ಕಾಲೇಜಿನ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಇದೆ: ಶಾಸಕ ಗಣೇಶ್

ಕಂಪ್ಲಿ 11: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯವುದರ ಜೊತೆಗೆ ಉನ್ನತ ಹುದ್ದೆಯನ್ನು ಪಡೆದು ಕೊಂಡಾಗ ಮಾತ್ರ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನವಿವಿಧಸಮಿತಿಗಳಕಾರ್ಯಕ್ರಮಉದ್ಘಾಟಸಿ ಮಾತನಾಡಿ.    ಕಬಡ್ಡಿಪಂದ್ಯಾವಳಿ ಸಮಯದಲ್ಲಿ ಇದೇ ಕಾಲೇಜಿನಲ್ಲಿ ನಾನು 14 ದಿನಗಳು ತಂಗಿದ್ದೆ ಮತ್ತು "ಯೂನಿವರ್ಸಿಟಿ ಬೂ"್ಲ ಪ್ರಶಸ್ತಿಯನ್ನು ಪಡೆದೆ ಎಂದು ನೆನೆದು ಸಂತಸಪಟ್ಟರು. 

ಮುಂದುವರೆದು ಕಾಲೇಜಿನ ವಿದ್ಯಾರ್ಥಿ ಜೀವನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿ ಪ್ರತಿಯೊಂದು ಘಳಿಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಭಾಗದಲ್ಲಿ ರೈತಾಪಿ ಕುಟುಂಬದ ಮತ್ತು ಬಡ ಮಕ್ಕಳಿರುವುದರಿಂದ ಈ ಭಾಗದ ಅಭಿವೃದ್ಧಿಯ  ಜವಾಬ್ದಾರಿ ನಮ್ಮ ಮೇಲಿದೆ. ವಿದ್ಯಾರ್ಥಿಗಳಿಗೆ ನಯ-ವಿನಯಗಳಿರಬೇಕೆಂದರು. 

ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ನೆನಪಿಸಿಕೊಳ್ಳುತ್ತಾ ಶಾಸಕನಾಗಿ ಜನಸೇವೆ ಮಾಡುವುದು ನನ್ನ ಕನಸು. ಧೈರ್ಯ ಮತ್ತು ಸಂಕಲ್ಪದಿಂದ ಗುರಿ  ಮುಟ್ಟಲು ಸಾಧ್ಯ. ಪರಿಶ್ರಮದ ಪ್ರಾಮುಖ್ಯತೆ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಕಾಲೇಜಿನ ಆಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಹಿಂದೆ ವಿದ್ಯಾರ್ಥಿಯಾಗಿದ್ದ ವೇಳೆ, ಪಟ್ಟಣಕ್ಕೆ ಕಬಡ್ಡಿ ಪಂದ್ಯಾವಳಿ ಬಂದಾಗ ಇದೇ ಕಾಲೇಜಿನಲ್ಲಿ ತಂಗಿದ್ದೆ ಎಂದು ಹಳೆ ನೆನಪನ್ನು ಸ್ಮರಿಸಿದರು. ಪ್ರಾಂಶುಪಾಲ ಕೆ.ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿದ್ದರು. 

ಜಿ.ಪಂ.ಸದಸ್ಯ ಕೆ.ಶ್ರೀನಿವಾಸರಾವ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಟಗಿ ಬಸವರಾಜಗೌಡ, ಸಹಾಯಕ ಪ್ರಾಧ್ಯಾಪಕರಾದ ಉಪನ್ಯಾಸಕ ಜೆ.ಕೃಷ್ಣ, ಇಂದ್ರಿಪಿ ಮಲ್ಲಿಕಾಜರ್ುನ,  ಗ್ರಂಥಪಾಲಕ  ಕೆ.ಗುರುಮೂತರ್ಿ, ಮಮತಾ ಜಿ.ಎಂ, ರಾಜ್ಮಾ ಟಿ.ಎಂ.ಆರ್, ಡಾ.ಅನ್ನಪೂರ್ಣ ಗುಡುದೂರು, ಅಧೀಕ್ಷಕಿ ರಾಘಮ್ಮ ಇದ್ದರು. ಸಭೆಯಲ್ಲಿ ಸಹಯಕ ಪ್ರಾಧ್ಯಾಪಕ.

ಎಂ.ಎನ್.ಪ್ರವೀಣ್ ಕುಮಾರ್ ಪ್ರಸಕ್ತ ಸಾಲಿನ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿನಿಯರಾದ ದಿವ್ಯಾ, ಮೇಘನಾ, ಪವಿತ್ರಾ, ಸಂದೀಪ್, ಕಲ್ಯಾಣ, ಕೆ.ಸುನೀಲ್ ಕುಮಾರ್, ಮಹಾಲಕ್ಷ್ಮಿ ನಿರ್ವಹಿಸಿದರು.