ಜನನ ಮರಣ ನೋಂದಣಿಗೆ ವಿಳಂಬಕ್ಕೆ ಆಸ್ಪದವಿಲ್ಲ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಗದಗ 27: ಜನನ ಮರಣ ಮತ್ತು ನಿರ್ಜಿವ ನೊಂದಣಿ ಕಾರ್ಯವು ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಾನಮಾನದ ಸುರಕ್ಷತೆಗೆ ಅತ್ಯಂತ ಪ್ರಮುಖವಾಗಿದ್ದು  ವಿಳಂಬಕ್ಕೆ ಆಸ್ಪದೆ ನೀಡದಂತೆ ಕಾರ್ಯ ನಿರ್ವಹಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜನನ ಮರಣ ಮತ್ತು ನಿಜರ್ೀವ ಜನನ ನೊಂದಣಿಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ನೋಂದಣಿ ಸಮಯದಲ್ಲಿ ಹೆಸರು ಹಾಗೂ ಇತರೆ ದಾಖಲೆಗಳನ್ನು ಗಣಕೀಕೃತ ಮಾಡುವಂತಹ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ನಮೂದಿಸಬೇಕು.  ನೊಂದಣಿ ಸಮಯದಲ್ಲಿ ಬಳಸಲಾಗುವ ನಮೂನೆ 1 ಹಾಗೂ 2 ರನ್ನು ಭತರ್ಿ ಮಾಡಿ ನಮೂನೆ 2ನ್ನು ನಿಗದಿತ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಅಥವಾ ಕಚೇರಿಗೆ ಒದಗಿಸಬೇಕು. ಜನನ-ಮರಣ ನೋಂದಣಿ ಮಾಡುವಂತಹ ಗ್ರಾಮ ಲೆಕ್ಕಾಧಿಕಾರಿಗಳ ಹಾಗೂ ವೈದ್ಯಾಧಿಕಾರಿಗಳಿಗೆ ಡಿಜಿಟಲ್ ಕೀ ಮ್ಯಾಪಿಂಗ ಕಾರ್ಯವನ್ನು ಆದಷ್ಟು ಶೀಘ್ರವೇ ಜರುಗಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಸಭೆ ಜರುಗಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್. ಜಿಲ್ಲಾ  ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಗದಗ ತಹಶೀಲ್ದಾರ ಶ್ರೀನಿವಾಸಮೂತರ್ಿ ಕುಲಕರ್ಣಿ ಸೇರಿದಂತೆ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.