ನವದೆಹಲಿ,
ಡಿ 28, ಭಾರತದಲ್ಲಿ ಪ್ರತಿಯೊಬ್ಬರು ಸಮಸ್ಯೆೆ ಬಗ್ಗೆೆ ಹೇಳುತ್ತಾರೆ. ಆದರೆ, ಅದಕ್ಕೆೆ ಪರಿಹಾರ ನೀಡುವುದಿಲ್ಲ
ಎಂದು ಟೀಮ್ ಇಂಡಿಯಾ ಹಿರಿಯ ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ.ಶನಿವಾರ ರಣಜಿ ಟ್ರೋಫಿ ಪಂದ್ಯದಲ್ಲಿ
ಹೈದರಾಬಾದ್ ವಿರುದ್ಧ ದೆಹಲಿ ತಂಡ ಏಳು ವಿಕೆಟ್ ಗಳಿಂದ ಜಯ ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ಇಶಾಂತ್
ಶರ್ಮಾ ಅವರು, ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ಸದ್ಯ ಭಾರತ ತಂಡದಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ವಿಭಾಗವಿದೆ.
ನಾನು ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಖುಷಿಯಿಂದ ಆಡಲು ಬಯಸುತ್ತೇನೆ. ಭಾರತದ ಮಾಜಿ ವೇಗಿ ಜಹೀರ್
ಖಾನ್ ಹಾಗೂ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ನಾನು ಹೋಲಿಕೆ ಮಾಡುತ್ತಿಲ್ಲ. ಅವರು ದೇಶಕ್ಕೋಸ್ಕರ
ಆಡಿದ್ದಾರೆ. ನನ್ನ ಅನುಭವದಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.‘‘ಕ್ರಿಕೆಟ್
ವೃತ್ತಿ ಜೀವನದ ಅನುಭವವನ್ನು ನಾನು ಕಿರಿಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದರ ಪರಿಣಾಮ
ದೆಹಲಿ ತಂಡಕ್ಕೆೆ ಮತ್ತೊರ್ವ ವೇಗಿ ಆಡಿದ್ದೇ ಆದಲ್ಲಿ ಹೆಮ್ಮೆಯಾಗಲಿದೆ,’’ ಎಂದರು.‘‘ಭಾರತದಲ್ಲಿ ಸಮಸ್ಯೆೆ
ಮಾತ್ರ ಎಲ್ಲರು ಗುರುತಿಸುತ್ತಾರೆ. ಆದರೆ, ಅದಕ್ಕೆೆ ಪರಿಹಾರ ಮಾತ್ರ ಯಾರೂ ಸೂಚಿಸುವುದಿಲ್ಲ. ಒಬ್ಬರು
ಅಥವಾ ಇಬ್ಬರು ಮಾತ್ರ ಪರಿಹಾರ ಸೂಚಿಸುತ್ತಾರೆ. ಅತ್ಯುತ್ತಮ ಕೋಚ್ ಮಾತ್ರ ಸಮಸ್ಯೆೆಗೆ ಪರಿಹಾರ ಸೂಚಿಸುತ್ತಾರೆ.
ಜಹೀರ್ ಖಾನ್ ಕೂಡ ನನಗೆ ಪರಹಾರ ಸೂಚಿಸಿದ್ದಾರೆ. ಫುಲ್ ಹಾಕುವ ಎಸೆತಗಳಲ್ಲಿ ಇನ್ನಷ್ಟು ವೇಗ ಹೆಚ್ಚಿಸಬೇಕೆಂದು
ಹಲವರು ಸಲಹೆ ನೀಡಿದ್ದರು. ಆದರೆ, ಹೇಗೆ ಮಾಡಬೇಕೆಂದು ಸೂಚಿಸಿರಲಿಲ್ಲ. ಕೌಂಟಿ ಕ್ರಿಕೆಟ್ ಆಡುವಾಗ
ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್ ಗಿಲೆಸ್ಪಿ ನನ್ನ
ಸಮಸ್ಯೆೆಗೆ ಪರಿಹಾರ ನೀಡಿದ್ದಾರೆ. ಹೇಗೆ ವೇಗವನ್ನು ಹೆಚ್ಚು ಮಾಡಬೇಕೆಂದು ಇದೀಗ ನನಗೆ ಅರಿವಾಗಿದೆ,’’
ಎಂದು ಇಶಾಂತ್ ಶರ್ಮಾ ತಿಳಿಸಿದ್ದಾರೆ.