ಲೋಕದರ್ಶನ ವರದಿ
ಅಥಣಿ 20: ಸರಕಾರದ ಆದೇಶದಂತೆ, ಸೌಲಭ್ಯ ಅರಸಿ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆಯಡಿ ಅಜರ್ಿ ಸಲ್ಲಿಸುವ ರೈತರು ಯಾವುದೇ ಅಧಿಕಾರಿಗಳಿಗೆ ಹಣ ನೀಡುವ ಅವಶ್ಯಕತೆಯಿಲ್ಲ.
ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಟ್ಟರೆ ನನಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಥಣಿ ಸಿಡಿಪಿಒ ನೋಡಲ್ ಅಧಿಕಾರಿ ಉದಯಗೌಡ ಪಾಟೀಲ ತಿಳಿಸಿದ್ದಾರೆ. ಇಂದು ತೆಲಸಂಗ ಗ್ರಾಮದ ನಾಡಕಚೇರಿಗೆ ಭೇಟಿ ನೀಡಿ ಅಜರ್ಿ ಸಲ್ಲಿಸುತ್ತಿದ್ದ ರೈತರೊಂದಿಗೆ ಚಚರ್ಿಸಿ ನಂತರ ಮಾತನಾಡಿದ ಅವರು ಅಜರ್ಿ ಸಲ್ಲಿಸಲು ಜೂ 30 ಕೋನೆ ದಿನವಾಗಿದೆ. ರೈತರಿಗೆ ಅಗತ್ಯ ಮಾಹಿತಿ ನೀಡುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತದೆ.
ಪಹಣಿ ಪತ್ರದಲ್ಲಿ ಹೆಸರು ಹೊಂದಿದ್ದವರೆಲ್ಲರೂ ಪ್ರತ್ಯೇಕ ಅಜರ್ಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು ಎಂದರು. ಉಪತಹಸೀಲದಾರ ಸಿ ಎಸ್ ಕಬಾಡೆ ಮಾತನಾಡಿದರು. ಗ್ರಾಮ ಲೆಕ್ಕಾಧಿಕಾರಿ ಪಿ ಡಿ ಬಡಿಗೇರ ಗ್ರಾ.ಪಂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.