ದೆಹಲಿಯಲ್ಲಿ ಮೂರನೇ ಹಂತದ ಲಾಕ್ ಡೌನ್ ವೇಳೆ ಯಾವುದೇ ಸಡಲಿಕೆ ಇಲ್ಲ

ನವದೆಹಲಿ, ಮೇ 2, ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಲೆ ಇದೆ. ಹೀಗಾಗಿ ಲಾಕ್ ಡೌನ್ ಮುಂದೂವರೆಸಲು ತೀರ್ಮಾನಿಸಲಾಗಿದೆ. ಅದರಂತೆ ರಾಷ್ಟ್ರ ರಾಜಧಾನಿಯ “ರೆಡ್ ಝೋನ್”ದ ಎಲ್ಲಾ ಜಿಲ್ಲೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವೈರಸ್ ಪ್ರಕರಣ ಗಮನದಲ್ಲಿಟ್ಟುಕೊಂಡು ಯಾವುದೇ ವಿನಾಯಿತಿ ನೀಡಲಾಗಿಲ್ಲ. ಮೂರನೇ ಹಂತದ ಲಾಕ್‌ಡೌನ್ ಸೋಮವಾರದಿಂದ ಪ್ರಾರಂಭವಾಗಲಿದ್ದು, ಇದು ಮೇ 17 ರವರೆಗೆ ನಡೆಯುತ್ತದೆ. ಮೂರನೇ ಹಂತದಲ್ಲಿ ದೇಶವನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ವಲಯದ ಪ್ರಕಾರ, ಲಾಕ್‌ಡೌನ್‌ನಲ್ಲಿ ಸ್ವಲ್ಪ ಪರಿಹಾರವನ್ನು ಸಹ ನೀಡಲಾಗಿದೆ, ಆದರೆ ದೆಹಲಿ ಕೆಂಪು ವಲಯದಲ್ಲಿದೆ.ಮುಂದಿನ ಎರಡು ವಾರಗಳವರೆಗೆ ರಾಜಧಾನಿಯ ಎಲ್ಲಾ 11 ಜಿಲ್ಲೆಗಳಲ್ಲಿ ಬೀಗ ಲಾಕ್ ಡೌನ್ ಸಡಿಲಿಸದಿರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶನಿವಾರ ಹೇಳಿದ್ದಾರೆ.“ಹತ್ತು ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಇರುವ ಜಿಲ್ಲೆಯನ್ನು ಕೆಂಪು ವಲಯದಲ್ಲಿ ಇರಿಸಲಾಗಿದೆ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಜಾರಿಗೆ ತರಲಾಗಿದೆ” ಎಂದು ಹೇಳಿದ್ದಾರೆ.ದೆಹಲಿಯಲ್ಲಿ ಶುಕ್ರವಾರ ಹೊಸದಾಗಿ 223 ಕರೋನಾ ಸೋಂಕಿನ ಪ್ರಕರಣಗಳು ವರದಿಯಾದ ನಂತರ, ರಾಜಧಾನಿಯಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3,738 ಕ್ಕೆ ಏರಿದೆ. ಕೋವಿಡ್ -19 ರಿಂದ ಮೃತಪಟ್ಟವರ ಸಂಖ್ಯೆ 61 ಆಗಿದೆ.