ಬಂಧಿತರು ಮತ್ತು ನಕ್ಸಲರ ನಂಟಿನ ಬಗ್ಗೆ ಪುರಾವೆ ಇದೆ

ಮುಂಬೈ 31: ನಿಷೇಧಿತ ಮಾವೋವಾದಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಬಗ್ಗೆ ನಿಖರ ಪುರಾವೆ ಸಿಕ್ಕಿದ ನಂತರವೇ ಐವರು ಹೋರಾಟಗಾರರನ್ನು ಬಂಧಿಸಲಾಗಿತ್ತು. ಅಲ್ಲದೇ ರಾಜೀವ್ ಗಾಂಧಿ ರೀತಿ ಹತ್ಯೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವುದಾಗಿ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ರೋನಾ ವಿಲ್ಸನ್ ಮತ್ತು ಸಿಪಿಐ(ಮಾವೋವಾದಿ) ಮುಖಂಡರ ನಡುವಿನ ಇ ಮೇಲ್ ನಲ್ಲಿ ಮೋದಿ ರಾಜ್ ವಿತ್ ಎ ರಾಜೀವ್ ಗಾಂಧಿ ರೀತಿ ಘಟನೆ ಎಂಬರ್ಥದಲ್ಲಿ ಉಲ್ಲೇಖಿಸಿರುವುದಾಗಿ ಮಹಾರಾಷ್ಟ್ರ ಪೊಲೀಸ್ ಹೆಚ್ಚುವರಿ ಪೊಲೀಸ್ ಮಹಾ ನಿದರ್ೆಶಕ ಪರಂಬೀರ್ ಸಿಂಗ್ ಸುದ್ದಿಗಾರರ ಜೊತೆ ಮಾತನಾಡುತ್ತ ವಿವರಿಸಿದ್ದಾರೆ. 

ಇ ಮೇಲ್ ನಲ್ಲಿ ಗ್ರೆನೇಡ್ ಹಾಗೂ ಲಾಂಚರ್ ಖರೀದಿಗೂ ಹಣದ ಅವಶ್ಯಕತೆ ಇದೆ ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.  ಅಷ್ಟೇ ಅಲ್ಲ  ಪಾಸ್ ವಡರ್್ ಹೊಂದಿರುವ ಹಾಡರ್್ ಡ್ರೈವ್ ಸಿಕ್ಕಿದ್ದು, ಅದರಲ್ಲಿಯೂ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ. 

ನಗರವಾಸಿಗಳಾಗಿರುವ ಹಾಗೂ ರಹಸ್ಯವಾಗಿರುವ ಮಾವೋವಾದಿಗಳ ನಡುವೆ ನಡೆಸಲ್ಪಟ್ಟ ಸಾವಿರಾರು ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಕೆಲವು ಪತ್ರಗಳು ಬಂಧಿತ ಕಾರ್ಯಕರ್ತರ ನಡುವೆ ನಡೆದ ಪತ್ರ ವ್ಯವಹಾರವೂ ಸೇರಿದೆ. ಏನಾದರೂ ದೊಡ್ಡ ನಿಧರ್ಾರ ಕೈಗೊಳ್ಳಬೇಕಾಗಿದೆ ಎಂಬರ್ಥದ ಪತ್ರಗಳು ದೊರಕಿರುವುದಾಗಿ ಹೇಳಿದರು. 

ಇತ್ತೀಚೆಗಷ್ಟೇ ಪೊಲೀಸರು ಹೈದರಬಾದ್ ನಲ್ಲಿದ್ದ ಕ್ರಾಂತಿಕಾರಿ ತೆಲುಗು ಕವಿ ವರವರ ರಾವ್ ಅವರ ನಿವಾಸ ಸೇರಿದಂತೆ, ಸಾಮಾಜಿಕ ಕಾರ್ಯಕರ್ತರಾದ ವೆನರ್ೂನ್ ಗೋನ್ಸಾಲ್ವೆಸ್, ಅರುಣ್ ಫರೇರಾ ಮುಂಬೈ, ಕಾಮರ್ಿಕ ಸಂಘಟನೆಯ ಕಾರ್ಯಕತರ್ೆ ಸುಧಾ ಭಾರದ್ವಾಜ್ ಫರಿದಾಬಾದ್, ನವದೆಹಲಿಯ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಾಲಾಖ್ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದರು.