ಲೋಕದರ್ಶನ ವರದಿ
ಬೆಳಗಾವಿ,24 :ಕಲ್ಲದೇವರಿಗಿಂತ ಕಾಣುವ ದೇವರನ್ನು ಪೂಜಿಸುವ ಸಂಸ್ಕೃತಿಜನಪದರದ್ದು. ಗ್ರಾಮೀಣ ಮಹಿಳೆಯು ಮನೆಯಲ್ಲಿಕಾಣುವಅತ್ತೆ, ಮಾವ ಇವರಲ್ಲಿ ದೇವರನ್ನು ಕಾಣುತ್ತಾಳೆ. ಇದರಿಂದ ಮನೆತನದಲ್ಲಿ ಹೆಚ್ಚಿನ ಸಾಮರಸ್ಯವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಲಿಂಗರಾಜ ಕಾಲೆೇಜ ಇಂಗ್ಲೀಷ ಭಾಷೆಯ ಮುಖ್ಯಸ್ಥೆ ಡಾ. ಗುರುದೇವಿ ಹುಲೆಪ್ಪನವರಮಠ ಇಂದಿಲ್ಲಿ ಹೇಳಿದರು.
ಪೃಥ್ವಿ ಫೌಂಡೇಷನ್ ಮತ್ತುಕನ್ನಡ ಮತ್ತು ಸಂಸ್ಕೃತಿಇಲಾಖೆಯವತಿಯಿಂದಇಂದು24 ನಗರದಕನ್ನಡ ಸಾಹಿತ್ಯ ಭವನದಲ್ಲಿಪೃಥ್ವಿ ಫೌಂಡೇಶನ್ ದ್ವಿತೀಯ ವಾಷರ್ಿಕೋತ್ಸವ ಹಾಗೂ ಸಾಂಸ್ಕೃತಿಕ ಸೌರಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರುಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಗುರುದೇವಿ ಹುಲೆಪ್ಪನವಮಠ ಮೇಲಿನಂತೆಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತಡಾ. ಗುರುದೇವಿಯವರು ಶಿಕ್ಷಣವನ್ನು ಪಡೆಯದ ಗ್ರಾಮೀಣ ಜಾನಪದಿಯರು ಅದ್ಭುತ ಸಾಹಿತ್ಯವನ್ನು ಕೊಟ್ಟಿದ್ದಾರೆ. ಅವರ ಸಹಜ ಭಾಷೆಯಲ್ಲಿ ಅರ್ಥಗಭರ್ಿತ, ಒಗಟು ಮಾದರಿಯ ಮಾತುಗಳಿರುತ್ತವೆ. ಅಲ್ಲಿದೇ ಗ್ರಾಮೀಣ ಜನರದ್ದು ಹೃದಯ ತುಂಬಿದ ಆದರಾತಿಥ್ಯವನ್ನು ನಾವು ಕಾಣುತ್ತೇವೆ ಎಂದು ಹೇಳಿದರು.
ರಾಷ್ಟ್ರಪ್ರಶಸ್ತಿ ವಿಭೂಷಿತ ಶಿಕ್ಷಕಿ ಶಾಂತಾತಾಯಿ ಹುಲೆಪ್ಪನವರಮಠ ಗಿಡಕ್ಕೆ ನೀರೇಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಹೇಮಾವತಿ ಸೊನೊಳ್ಳಿ ದೇಶದ ಸಂಸ್ಕೃತಿ ಉಳಿಯಬೇಕಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಸಂಗೀತ, ಸಾಹಿತ್ಯ, ನೃತ್ಯಮುಂತಾದ ಸಾಂಸ್ಕೃತಿಕ ಹಮ್ಮಿಕೊಳ್ಳುವುದರ ಮೂಲಕ ಬೆಳಗಾವಿಯ ಸಾಂಸ್ಕೃತಿಕ ವಾತವರಣ ನಿಮರ್ಿಸುತ್ತಿದೆ ಎಂದು ಹೇಳಲು ಅಭಿಮಾನವೆನಿಸುತ್ತದೆ ಎಂದು ಹೇಳಿದರು.
ಗುರುಕಾರುಣ್ಯ ನಾಟ್ಯಾಲಯದ ಪ್ರತೀಕ್ಷಾ ಹಿರೇಮಠಇವರಿಂದ ನೃತ್ಯಜರುಗಿತು. ಶಾಂತಾತಾಯಿ ಹುಲೆಪ್ಪನವರಮಠ, ಗುರುದೇವಿ ಹುಲೆಪ್ಪನವರಮಠ, ಜಯಶ್ರೀ ನಿರಾಕಾರಿ, ಲಲಿತಾಕ್ಯಾತನವರ, ಸುನಂದಾಎಮ್ಮಿ, ಮಹಾದೇವಿ ಹಿರೇಮಠ, ಶೈಲಜಾ ಹಿರೇಮಠ, ಪಾರ್ವತಿ ಪಾಟೀಲ, ಎಮ್. ವಾಯ್ ಸನ್ಮಾನಿಸಿ ಗೌರವಿಸಲಾಯಿತು.
ಪಾರ್ವತಿ ಪಾಟೀಲ ಸ್ವಾಗತಿಸಿದರು. ಶೈಲಜಾ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಯಮಕನಮಡರ್ಿ ನಿರೂಪಿಸಿದರು. ಭುವನೇಶ್ವರಿ ಪೂಜೇರಿ ವಂದಿಸಿದರು.