ಇಂಡಿ, ಚಡಚಣ ಎರಡೂ ತಾಲೂಕಿಗೆ ಒಂದೇ ಅಗ್ನಿಶಾಮಕ ವಾಹನ

ಇಂಡಿ, ಚಡಚಣ ಎರಡೂ ತಾಲೂಕಿಗೆ ಒಂದೇ ಅಗ್ನಿಶಾಮಕ ವಾಹನ There is only one fire engine for both Indi and Chadchan taluks.

             ಇಂಡಿ : ಭವಿಷ್ಯದಲ್ಲಿ ಜಿಲ್ಲೆ ಆಗಬೇಕಿರುವ ಇಂಡಿ ನಗರದಲ್ಲಿ ಇರುವ ಅಗ್ನಿಶಾಮಕ ಠಾಣೆಯಲ್ಲಿ ಇರುವ ಸಮಸ್ಯೆ ಏನು? ಆ ಸಮಸ್ಯೆ ಯಾವುದು ಇರಬಹುದು ಅಂತ ತಮಗೆ ಕೂತುಹಲ ಆಗಿರಬಹುದು ? ನಾವು ಹೇಳುತ್ತಿರುವುದು ಇಂಡಿ ನಗರದಲ್ಲಿ ಇರುವ ಅಗ್ನಿಶಾಮಕ ದಳ ಇಲಾಖೆಯ ಸಮಸ್ಯೆ,ಹಾಗಾದರೆ ಸಮಸ್ಯೆ ಏನು ಅಂತಿರಾ ಕೆಟ್ಟು ನಿಂತಿರುವ ಅಗ್ನಿಶಾಮಕ ವಾಹನ, ಅಗ್ನಿಶಾಮಕ ಠಾಣೆಯಲ್ಲಿ ಯಾವಾಗಲೂ ಎರಡೂ ವಾಹನ ಇರಬೇಕು, ಅವು ಕೂಡಾ ದಿನದ ಇಪ್ಪತ್ತನಾಲ್ಕು ಗಂಟೆಗಳ ಹೈ ಅಲರ್ಟ್‌ ಇರಬೇಕು.ಆದರೆ ಇಂಡಿ ಹಾಗೂ ಚಡಚಣ ತಾಲೂಕುಗೆ ಇರುವುದು ಒಂದೇ ಒಂದು ಅಗ್ನಿಶಾಮಕ ವಾಹನ.ಇಂಡಿ ಮತ್ತು ಚಡಚಣ ತಾಲ್ಲೂಕು ಕೂಡಿ ಸುಮಾರು ಒಂದುನೂರಾ ಇಪ್ಪತ್ತು ಹಳ್ಳಿಗಳಿವೆ ಈ ಎಲ್ಲಾ ಹಳ್ಳಿಗಳಲ್ಲಿ ಏನಾದರೂ ಬೆಂಕಿ ಅವಘಡ ಸಂಭವಿಸಿದರೆ ಹೋಗಬೇಕಾದರೆ ಇರುವುದು ಒಂದೇ ಒಂದು ಅಗ್ನಿಶಾಮಕ ವಾಹನ.

             ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡರೆ ಅಥವಾ ತಾಲ್ಲೂಕಿನಲ್ಲಿ ಏಕಕಾಲಕ್ಕೆ ಬೆಂಕಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಾರ್ವಜನಿಕ ಯಕ್ಷಪ್ರಶ್ನೆ ?  ಮೊನ್ನೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ರೈತನ ಕಬ್ಬಿನ ತೋಟಕ್ಕೆ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಾ ಆ ರೈತ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿದಾಗ ಆ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ವಾಹನೇ ಇರಲ್ಲ,ಇದ್ದ ಒಂದು ವಾಹನ ಬೇರೆ ಕಡೆ ಹೋಗಿದೆ ಎಂದು ಹೇಳಿದರು.ಬೆಂಕಿ ಹಾಗೂ ದುರಂತ ಘಟನೆ ಸಂಭವಿಸಿದ ತಕ್ಷಣ ಮೊದಲು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನು ಕೈಗೆತ್ತಿ ಕೊಳ್ಳುವ ಹೊಣೆ, ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ಎಮರ್ಜೆನ್ಸಿ ಇಲಾಖೆಯದಾಗಿದೆ. ಪೈರ್ ಅಂಡ ಎಮರ್ಜೆನ್ಸಿ ಸೇವಾ ಸಿಬ್ಬಂದಿಗಳು ತಮ್ಮ ಪ್ರಾಣಾಪಯದ ಅರಿವಿದ್ದರೂ ಸಹ ದುರ್ಘಟನೆಯ ಸ್ಥಳ, ಕುಸಿದ ಕಟ್ಟಡ, ಕಲುಷಿತ ವಾತಾವರಣದಲ್ಲಿ ಜನರ ಜೀವಗಳು ತಮ್ಮ ಕಣ್ಣು ಮುಂದೆಯೇ ಸಾಯುತ್ತಿರುವಂತಹ ಅತಿ ಸೂಕ್ಷ ಜಾಗಗಳಿಗೆ ತಮ್ಮ ಜೀವದ ಹಂಗು ತೊರೆದು ಮುನ್ನುಗ್ಗಿ  ನಿರ್ವಹಿಸುವಂತಹ ಈ ಕರ್ತವ್ಯಕ್ಕೆ ಖಂಡಿತ ಇತರೆ ಕೆಲಸಗಳು ಸಾಟಿಯಾಗಲಾರವು.