ಮೋದಿಯನ್ನು ಶಿವಾಜಿಗೆ ಹೋಲಿಸಿದ ಪುಸ್ತಕದಲ್ಲಿ ತಮ್ಮ ಪಾತ್ರವಿಲ್ಲ; ಬಿಜೆಪಿ ಸ್ಪಷ್ಟನೆ

ನವದೆಹಲಿ 13:  ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಾಜಿಗೆ ಹೋಲಿಸುವ ಹೊಸ ಪುಸ್ತಕದ ಪ್ರಕಟಣೆಯಲ್ಲಿ ತಮ್ಮ ಕೈವಾಡವನ್ನು ಬಿಜೆಪಿ ಅಲ್ಲಗೆಳೆದಿದೆ.

ಬಿಜೆಪಿಯ ಸಹ ಮಾಧ್ಯಮ ಉಸ್ತುವಾರಿ ಸಂಜಯ್ ಮಾಯುಕ್ತ್ ಪುಸ್ತಕ ಹಾಗೂ ಅದರಲ್ಲಿರುವ ಅಂಶಗಳೊಂದಿಗೆ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಅವರು ಬರೆದಿರುವ ಪುಸ್ತಕದಲ್ಲಿ ಪ್ರಧಾನಿ ಮೋದಿಯನ್ನು ಶಿವಾಜಿಗೆ ಹೋಲಿಸಬಹುದು ಎಂಬ ಉಲ್ಲೇಖವಿರುವುದು ವಿವಾದಕ್ಕೆ ಕಾರಣವಾಗಿದೆ.

 ಕುರಿತು ಈಗಾಗಲೇ ಸ್ಪಷ್ಟನೆ ನೀಡಿರುವ ಗೋಯಲ್ಜನರ ಭಾವನೆಗಳಿಗೆ ಧಕ್ಕೆಯಾಗಿದ್ದಾರೆ ಪುಸ್ತಕದ  ಭಾಗವನ್ನು ಪುನರ್ ಪರಿಶೀಲಿಸಲು ಸಿದ್ಧರಿದ್ದೇವೆತಾವು ಕೇವಲ ಮೋದಿ ಅವರು ಶಿವಾಜಿಯಂತೆ ಶ್ರಮಜೀವಿ ಎಂದು ಉಲ್ಲೇಖಿಸಿದ್ದೇ ಎಂದು ಹೇಳಿಕೆ ನೀಡಿದ್ದಾರೆ.