶ ಸಾರವಾಡ ನಿರೂಪಿಸಿದರು, ಪ್ರೊ.ಎಸ್.ಕೆ.ಮುರಗೋಡ ವಂದಿಸಿದರು.