ಬ್ಯಾಡಗಿ: ಕೇರವಡಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದ್ರಾಕ್ಷಾಯಣವ್ವ ಆಯ್ಕೆ

ಬ್ಯಾಡಗಿ: ಕೇರವಡಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದ್ರಾಕ್ಷಾಯಣವ್ವ ಆಯ್ಕೆ  Byadgi: BJP-backed candidate Drakshayanavva elected as President of Keravadi Gram Panchayat

ಬ್ಯಾಡಗಿ, ಜುಲೈ 31: ತಾಲೂಕಿನ ಕೇರವಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ದ್ರಾಕ್ಷಾಯಣವ್ವ ಎಲಿಗಾರ ಅವರು 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  

17 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೀಣಾ ಕಡೆಯೂರು ಅವರು 8 ಮತಗಳನ್ನು ಪಡೆದಿದ್ದು, ಒಂದು ಮತದ ಅಂತರದಿಂದ ಸೋಲನುಭವಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ದ್ರಾಕ್ಷಾಯಣವ್ವ ಎಲಿಗಾರ ಅವರನ್ನು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಸನ್ಮಾನಿಸಿ ಅಭಿನಂದಿಸಿದರು.  

ಈ ವೇಳೆ ಮಾತನಾಡಿದ ವಿರೂಪಾಕ್ಷಪ್ಪ ಬಳ್ಳಾರಿ, “ಬಿಜೆಪಿ ಬೆಂಬಲಿತ ಅಭ್ಯರ್ಥಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷದ ಕಾರ್ಯಕರ್ತರ ಪರಿಶ್ರಮ ಹಾಗೂ ಗ್ರಾಮಸ್ಥರು ತೋರಿದ ವಿಶ್ವಾಸಕ್ಕೆ ದೊರೆತ ಗೌರವವಾಗಿದೆ. ನೂತನ ಅಧ್ಯಕ್ಷರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಹೇಳಿದರು.  

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ, ಮುಖಂಡರಾದ ಪ್ರವೀಣ್ ಪಾಟೀಲ, ಸಿದ್ದಯ್ಯ ಪಾಟೀಲ, ದ್ಯಾಮನಗೌಡ ಪಾಟೀಲ, ವೀರಬಸಪ್ಪ ಗುತಲ್, ಪರಮೇಶಯ್ಯ ಮಠದ, ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯರಾದ ಗಿರಿಜವ್ವ ಪಾಟೀಲ, ಶಾರದಮ್ಮ ಕರೂರು, ಜಮಲಾಬಿ ಬಿಸಲಹಳ್ಳಿ, ಮಂಜುನಾಥ ಹೊನ್ನಳ್ಳಿ, ಪೈರೋಜ್ ಖಾನ್ ಬಿಸಲಹಳ್ಳಿ, ಅಶೋಕಪ್ಪ ಬನ್ನಿಹಟ್ಟಿ, ರಾಜು ತಿರದಹಳ್ಳಿ, ವಿನಾಯಕ ಬ್ಯಾಡಗಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.