ಮುಧೋಳ ಇಂಜಿನಿಯರಿಂಗ್ ಕಾಲೇಜನಲ್ಲಿ ರ್ಯಾಗಿಂಗ್ ನಡೆದಿಲ್ಲ:ತಹಶೀಲದಾರ ಮಹಾತ್

ರ್ಯಾಗಿಂಗ್ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ

ಲೋಕದರ್ಶನ ವರದಿ

ಮುಧೋಳ 15: ನಗರದಲ್ಲಿರುವ ಬಾಗಲಕೋಟೆಯ ಬಿವ್ಹಿವ್ಹಿ ಸಂಘದ ಬಿಜಿಎಂಐಟಿ ಇಂಜಿನೀಯರಿಂಗ್ ಕಾಲೇಜ್ನಲ್ಲಿ ಇಲ್ಲಿಯವರೆಗೆ ಯಾವೊಂದು ರ್ಯಾಂಗಿಂಗ್ ಪ್ರಕರಣಗಳು ನಡೆದಿಲ್ಲವೆಂದು ತಹಶೀಲದಾರ ಹಾಗೂ ರ್ಯಾಗಿಂಗ್ ಸಮಿತಿ ಸದಸ್ಯ ಡಿ.ಜಿ ಮಹಾತ ಅಭಿಮಾನ

ದಿಂದ ಹೇಳಿದರು.

     ಅವರು ಕಾಲೇಜ್ ಸಭಾಂಗಣದಲ್ಲಿ ಸದಸ್ಯರನ್ನು ಹಾಗೂ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿ, ರ್ಯಾಗಿಂಗ್ ಸೇರಿದಂತೆ ಯಾವುದೇ ಅಹೀತಕರ ಘಟನೆ ನಡೆಯದಂತೆ ಎಲ್ಲರೊ ಎಚ್ಚರ ವಹಿಸಬೇಕು. ಅಂತಹ ಪ್ರಸಂಗ ಬಂದಾಗ ವಿದ್ಯಾಥರ್ಿಗಳು ಕೂಡಲೇ ಪ್ರಾಚಾರ್ಯರರ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕೆಂದು ತಹಶೀಲದಾರ ತಿಳಿಸಿ, ಯಾವುದೇ ದುರ್ಘಟನೆ ತಡೆಗಟ್ಟ ಬೇಕಾದರೇ ವಿದ್ಯಾಥರ್ಿಗಳ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯವಿದೆ ಎಂದು ಅವರು ತಿಳಿಸಿದರು.

   ಸಮಿತಿಯ ಇನ್ನೋರ್ವ ಸದಸ್ಯ ಹಾಗೂ ಪತ್ರಕರ್ತ ಅಶೋಕ ಕುಲಕಣರ್ಿ ಮಾತನಾಡಿ, ಸಂಸ್ಥೆಯ ಕಾಯರ್ಾಧ್ಯಕ್ಷ ವೀರಣ್ಣ ಚರಂತಿ ಮಠನವರ ನೇತೃತ್ವದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿ ನಡೆದಿದ್ದು, ವಿದ್ಯಾಥರ್ಿಗಳ ಶ್ರೇಯೋಭಿವೃದ್ಧಿಗಾಗಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆಂದು ತಿಳಿಸಿದರು.

      ಸಮಿತಿ ಅಧ್ಯಕ್ಷ ಹಾಗೂ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಮುಗ್ಧ ಹಾಗೂ ಆದರ್ಶರಾಗಿದ್ದು, ಇಲ್ಲಿಯವರೆಗೆ ಯಾವುದೇ ಅಹೀತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಇದಕ್ಕೆ ಎಲ್ಲ ಉಪನ್ಯಾಸಕರು ಹಾಗೂ ತಾಲೂಕಾ ಆಡಳಿತವೇ ಕಾರಣವೆಂದು ಹೇಳಿದರು.

     ವೇದಿಕೆಯ ಮೇಲೆ ಪಿಎಸ್ಐ ಶ್ರೀಶೈಲ ಬ್ಯಾಕೋಡ, ಸದಸ್ಯ ಪಾಂಡಪ್ಪ ನಿಶಾನಿ, ಪತ್ರಕರ್ತ ಬಿ.ಎಚ್.ಬೀಳಗಿ ..ಹೋರಾಟ ಸಮಿತಿ ಪ್ರ.ಕಾ. ನಾಗೇಶ ಗೋಲಬಾವಿ, ಗೀತಾ ಜಿರಲಿ, ವೀರಭದ್ರ ಭದ್ರೆ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾಥರ್ಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಕಾರ್ಯದಶರ್ಿ ಪಾಂಡುರಂಗ ಪಾಟೀಲ ಸ್ವಾಗತಿಸಿ, ವಂದಿಸಿದರು,