ಲೋಕದರ್ಶನವರದಿ
ಮಹಾಲಿಂಗಪುರ೨೮: ಪತ್ರಿಕೋದ್ಯಮದಲ್ಲಿ ಹಲವಾರು ವೃತ್ತಿ ಅವಕಾಶಗಳಿದ್ದು, ಧೈರ್ಯ, ಜ್ಞಾನ, ವೇಗವಾಗಿ ಕೆಲಸ ಮಾಡುವ ಆಸಕ್ತಿಯನ್ನು ಪತ್ರಿಕೋದ್ಯಮ ವಿದ್ಯಾಥರ್ಿಗಳು ಹೊಂದಿರಬೇಕು ಎಂದು ಪತ್ರಕರ್ತ ಚಂದ್ರು ಹಿರೇಮಠ ಹೇಳಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ದಿನಪತ್ರಿಕೆಗಳಲ್ಲಿ ವರದಿಗಾರಿಕೆಯ ವಿಭಾಗ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದರು.
ಪತ್ರಕರ್ತ ನೇರ, ನಿಖರ, ಸ್ಪಷ್ಟವಾಗಿ ಜನರಿಗೆ ಮನವರಿಕೆಯಾಗುವ ಹಾಗೆ ಸುದ್ದಿಯನ್ನು ಓದುವರಿಗೆ ತಲುಪಿಸಬೇಕು. ಪತ್ರಕರ್ತ ಯಾವುದೇ ಗೊಂದಲಕ್ಕೆ, ಆಸೆ-ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕನಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿರುಪಾಕ್ಷ ಅಡಹಳ್ಳಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪೂಜಾ ಕಲ್ಯಾಣಶೆಟ್ಟಿ, ಇತಿಹಾಸ ಉಪನ್ಯಾಸಕ ಟಿ.ಡಿ.ಡಂಗಿ ಹಲವರು ಇದ್ದರು.