ಅಟ್ಲಾಂಟಾ, ಆ 22 ಮುಂಬರುವ ಯುಎಸ್ ಓಪನ್ ಟೂರ್ನಿಯಲ್ಲಿ ಅಮೆರಿಕದ ಸೆರೇನಾ ವಿಲಿಯಮ್ಸ್ ಹಾಗೂ ವಿನಸ್ ವಿಲಿಯಮ್ಸ್ ಅವರ ಪಂದ್ಯಗಳಲ್ಲಿ ಕಾರ್ಲೋಸ್ ರೊಮೋಸ್ ಅವರು ಚೇರ್ ಅಂಪೈರ್ ಆಗಿ ಕಾರ್ಯನಿರ್ವಹಿಸುವುದಿಲ್ಲ.
ಕಳೆದ ವರ್ಷ ಸೆರೇನಾ ವಿಲಿಯಮ್ಸ್ ಹಾಗೂ ನವೋಮಿ ಒಸಾಕ ಅವರ ನಡುವಿನ ಯುಎಸ್ ಓಪನ್ ಫೈನಲ್ ಹಣಾಹಣಿಯಲ್ಲಿ ಕಾರ್ಲೋಸ್ ರೊಮೋಸ್ ಅವರು ಚೇರ್ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದರು. ಈ ಪಂದ್ಯದಲ್ಲಿ ಜಪಾನ್ನ ನವೋಮಿ ಒಸಾಕ ಅವರು ಸೇರೇನಾ ವಿಲಯಮ್ಸ್ ಅವರನ್ನು ಮಣಿಸಿ ಚಾಪಿಯನ್ ಆಗಿದ್ದರು. ಆದರೆ, ಈ ಪಂದ್ಯದಲ್ಲಿ ವಿವಾದ ಸೃಷ್ಟಿಯಾಗಿತ್ತು.
ಕಾರ್ಲೋಸ್ ರೊಮೋಸ್ ಅವರು ಒಸಾಕಗೆ ಅನುಕೂಲಕರ ರೀತಿಯಲ್ಲಿ ತೀಪು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸೆರೇನಾ ವಿಲಿಯಮ್ಸ್ 'ಕಳ್ಳ' ಜರಿದಿದ್ದರು.
ಒಸಾಕ ಹಾಗೂ ಸೆರೇನಾ ವಿಲಿಯಮ್ಸ್ ಅವರು ಇತ್ತೀಚೆಗೆ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಚೇತರಿಸಿಕೊಂಡು ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾನ್ ಸ್ಲ್ಯಾಮ್ಗೆ ಕಣಕ್ಕೆ ಇಳಿಯುತ್ತಿದ್ದಾರೆ.
ನವೋಮಿ ಒಸಾಕ ಅವರು ಪ್ರಸ್ತುತ ಟೂರ್ನಿಯಲ್ಲಿ ಅಗ್ರ ಸ್ಥಾನ ಪಡೆದರೆ, ಸೇರೇನಾ ವಿಲಿಯಮ್ಸ್ ಅವರು ಎಂಟನೇ ಶ್ರೇಯಾಂಕ ಪಡೆದಿದ್ದಾರೆ. ಯುಎಸ್ ಓಪನ್ 26 ರಂದು ಆರಂಭವಾಗಲಿದ್ದು, ಇಂದು ತಡವಾಗಿ ಡ್ರಾ ಪ್ರಕ್ರಿಯೆ ನಡೆಯಲಿದೆ.