ಲೋಕದರ್ಶನ ವರದಿ
ರಾಣೇಬೆನ್ನೂರು21: ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ಅಹ್ಮದ್ಖಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಹತಾಶೆತನ ಎದ್ದು ಕಾಣುತ್ತದೆ. ಶೀಘ್ರವೇ ಅವರು ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಸಂಸದ ಹಾಗೂ ಬಿಜೆಪಿ ಅಭ್ಯಥರ್ಿ ಶಿವಕುಮಾರ ಉದಾಸಿ ಹೇಳಿದರು.
ರವಿವಾರ ನಗರದ ಬಿಜೆಪಿ ಕಾಯರ್ಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಮಾಜದ ಮಹಿಳೆಯರನ್ನು ಗೌರವದಿಂದ ಕಾಣುವ ದೇಶದ ಚೌಕಿದಾರ ನರೇಂದ್ರ ಮೋದಿಜಿಯವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಲು ಜಮೀರ್ಗೆ ಯಾವುದೇ ನೈತಿಕತೆ ಇಲ್ಲ ಹಾಗೂ ಸಂಸ್ಕೃತಿ ಸಂಸ್ಕಾರ ಇಲ್ಲವೆಂದು ಉದಾಸಿ ವ್ಯಂಗ್ಯವಾಡಿದರು.
ಒಬ್ಬ ಹೆಂಡತಿಯನ್ನು ನೋಡದ ದೇಶದ ಪ್ರಜೆಗಳನ್ನು ಹೇಗೆ ನೋಡುತ್ತಾರೆ? ಮೋದಿಯು ತನ್ನ ಹೆಂಡತಿ ಮುಖ ಚೆನ್ನಾಗಿಲ್ಲದ್ದಕ್ಕೆ ಅವರನ್ನು ಬಿಟ್ಟಿದ್ದಾರೆ ಎಂಬ ಜಮೀರ್ ಹೇಳಿಕೆ ಅವರ ಸಂಸ್ಕೃತಿ ಮೀರಿ ಮಾನಸಿಕ ಹೇಳಿಕೆ ನೀಡಿರುವುದು ಅವರ ಮೂರ್ಖತನವಾಗಿದೆ. ಇದನ್ನೆಲ್ಲ ನೋಡಿದರೆ ಜಮೀರ್ ಅವರು ಮಾನಸಿಕ ಅಸ್ವಸ್ಥರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಲೇವಡಿ ಮಾಡಿದರು.
ಇಡೀ ವಿಶ್ವವೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ಸಾಧನೆಗಳನ್ನು ಮುಕ್ತಕಂಠದಿಂದ ಹಾಡಿಹೊಗಳುತ್ತಿವೆ. ಆದರೆ ತನ್ನ ಹಾಗೂ ತನ್ನ ಮನೆತನದ ಸಂಸ್ಕೃತಿಯನ್ನೂ ಸಹ ಅರಿಯದೆ ಮೋದಿಜಿಯವರ ಹಾಗೂ ಅವರ ಹೆಂಡತಿ ಬಗ್ಗೆ ಮಾತನಾಡುವ ಜಮೀರ್ ಎಂದರೆ ಆತ್ಮ ಅಂತಃಕರಣ ಎಂದು ಅಥರ್ೈಸಲಾಗುತ್ತದೆ. ಇದನ್ನು ಜಮೀರ್ ಅವರು ಅರ್ಥ ಮಾಡಿಕೊಳ್ಳಬೇಕೆಂದರು.
ಜಮೀರ್ ಎಂಬ ಹೆಸರನ್ನು ಇಟ್ಟುಕೊಂಡು ದೇಶದ ಪ್ರಧಾನಮಂತ್ರಿ ಬಗ್ಗೆ ಹಗುರವಾಗಿ ಮಾತನಾಡುವ ಇವರನ್ನು ಅವರ ತಂದೆ ತಾಯಿಯೇ ಕಾಪಾಡಬೇಕು. ಇಂತಹ ಮಾನಸಿಕ ಸ್ಥಿತಿ ಸರಿ ಇಲ್ಲದವರು, ಸಚಿವರಾಗಲಿ, ಶಾಸಕರಾಗಲಿ ಹಾಗೂ ಯಾವುದೇ ಜನಪ್ರತಿನಿಧಿಗಳು ಆಗಬಾರದು. ಇಂತವರ ಬಗ್ಗೆ ಚುನಾವಣಾ ಆಯೋಗವು ಸೂಕ್ಷ್ಮವಾಗಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಶಾಸಕ ಹರೀಶ ಪುಂಜಾ, ರಾಮಣ್ಣ ಕೋಲಕಾರ, ಪ್ರಕಾಶ ಬುರಡಿಕಟ್ಟಿ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಭಾರತಿ ಅಳವಂಡಿ, ಭಾರತಿ ಜಂಬಗಿ, ಮಂಜುಳಾ ಹತ್ತಿ, ರೂಪಾ ಬಾಕಳೆ, ಗಂಗಮ್ಮ ಹಾವನೂರು, ಉಮೇಶಣ್ಣ ಹೊನ್ನಾಳಿ, ಎ.ಬಿ.ಪಾಟೀಲ, ಗುರುರಾಜ ತಿಳವಳ್ಳಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.