ಅಕ್ರಮ ಕಟ್ಟಡಗಳ ತೆರವಿಗೂ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ

ಲೋಕದರ್ಶನ ವರದಿ

ಮುಧೋಳ 11: ಮುಧೋಳ ನಗರಸಭೆ ವತಿಯಿಂದ ನಡೆದಿರುವ ಆಕ್ರಮ ಕಟ್ಟಡಗಳ ತೆರವಿಗೂ,ನಗರ ಹಿತರಕ್ಷಣಾ ವೇದಿಕೆವತಿಯಿಂದ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ನಡೆಸುತ್ತಿರುವ ಅನರ್ಿಷ್ಟ ಧರಣಿ ಸತ್ಯಾಗ್ರಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಧೋಳ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದಶರ್ಿ ಡಾ.ಮೋಹನ ಬಿರಾದಾರ ಹೇಳಿದರು.

   ಶುಕ್ರವಾರ ನಗರದ ಕಾನಿಪ ಸಂಘದ ಕಾಯರ್ಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಧೋಳದಲ್ಲಿ ಡಿ.27ರಿಂದ ನಡೆಯುತ್ತಿರುವ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಕ್ರಮ ಕಟ್ಟಡಗಳ ತೆರವು ಗೊಳಿಸುವ ಕುರಿತು ಸುಮಾರು 6-7 ತಿಂಗಳುಗಳ ಮೊದಲೇ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿದ್ದರು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿರುವಾಗ ಮುಧೋಳ ನಗರ

   ಹಿತರಕ್ಷಣಾ ವೇದಿಕೆಯವರು ಡಿ.17ರಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಮುಧೋಳ ಮಾರ್ಗವಾಗಿ ಹೊರಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕಾಮರ್ಿಕ ಸಚಿವ ಎಂ.ವೆಂಕಟರಮಣಪ್ಪ ಮತ್ತುಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಮ ಅವರಿಗೆ ಘೇರಾವ ಹಾಕಿ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಲಾಗಿತ್ತು.

  ಆ ಸಂದರ್ಭದಲ್ಲಿ ನಗರಸಭೆಗೆ ಆಗಮಿಸಿದ ಸಚಿವರು ನಗರಸಭೆ ಪೌರಾಯುಕ್ತರು  ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಮುಧೋಳ ಹಿತರಕ್ಷಣಾ ಸಮಿತಿ ಯವರು ಡಿ.25ವರೆಗೆ ಅವಕಾಶ ನೀಡಿದ್ದರು.ನಿಗದಿತ ಸಮಯಕ್ಕೆ ಕಾಯರ್ಾರಂಭ ಮಾಡದಿದ್ದರೆ ಡಿ.27ರಂದು ಮುಧೋಳ ಬಂದ್ ಕರೆ ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡು ಜಿಲ್ಲಾಧಿಕಾರಿಗಳ ಆದೇಶದನ್ವಯ ಜಮಖಂಡಿ ಉಪವಿಭಾಗಾಧಿಕಾರಿ ಮೆಹಮ್ಮದ ಇಕ್ರಾಂ ಅವರ ನೇತೃತ್ವದಲ್ಲಿ ನಗರಸಭೆಯವರು ಅತೀಕ್ರಮಣ ಕಟ್ಟಡಗಳ ತೆರವು ಕಾಯರ್ಾಚರಣೆ ನಡೆಸಲಾರಂಭಿಸಿದರು. ಇದನ್ನು ಕೆಲವರು ತಪ್ಪಾಗಿ ಅಥರ್ೈಸಿಕೊಂಡು ಮುಧೋಳ ಹಿತರಕ್ಷಣಾ ವೇದಿಕೆಯವರೇ ಮೂಲ ಕಾರಣವೆಂದು ತಿಳಿದಿದ್ದು ಅದು ಖಂಡಿತ ತಪ್ಪು ಎಂದು ತಿಳಿಸಿದರು.

  ಮುಧೋಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಸಂಜಯ ಘಾರಗೆ ಮಾತನಾಡಿ, ಕಳೆದ 16 ದಿನಗಳಿಂದ ಮುಧೋಳ ನಗರ ಹಿತರ ಕ್ಷಣಾ ವೇದಿಕೆ ವತಿಯಿಂದ ಅನಿಧರ್ಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮುಧೋಳ ನಾಗರಿಕರ ಕುಂದು ಕೊರತೆಗಳನ್ನು ವಿಚಾರಿಸದಿರುವುದು ದೌಬರ್ಾಗ್ಯವೆಂದರು. ಮಹಾತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ನಾವು ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಇದಕ್ಕೆ ಬೆಲೆ ಇಲ್ಲದಂತಾ ಗಿದೆ, ಹೋರಾಟದ ಕೆಲ ಯುವಕರು ರಸ್ತೆತಡೆ ನಡೆಸಿ ಹೋರಾಟ ಮಾಡೋಣ ಅಂದಾಗ ಮಾತ್ರ ನಮ್ಮ ಹೋರಾಟಕ್ಕೆ ಅವರು ಸ್ಪಂದಿಸುತ್ತಾರೆಂದು ಹೇಳುತ್ತಿದ್ದಾರೆ, ಆದರೆ ಇದರಿಂದ ಸಾರ್ವಜನಿಕರಿಗೆ, ವೃದ್ದರಿಗೆ, ಮಕ್ಕಳಿಗೆ, ರೋಗಿಗಳಿಗೆ, ಪರಸ್ಥಳಗಳಿಗೆ ತೆರಳುವ ಪ್ರಯಾಣಿಕ ರಿಗೆ ತೊಂದರೆ ಯಾಗಬಾರದೆಂಬ ಹಿತದೃಷ್ಠಿಯಿಂದ ನಾವು ಶಾಂತರೀತಿಯಿಂದ ಹೋರಾಟ ಮಾಡುತ್ತಿದ್ದೇವೆ. 

   ಇದು ನಮ್ಮ ಹೋರಾಟದ ದೌರ್ಬಲ್ಯವೆಂದು ತಿಳಿಯಬಾರದು. ನಾವು ಮತ ಹಾಕಿ ಚುನಾಯಿತಗೊಳಿಸಿರುವ ಜನಪ್ರತಿನಿಧಿಗಳು ನಮ್ಮ ಕಷ್ಟಗಳಿಗೆ ಸ್ಪಂದಿಸದಿದ್ದರೆ ನಾವು ಯಾರನ್ನು ಕೇಳಬೇಕೆಂದು ಪ್ರಶ್ನಿಸಿದರು. ನಾವು ಕೇಳಿದ್ದು ರಸ್ತೆ ಅಗಲೀಕರಣ ಮಾಡಿ ಡಾಂಬರೀಕರಣ ಮಾಡಬೇಕು, ಬೈಪಾಸ್ ರಸ್ತೆ ಶೀಘ್ರ ಆರಂಭಿಸಬೇಕು, ನಗರದಲ್ಲಿ ಹಾಯ್ದು ಹೋಗಿರುವ ಬೈಪಾಸ್ ರಸ್ತೆ ಪೂರ್ಣಗೊಳಿಸಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಕುಡಿ ಯುವ ನೀರಿನ ಸಮರ್ಪಕ ಪೂರೈಕೆ,ಒಳಚರಂಡಿ ಕಾಮಗಾರಿ ಮರುಪರಿಶೀಲನೆ ಸೇರಿದಂತೆ ನಮ್ಮ ಬೇಡಿಕೆಗಳ ಬಗ್ಗೆ ಆಲೋಚಿಸದೆ ಕೇವಲ ಅತೀಕ್ರಮಣ ತೆರವು ಕಾಯರ್ಾಚರಣೆ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಹೇಳಿದ ಅವರು ಈ ಕೂಡಲೇ ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ನಾವು ನಡೆಸುತ್ತಿರುವ ಅನಿದರ್ಿಷ್ಟ ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಮಾಜದವರು,ಸಂಘ ಸಂಸ್ಥೆಯವರು ಹಾಗೂ ತೆರವು ಕಾಯರ್ಾಚರ ಣೆಯಲ್ಲಿ ಕಟ್ಟಡ, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರೂ ಸಹ ಬೆಂಬಲಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.  ಡಾ.ಸತೀಶ ಮಲಘಾಣ, ಉಮೇಶ ಬಾಡಗಿ,ಬಸವರಾಜ ಮಹಾಲಿಂಗೇಶ್ವರ, ಶಿವು ಗುರವ, ಶರಣು ಗೂಳಪ್ಪಗೋಳ, ಅಜೀತ ಹೊನವಾಡ,  ಸುರೇಶ ಉದಪುಡಿ, ತುಷಾರ ಬೋಪಳೆ ಇತರರು ಇದ್ದರು